ವಾರ್ 2ಗೆ ಶಾಕ್ ನೀಡಿದ 'ಸೆನ್ಸಾರ್' ಮಂಡಳಿ, ಬಿತ್ತು ಆ ಪ್ರಮುಖವಾದ 'ದೃಶ್ಯ'ಕ್ಕೆ ಕತ್ತರಿ

ಚಿತ್ರರಂಗದವರಿಗೆ ''ಸೆನ್ಸಾರ್‌'' ಮಂಡಳಿ ಯಾವತ್ತು ಮಗ್ಗಲದ ಮುಳ್ಳು. ಯಾಕೆಂದರೆ.. ಒಂದು ಚಿತ್ರವನ್ನು ತಮ್ಮ ಕಲ್ಪನೆಗೆ ಅನುಗುಣವಾಗಿ ನಿರ್ದೇಶಕರು ರೆಡಿ ಮಾಡಿರುತ್ತಾರೆ. ಆದರೆ.. ಈ ಸೆನ್ಸಾರ್‌ ಅಂಗಳಕ್ಕೆ ಬಂದಾಗ ಅಲ್ಲಿ ಬರೆ ಹಾಕಲಾಗುತ್ತೆ. ಕೆಲ ಒಮ್ಮೆ ಬೇಕು ಬೇಕಂತಲೇ ಕತ್ತರಿಯನ್ನು ಹಾಕಲಾಗುತ್ತೆ. ಮತ್ತೂ ಕೆಲ ಒಮ್ಮೆ ಕತ್ತರಿ ಹಾಕಬೇಕಾದ ಜಾಗದ ಮೇಲೆ ಇವರ ಕಣ್ಣೇ ಬೀಳುವುದಿಲ್ಲ.

ಸೆನ್ಸಾರ್‌ನ ಈ ನಡೆಯಿಂದ ಚೆಂದದ ಚಿತ್ರಗಳು ಅಂದ ಕಳೆದುಕೊಳ್ಳುತ್ತಾವೆ. ಇದರಿಂದ ಆ ತಂಡದ ಅಸಮಾಧಾನಕ್ಕೆ .. ಆಕ್ರೋಶಕ್ಕೆ.. ಸೆನ್ಸಾರ್ ಗುರಿಯಾಗುತ್ತೆ. ಇನ್ನೂ ಕೆಲ ಸಲ ಚಿತ್ರದ ಯಾವುದಾದರೂ ಒಂದು ಸನ್ನಿವೇಶ ಟ್ರೇಲರ್ ಅಥವಾ ಹಾಡುಗಳಲ್ಲಿ ಗಮನ ಸೆಳೆದಿರುತ್ತೆ. ಆ ಸನ್ನಿವೇಶವನ್ನು ಕಂಡು ಜನ ಹುಚ್ಚೆದ್ದಿರುತ್ತಾರೆ. ಬೆಳ್ಳಿಪರದೆಯಲ್ಲಿ ತಮಗೆ ಇಷ್ಟವಾದ ಸಿಕ್ವೆನ್ಸ್‌ನ ನೋಡಲು ಕಾತುರದಿಂದ ಕಾದು ಕುಳಿತಿರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಈ ಸೀನ್‌ಗಳು ಸದ್ದು ಮಾಡಿರುತ್ತಾವೆ.

War 2 Faces Censor Cuts Kiara Advani s Bikini Scene Slashed 6 Inappropriate References Muted

ಆದರೆ ಹೀಗೆ ವೈರಲ್ ಆದ ಸೀನಿಗೆ ಸೆನ್ಸಾರ್‌ನಲ್ಲಿ ಕತ್ತರಿ ಬೀಳುತ್ತೆ. ''ವಾರ್ 2'' ಚಿತ್ರದ ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ. ಹೌದು. ''ವಾರ್ 2'' ಚಿತ್ರದಲ್ಲಿನ ''ಆವನ್‌ ಜವಾನ್‌'' ಹಾಡಿನಲ್ಲಿ ಕಿಯಾರ ಅಡ್ವಾಣಿಯ ''ಬಿಕಿನಿ'' ಲುಕ್‌ನ್ನ ಕಂಡು ಅನೇಕರು ಕಿಕ್ಕೇರಿಸಿಕೊಂಡಿದ್ದರು. ಕಣ್ರೆಪ್ಪೆ ಅಲುಗಾಡಿಸದೇ ಕಿಯಾರ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. ಈ ಹಾಡನ್ನು ಚಿತ್ರಮಂದಿರದಲ್ಲಿ ನೋಡುವ ಮಜಾನೇ ಬೇರೆ ಎಂದೆಲ್ಲಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಆದರೆ ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ಕಿಯಾರ ಅವರ ಈ ಬಿಕಿನಿ ಅವತಾರಕ್ಕೆ ಸೆನ್ಸಾರ್ ಚಕಾರ ಎತ್ತಿದ್ದು 9 ಸೆಕೆಂಡ್ ಇರುವ ದೃಶ್ಯವನ್ನು ತೆಗೆಯಲು ಹೇಳಿದೆ. ಹಾಗೊಂದು ವೇಳೆ ನಿಜಕ್ಕೂ ಈ 9 ಸೆಕೆಂಡ್ ದೃಶ್ಯಕ್ಕೆ ಕತ್ತರಿ ಬಿದ್ದಿದ್ದರೆ ಪಡ್ಡೆಗಳ ಕನಸು ಭಗ್ನವಾದಂತೆಯೇ.

