India vs USA T20 World Cup ; ಸೂರ್ಯಕುಮಾರ್ ಯಾದವ್ ಸಿಕ್ಸ್- ಎಲ್ಲರ ಕಣ್ಣು ಕುಕ್ಕಿದ ಈ ಸುಂದರಿ ಯಾರು ? ಹಿನ್ನೆಲೆ ಏನು ?
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ ಇಂಥಾ ಸಾಮಾಜಿಕ ಜಾಲತಾಣ ಕೆಲ ಒಮ್ಮೆ ಕೆಲವರ ಬದುಕನ್ನೂ ಹಾಳ ಮಾಡಬಹುದು. ಮತ್ತೂ ಕೆಲವೊಮ್ಮೆ ಬದುಕನ್ನೇ ಬದಲಿಸಬಹುದು. ಉದಾಹರಣೆಗೆ ತನ್ವಿ ಗಡ್ಕರಿ ಅವರನ್ನೇ ತೆಗೆದುಕೊಳ್ಳಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಭಾರತದಲ್ಲಿ ಟಿ20 ವಿಶ್ವಕಪ್ ಜ್ವರ ಹಬ್ಬಿದೆ. 20 ತಂಡಗಳು ಒಂದು ಟ್ರೋಫಿಗಾಗಿ ಸೆಣಸಾಡುತ್ತಿವೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಆ ಪೈಕಿ ಹಾಲಿ ಚಾಂಪಿಯನ್ ಆದ ಭಾರತ ಈಗಾಗಲೇ ಆರಂಭಿಕ ಪಂದ್ಯವನ್ನಾಡಿದೆ. ಯುಎಸ್‌ಎ ತಂಡದ ವಿರುದ್ಧ ಗೆದ್ದು ಬೀಗಿದೆ.

ನಿಜಾ ಅವತ್ತು ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಇರದಿದ್ದರೆ ಕಥೆ ಏನಾಗುತ್ತಿತ್ತು ಗೊತ್ತಿಲ್ಲ. ಆದರೆ.. ಈ ಪಂದ್ಯ ಸದ್ಯ ತನ್ವಿ ಗಡ್ಕರಿ ಅವರ ಬದುಕಿನ ಕಥೆ ಬದಲಿಸಿದೆ. ಭಾರತದೆಲ್ಲೆಡೆ ಪಡ್ಡೆಹುಡುಗರ ವಲಯದಲ್ಲಿ ಸದ್ಯ ತನ್ಮಿ ಗಡ್ಕರಿ ನಾಮ ಸ್ಮರಣೆ ನಡೆಯುತ್ತಿದೆ.
ಹೌದು, ಅಸಲಿಗೆ 77 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದಾಗ ಇನ್ನೇನು ಭಾರತ ಈ ಪಂದ್ಯದಲ್ಲಿ ಸೋಲುತ್ತೇ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮತ್ತೊಂದು ಬದಿಯಲ್ಲಿದ್ದ ಸೂರ್ಯ ಕುಮಾರ್ ಯಾದವ್ ಇದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ತಮ್ಮ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಆಡುತ್ತಿದ್ದರು.
ಇದೇ ಸಮಯದಲ್ಲಿ ಸೂರ್ಯ ಕುಮಾರ್ ಯಾದವ್ ತಮ್ಮ ಪ್ರಸಿದ್ದವಾದ ''ಸುಪ್ಲಾ ಶಾಟ್''ನ್ನು ಹೊಡೆದರು. ಸಿಕ್ಸರ್ ಸಿಡಿಸಿದರು. ಈ ಸಮಯದಲ್ಲಿ ಪ್ರೇಕ್ಷಕರ ಹರ್ಷೋಲ್ಲಾಸ ಸೆರೆಹಿಡಿಯಲು ಪ್ರೇಕ್ಷಕರ ಗ್ಯಾಲರಿಯತ್ತ ಕ್ಯಾಮರಾ ಕಣ್ಣು ಸರಿದಾಗ ಸೆರೆಯಾದವರೇ ಈ ತನ್ವಿ ಗಡ್ಕರಿ. ಸೂರ್ಯ ಕುಮಾರ್ ಯಾದವ್ ಸಿಕ್ಸರ್ ಹೊಡೆದಾಗ ಗ್ಯಾಲರಿಯಲ್ಲಿದ್ದ ತನ್ವಿ ಕುಣಿದು ಕುಪ್ಪಳಿಸಿದರು. ಇವರ ಈ ಸಂಭ್ರಮಾಚರಣೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು 15 ಸೆಕೆಂಡ್ ಮಾತ್ರ. ಆದರೆ ವೈರಲ್ ಆಗಲು ಅಷ್ಟೇ ಸಾಕಿತ್ತು.
ಇವರ ಹಾವ -ಭಾವ- ಆ ನಗು ಕಂಡು ಹಲವು ಪ್ರೇಕ್ಷಕರು ಇವರಿಗೆ ಕ್ಲೀನ್ ಬೋಲ್ಡ್ ಆದರು. ಹೃದಯ ಗೆದ್ದ ಈ ಸುಂದರಿ ಯಾರೆಂದು ಹುಡುಕಲು ಶುರು ಮಾಡಿದರು. ಪರಿಣಾಮ ಈ ಪಂದ್ಯಕ್ಕೂ ಮುನ್ನ 3 ಲಕ್ಷಕ್ಕೂ ಕಡಿಮೆ ಫಾಲೋವರ್‍ಸ್ ಹೊಂದಿದ್ದ ತನ್ವಿ ಅವರನ್ನು ಇಂದು 326,311ಕ್ಕೂ ಅಧಿಕ ಜನ ಹಿಂಬಾಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಕುರಿತು ಚರ್ಚೆ ಮಾಡುತ್ತಿದ್ದಾರೆ.

