ಜೂನ್ 1 ರಂದು ನಿಧನರಾದ ವಾಜಿದ್ ಖಾನ್ ತಾಯಿಗೆ ಕೊರೊನಾ ಪಾಸಿಟಿವ್
ನಿನ್ನೆ (ಜೂನ್ 1) ನಿಧನರಾದ ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಅವರ ತಾಯಿಗೆ ಕೊರೊನಾ ಪಾಸಿಟಿವ್ ಆಗಿದೆ.
Recommended Video
ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿನ್ನೆ ನಸುಕಿನ ವೇಳೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು. ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು, ಜೊತೆಗೆ ಮೂತ್ರಪಿಂಡ ಸೋಂಕಿನಿಂದಾಗಿಯೂ ಬಳಲುತ್ತಿದ್ದರು.
ಇದೀಗ ವಾಜಿದ್ ಖಾನ್ ಅವರ ತಾಯಿ ಅವರಿಗೂ ಕೊರೊನಾ ವೈರಸ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ತಮ್ಮ ಮಗ ವಾಜಿದ್ ಖಾನ್ ಗೆ ಆರೋಗ್ಯ ಸರಿಯಿಲ್ಲದಾಗ ಅವರನ್ನು ನೋಡಿಕೊಳ್ಳಲೆಂದು ತಾಯಿ ರಾಜಿನಾ ಖಾನ್ ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ಹಾಗಾಗಿ ಅವರಿಗೂ ಸೋಂಕು ತಗುಲಿದೆ.

ರಾಜಿನಾ ಖಾನ್ ಅನ್ನು ಸುರಾನಾ ಸೆತಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಸ್ತುತ ಆಕೆ ಸಾಮಾನ್ಯ ಸ್ಥಿತಿಯಲ್ಲಿಯೇ ಇದ್ದಾರೆ.
ವಾಜಿದ್ ಖಾನ್ ಅವರ ಅಂತಿಮ ಕ್ರಿಯೆಯನ್ನು ವರ್ಸೋನಾ ದಲ್ಲಿ ಮಾಡಲಾಯಿತು. ಇತ್ತೀಚೆಗೆ ನಿಧನರಾದ ಇರ್ಫಾನ್ ಖಾನ್ ಸಮಾಧಿಯ ಪಕ್ಕದಲ್ಲಿಯೇ ವಾಜಿದ್ ಖಾನ್ ಸಹ ಮಣ್ಣಾಗಿದ್ದಾರೆ. ಅವರ ಅಂತಿಮ ಕ್ರಿಯೆಯಲ್ಲಿ ಕೆಲವೇ ಆಪ್ತರು ಮತ್ತು ಕುಟುಂಬ ವರ್ಗದವರು ಸೇರಿದ್ದರು.


Click it and Unblock the Notifications











