ಐಎಸ್‌ಐ ಏಜೆಂಟ್ ಜೊತೆ ಪ್ರೀತಿ, ಪಾಕಿಸ್ತಾನದಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದ ದೇಶದ್ರೋಹಿ ಯೂಟ್ಯೂಬರ್ ಜ್ಯೋತಿ !
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಹೀಗಾಗಿಯೇ ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತದಲ್ಲಿ ಅನೇಕರು ಥರ ಥರಹದ ವೇಷವನ್ನು ಇಲ್ಲಿ ಹಾಕುತ್ತಾರೆ. ಮೋಸ ಮಾಡಲು, ದೇಶಕ್ಕೆ ದ್ರೋಹ ಎಸಗಲು, ತಿಂದ ತಟ್ಟೆಯಲ್ಲಿ ಹೇ*ಲು..
ದಿನನಿತ್ಯ ಒಂದಿಲ್ಲೊಂದು ಹೊಸ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಈ ಮೂಲಕ ಸಮಾಜದ ಕಣ್ಣಿಗೆ ಮಣ್ಣೇರಚಿ ಸಭ್ಯಸ್ಥರಂತೆ ಬದುಕುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಉದಾಹರಣೆಗೆ ಜ್ಯೋತಿ ಮಲ್ಹೋತ್ರಾ.

ಹೌದು, ಜ್ಯೋತಿ ಮಲ್ಹೋತ್ರಾ.. ಭಾರತದವಳಾಗಿ, ಭಾರತದ ವಾತಾವರಣದಲ್ಲಿ ಬೆಳೆದು, ಭಾರತದ ಅನ್ನುವನ್ನು ತಿಂದು, ಪಾಪಿ ಪಾಕಿಸ್ತಾನದ ಜೊತೆ ಕೈ ಜೋಡಿಸಿದ್ದ ಮಹಿಳೆ. ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಮಣ್ಣು ತಿನ್ನುವ ಕೆಲಸವನ್ನು ಮಾಡಿ ಸದ್ಯ ಪೊಲೀಸರ ಅತಿಥಿಯಾಗಿರುವ ಜ್ಯೋತಿ ಮಲ್ಹೋತ್ರಾ ಉಂಡ ಮನೆಗೆ ದ್ರೋಹ ಎಸಗಿದ್ಹೇಗೆ ಎನ್ನುವ ವಿಚಾರ ಈಗ ಒಂದೊಂದಾಗಿಯೇ ಬಯಲಾಗುತ್ತಿವೆ. ಪಾಕಿಸ್ತಾನದ ಸೊಸೆಯಾಗಬೇಕೆನ್ನುವ ಈಕೆಯ ಕನಸು ಈ ಮೂಲಕ ಜಗಜ್ಜಾಹೀರಾಗಿದೆ.
ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ಜ್ಯೋತಿಯ ಜನ್ಮವನ್ನು ಪೊಲೀಸರು ಮತ್ತು ತನಿಖಾ ಅಧಿಕಾರಿಗಳು ಜಾಲಾಡುತ್ತಿದ್ದು, ಇದೇ ಸಮಯದಲ್ಲಿ ಕೆಲ ಕಹಿಸತ್ಯಗಳು ಬಹಿರಂಗವಾಗಿವೆ. ಜ್ಯೋತಿ ಮಲ್ಹೋತ್ರಾ ಐಎಸ್‌ಐಯಿಂದ ಅಧಿಕೃತವಾಗಿ ನೇಮಕ ಮಾಡಲಾಗಿದ್ದ ಗೂಢಚಾರಿಣಿ ಎನ್ನುವ ವಿಚಾರ ಕೂಡ ಪೊಲೀಸ್ ತನಿಖೆಯಲ್ಲಿ ಖಚಿತವಾಗಿದೆ.
ಐಎಸ್‌ಐ ಏಜೆಂಟ್ ಅಲಿ ಹಸನ್ ಜೊತೆಗಿನ ಜ್ಯೋತಿ ಮಲ್ಹೋತ್ರಾ ಮಾಡಿದ್ದ ವಾಟ್ಸಾಪ್ ಚಾಟ್‌ಗಳು ಪೊಲೀಸ್ ತನಿಖೆ ವೇಳೆ ಬಯಲಾಗಿದ್ದು, ಪಾಕಿಸ್ತಾನದಲ್ಲಿ ಮದುವೆಯಾಗಬೇಕೆನ್ನುವ ಕನಸನ್ನು ಜ್ಯೋತಿ ಕಂಡಿದ್ದರು ಎನ್ನುವುದು ಬಹಿರಂಗವಾಗಿದೆ.