ಅಂದ್ಹಾಗೇ ತನ್ವಿ ಗಡ್ಕರಿ, ಬೆಸಿಕಲಿ ನಟಿ. ಡ್ಯಾನ್ಸರ್ ಹಾಗೂ ಡಿಜಿಟಲ್ ಕ್ರಿಯೇಟರ್. ಲೈಫ್‌ಸ್ಟೈಲ್‌ಗೆ ಸಂಬಂಧಿಸಿದಂತೆ ಆಗಾಗ ಪೋಸ್ಟ್ ಮಾಡುವ ತನ್ವಿ ತಮ್ಮ ಬೋಲ್ಡ್ ಫೋಟೊಗಳ ಮೂಲಕ ಕೂಡ ಗಮನ ಸೆಳೆಯುತ್ತಿರುತ್ತಾರೆ. 2023 ರಲ್ಲಿ ಅಮೆಜಾನ್ ಮಿನಿಟಿವಿಯಲ್ಲಿ ಬಿಡುಗಡೆಯಾದ ''ಕ್ಯಾಂಪಸ್ ಬೀಟ್ಸ್'' ಇವರಿಗೆ ಅಪಾರವಾದ ಹೆಸರು ತಂದು ಕೊಡ್ತು. ಇವರ 'ರಿಯಾನಾ' ಪಾತ್ರ ಜನಪ್ರಿಯವಾಯಿತು. ನಂತರ ''ಜಮ್ನಾಪಾರ್'' ಮತ್ತು ''ಪವರ್ ಆಫ್ ಪಂಚ್'' ನಲ್ಲೂ ತನ್ವಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ' 'ಬನ್ಸಿ'' ಮತ್ತು ''ದಿಲ್ ದುಬ್ಡ ಜಾವೆ'' ಸೇರಿದಂತೆ ಅನೇಕ ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆಯನ್ನು ಕೂಡ ಹಾಕಿದ್ದಾರೆ.
ಇನ್ನುಳಿದಂತೆ ತನ್ವಿ ಗಡ್ಕರಿ ತಮ್ಮ ಬದುಕಿನಲ್ಲಿ ಇದೇ ಮೊದಲ ಬಾರಿ ಪಂದ್ಯವೊಂದನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣಕ್ಕೆ ಹೋಗಿದ್ದರು. ಆದರೆ ಪಂದ್ಯ ಮುಗಿದ ನಂತರವೂ ಹಲವರು ಇವರನ್ನು ಸೋಶಿಯಲ್ ಮೀಡಿಯಾ ಮೂಲಕ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಿಕ್ಕ ಈ ಸಡನ್ ಜನಪ್ರಿಯತೆಯಿಂದ ಸದ್ಯ ಖುಷಿಯಾಗಿರುವ ತನ್ವಿ ಮೊದಲ ಬಾರಿ ಮ್ಯಾಚ್ ನೋಡಲು ಹೋಗಿದ್ದೇ ಆ ನಂತರ ನನ್ನ ಡ್ಯಾನ್ಸ್‌ನ್ನ ನಾನೇ ಟಿವಿಯಲ್ಲಿ ನೋಡುವಂತೆ ಆಯ್ತು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋ ಹಾಕಿಕೊಂಡು ಬರೆದುಕೊಂಡಿದ್ದಾರೆ.


Click it and Unblock the Notifications











