'ವಾರ್- 2' ಸಾಂಗ್ ಬಂದೇಬಿಡ್ತು; ಹೃತಿಕ್-ತಾರಕ್ ಡ್ಯಾನ್ಸ್‌ ದಂಗಲ್‌ನಲ್ಲಿ ಗೆದ್ದವರು ಯಾರು?

ಅಯಾನ್ ಮುಖರ್ಜಿ ನಿರ್ದೇನದ 'ವಾರ್-2' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆ. ಸದ್ಯ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಜ್ಯೂ. ಎನ್‌ಟಿಆರ್ ನಟಿಸಿರುವುದರಿಂದ ದಕ್ಷಿಣದಲ್ಲಿ ಕೂಡ ಸಿನಿಮಾ ಹೈಪ್ ಕ್ರಿಯೇಟ್ ಮಾಡ್ತಿದೆ. ಇದೀಗ ಚಿತ್ರದ 'ಜನಾಬ್-ಎ-ಆಲಿ' ಸಾಂಗ್ ಟೀಸರ್ ಬಂದಿದೆ.

ಭಾರತೀಯ ಚಿತ್ರರಂಗದಲ್ಲಿ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ಡ್ಯಾನ್ಸ್ ಮಷಿನ್‌ಗಳಾಗಿಯೇ ಫೇಮಸ್. ಇಬ್ಬರೂ ತಮ್ಮ ಅದ್ಭುತ ಡ್ಯಾನ್ಸ್ ಮೂವ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಬಾಲಿವುಡ್‌ನಲ್ಲಿ ಹೃತಿಕ್ ನಂಬರ್ ವನ್ ಡ್ಯಾನ್ಸರ್ ಎನಿಸಿಕೊಂಡಿದ್ದರೆ ದಕ್ಷಿಣದಲ್ಲಿ ತಾರಕ್ ಬೆಸ್ಟ್ ಡ್ಯಾನ್ಸರ್. ಒಂದೇ ಸಾಂಗ್‌ನಲ್ಲಿ ಇಬ್ಬರೂ ಹೆಜ್ಜೆ ಹಾಕಿದ್ದಾರೆ ಎಂದಾಗಲೇ ಕುತೂಹಲ ಮೂಡಿತ್ತು.

War 2 Song Teaser Hrithik and Jr NTR Impress with Sizzling Dance Moves

ಇತ್ತೀಚೆಗೆ ಮುಂಬೈನಲ್ಲಿ ಸೆಟ್ ಹಾಕಿ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದರು. ಯಾವುದೇ ರಿಹರ್ಸಲ್ ಇಲ್ಲದೇ ಬಂದು ತಾರಕ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು ಎಂದು ಹೃತಿಕ್ ರೋಷನ್ ಕೂಡ ಹಾಡಿ ಕೊಂಡಾಡಿದ್ದರು. ಇದೀಗ ಆ ಸಾಂಗ್ ಝಲಕ್ ಹೊರಬಂದಿದ್ದು ಯಾರು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗೋಗಿದೆ.

ಈ ಹಿಂದೆ 'RRR' ಚಿತ್ರದ 'ನಾಟು ನಾಟು' ಗೀತೆಗೆ ರಾಮ್‌ಚರಣ್ ಜೊತೆ ತಾರಕ್ ಪೈಪೋಟಿಗೆ ಬಿದ್ದು ಕುಣಿದಿದ್ದರು. ಅದನ್ನೇ 'ಜನಾಬ್-ಎ-ಆಲಿ' ಸಾಂಗ್ ಈಗ ನೆನಪಿಸುತ್ತಿದೆ. ಅಲ್ಲಿ ತಾರಕ್ ಕೈ ಮೇಲಾಗಿತ್ತು ಎಂದು ಚರ್ಚೆ ನಡೆದಿತ್ತು. ಆದರೂ ರಾಜಮೌಳಿ ಇಬ್ಬರನ್ನು ತಮಗೆ ಬೇಕಾದಂತೆ ಕುಣಿಸಿ ಗೆದ್ದಿದ್ದರು. ಇದೀಗ 'ವಾರ್‌- 2' ಚಿತ್ರದಲ್ಲಿ ಹೃತಿಕ್- ತಾರಕ್ ನಡುವೆ ಡ್ಯಾನ್ಸ್ ಕದನ ನಡೆದಿದೆ.