ಇನ್ನು ಕೇವಲ ಇದೊಂದೇ ದೃಶ್ಯ ಅಲ್ಲ ಒಂದು ಅಶ್ಲೀಲ ಸಂಭಾಷಣೆ ಮತ್ತು ಎರಡು ಸೆಕೆಂಡ್‌ ಇದ್ದ ಅಶ್ಲೀಲ ಸನ್ನೆಯನ್ನು ತೆಗೆಯುವಂತೆ ಸಿಬಿಎಫ್‌ಸಿ ಹೇಳಿದ್ದು ಅಶ್ಲೀಲ ಸಂಭಾಷಣೆ ತೆಗೆದು ಹಾಕಬಹುದು ಅಥವಾ ಬೇರೆ ಪದವನ್ನು ಬಳಸಬಹುದು ಎಂದು ಹೇಳಿದೆ. ಇದಲ್ಲದೇ ಆರು ಸ್ಥಳದಲ್ಲಿರುವ ಅನುಚಿತ ಉಲ್ಲೇಖಗಳನ್ನು ಮ್ಯೂಟ್ ಮಾಡುವಂತೆ ಕೂಡ ಸೆನ್ಸಾರ್ ಹೇಳಿದೆ ಎಂದು ''ಬಾಲಿವುಡ್‌ ಹಂಗಾಮಾ'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸೆನ್ಸಾರ್ ಹೇಳಿದ ಈ ಎಲ್ಲಾ ಬದಲಾವಣೆಗಳನ್ನು ಮಾಡಿದ ನಂತರ ''ವಾರ್ 2'' ಚಿತ್ರದ ಒಟ್ಟು ಅವಧಿ 2 ಗಂಟೆ 59 ನಿಮಿಷ 49 ಸೆಕೆಂಡ್ ಆಗಿದ್ದು ಸೆನ್ಸಾರ್ ಯು/ಎ ಪ್ರಮಾಣ ಪತ್ರವನ್ನು ನೀಡಿದೆ. ಇನ್ನೂ ಚಿತ್ರದ ಅವಧಿ ಹೆಚ್ಚಾದ ಹಿನ್ನೆಲೆ ಚಿತ್ರತಂಡ ಖುದ್ದು 8 ನಿಮಿಷ ಕತ್ತರಿ ಹಾಕಿದ್ದು ಸದ್ಯ ಚಿತ್ರದ ಅವಧಿ 2 ಗಂಟೆ 51 ನಿಮಿಷ 44 ಸೆಕೆಂಡ್ ಆಗಿದೆ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.

war-2-faces-censor-cuts-kiara-advanis-bikini-scene-slashed-6-inappropriate-references-muted

ಇನ್ನುಳಿದಂತೆ ''ವಾರ್ 2'' ಇದೇ ಆಗಸ್ಟ್ 14ರಂದು ವಿಶ್ವದೆಲ್ಲೆಡೆ ತೆರೆಗೆ ಬರಲಿದೆ. ''ಪಿಂಕ್‌ವಿಲ್ಲಾ'' ವರದಿಯ ಪ್ರಕಾರ ''ವಾರ್‌ 2'' 5000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ. IMAX, 4DX, ICE, ಫಾರ್ಮ್ಯಾಟ್ ನಲ್ಲಿ ತೆರೆಗೆ ಅಪ್ಪಳಿಸಲಿದೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದು ಯಶ್ ರಾಜ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಚಿತ್ರದ ಮೂಲಕ ಜ್ಯೂನಿಯರ್ ಎನ್‌ಟಿಆರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.

More from Filmibeat

English summary
War 2 gets a Censor Board makeover. Read about the cuts made to Kiara Advani's sensual visuals and the six "inappropriate references" that were removed from the Hrithik-Jr NTR starrer
Read more about: hrithik roshan censor jr ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X