ಐಎಸ್‌ಐ ಏಜೆಂಟ್ ಅಲಿ ಹಸನ್ ಪ್ರೇಮಪಾಶದಲ್ಲಿ ಸಿಲುಕಿದ್ದ ಜ್ಯೋತಿ, ಪಾಕಿಸ್ತಾನದಲ್ಲಿ ನನ್ನನ್ನೂ ಮದುವೆಯಾಗು ಎಂದು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಳು ಎಂದು ವರದಿಯಾಗಿದೆ.
ಜ್ಯೋತಿಯ ಈ ಪ್ರೇಮ ನಿವೇದನೆಗೆ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದ ಅಲಿ ಹಸನ್, "ಜೋ (ಜ್ಯೋತಿ), ನೀವು ಯಾವಾಗಲೂ ಸಂತೋಷವಾಗಿರಲು ನಾನು ಪ್ರಾರ್ಥಿಸುತ್ತೇನೆ, ನೀವು ನಗುತ್ತಲೇ ಇರಬೇಕು. ನಿಮ್ಮ ಜೀವನದಲ್ಲಿ ಎಂದಿಗೂ ನಿರಾಶೆಗಳನ್ನು ಎದುರಿಸಬಾರದು" ಎಂದು ಹೇಳಿದ್ದ ಎಂದು NDTV ಸಮೇತ ಅನೇಕ ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಇನ್ನು ಅಲಿ ಹಸನ್ ಮತ್ತು ಜ್ಯೋತಿ ನಡುವೆ ಕೇವಲ ಪ್ರೀತಿಯ ಕುರಿತು ಮಾತ್ರ ಸಂಭಾಷಣೆ ನಡೆದಿರಲಿಲ್ಲ. ಬದಲಿಗೆ ಜ್ಯೋತಿ ಮಲ್ಹೋತ್ರಾ ಮತ್ತು ಅಲಿ ಹಸನ್ ನಡುವೆ ಭಾರತದ ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ಸುದೀರ್ಘವಾದ ಮಾತುಕತೆ ಕೂಡ ನಡೆದಿದೆ. ಇದು ಮಾತ್ರವಲ್ಲದೇ ಜ್ಯೋತಿಯ ಬ್ಯಾಂಕ್ ಖಾತೆಗೆ ದುಬೈನಿಂದ ನಿರಂತರವಾಗಿ ಹಣ ಸಂದಾಯವಾಗಿರುವ ಕುರಿತು ಕೂಡ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಒಟ್ಟು ನಾಲ್ಕು ಬ್ಯಾಂಕ್ ಖಾತೆಗಳನ್ನು ಜ್ಯೋತಿ ಮಲ್ಹೋತ್ರಾ ಹೊಂದಿದ್ದು, ಆ ಪೈಕಿ ಒಂದು ಖಾತೆಯಲ್ಲಿ ದುಬೈನಿಂದ ಹಣದ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ದುಬೈದಿಂದ ಆಕೆ ಹಣ ಪಡೆಯುತ್ತಿದ್ದಿದ್ದು ಯಾಕೆ, ಹಣ ಕಳುಹಿಸುತ್ತಿದ್ದ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ಸದ್ಯ ತಿಳಿಸಿದ್ದಾರೆ.
ಒಟ್ನಲ್ಲಿ ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ಜ್ಯೋತಿ ಮಲ್ಹೋತ್ರಾ ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಕಲೆ ಹಾಕುತ್ತಿದ್ದಳು ಮತ್ತೂ ಆ ಮಾಹಿತಿಗಳನ್ನು ಪಾಕಿಸ್ತಾನದ ಗೂಢಚಾರರೊಂದಿಗೆ ಹಂಚಿಕೊಂಡಿದ್ದಳು ಎನ್ನುವುದು ಪೊಲೀಸ್ ತನಿಖೆ ವೇಳೆ ಸ್ಪಷ್ಟವಾಗಿದೆ. ಪಾಕಿಸ್ತಾನದಲ್ಲಿ ಮದುವೆಯಾಗಿ ಇಸ್ಲಾಮಾಬಾದ್‌ನಲ್ಲಿ ಜ್ಯೋತಿ ಮಲ್ಹೋತ್ರಾ ವಾಸ ಮಾಡಬೇಕೆಂದುಕೊಂಡಿದ್ದಳು ಎಂದು ಕೂಡ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ. ಸದ್ಯ ಜ್ಯೋತಿ ಮಲ್ಹೋತ್ರಾ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಲಾಗಿದ್ದು ಪೊಲೀಸರು ವಿಚಾರಣೆಯನ್ನು ಮಾಡುತ್ತಿದ್ದಾರೆ.


Click it and Unblock the Notifications