ಪ್ರೀತಮ್ ಸಂಗೀತ ಸಂಯೋಜನೆಯ ಸಾಂಗ್‌ಗೆ ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಸಾಚೇತ್ ಟಂಡನ್, ಸಾಜ್ ಭಟ್ ಹಾಡಿದ್ದಾರೆ. ಬಾಸ್ಕೋ-ಸೀಸರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದು ಬಹಳ ಅದ್ಧೂರಿಯಾಗಿ ಚಿತ್ರೀಕರಣ ಮಾಡಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಇಬ್ಬರು ಅದ್ಭುತ ಡ್ಯಾನ್ಸರ್ಸ್‌ಗೆ ಸಾಥ್ ಕೊಟ್ಟಿದ್ದಾರೆ. ಇಬ್ಬರ ಗ್ರೇಸ್, ಡ್ಯಾನ್ಸ್ ಮೂವ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸೂಪರ್ ಹಿಟ್ 'ವಾರ್' ಸಿನಿಮಾ ಸೀಕ್ವೆಲ್ ಇದು. ಹಿಂದಿನ ಸಿನಿಮಾದಲ್ಲಿ ಹೃತಿಕ್ ಎದುರು ಟೈಗರ್ ಶ್ರಾಫ್ ಅಬ್ಬರಿಸಿದ್ದರು. ಈ ಬಾರಿ ತೆಲುಗು ನಟ ಜ್ಯೂ. ಎನ್‌ಟಿಆರ್ ಸವಾಲ್ ಹಾಕಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ಬಂದು ಹಿಟ್ ಆಗಿದೆ. ಆಗಸ್ಟ್ 14ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ತಮಿಳಿನ 'ಕೂಲಿ' ಚಿತ್ರದ ಎದುರು ಬಾಕ್ಸಾಫೀಸ್ ಕ್ಲ್ಯಾಶ್‌ಗೆ ವೇದಿಕೆ ಸಿದ್ಧವಾಗಿದೆ.

'ಕೂಲಿ' ಸಿನಿಮಾ 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಆದರೆ 'ವಾರ್‌- 2' ಸಿನಿಮಾ ಹಿಂದಿ ಜೊತೆಗೆ ತೆಲುಗು, ತಮಿಳಿಗೆ ಡಬ್ ಆಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಜೊತೆ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ನಟಿಸಿದ್ದಾರೆ. 'ವಾರ್-2' ಚಿತ್ರದಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

'ಜನಾಬ್-ಎ-ಆಲಿ' ಸಾಂಗ್ ಟೀಸರ್ ವಿಚಾರಕ್ಕೆ ಬಂದರೆ ಹೃತಿಕ್- ತಾರಕ್ ಡ್ಯಾನ್ಸ್ ಹುಬ್ಬೇರಿಸುವಂತಿದೆ. ರಿಸ್ಕಿ ಸ್ಟೆಪ್‌ಗಳನ್ನು ಬಹಳ ಸಲೀಸಾಗಿ ಇಬ್ಬರೂ ಹಾಕಿದ್ದಾರೆ. ಟೀಸರ್‌ನಲ್ಲಿ ಇಬ್ಬರೂ ಸರಿಸಮನಾಗಿ ಡ್ಯಾನ್ಸ್ ಮಾಡಿದ್ದಾರೆ ಎನ್ನುವಂತೆ ಕಾಣ್ತಿದೆ. ಕಂಪ್ಲೀಟ್ ಸಾಂಗ್ ನೋಡಿದರೆ ಯಾರ ಡ್ಯಾನ್ಸ್ ಚೆನ್ನಾಗಿದೆ ಎನ್ನುವ ತೀರ್ಮಾನ ಮಾಡಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕಾಗಿ ಸಿನಿಮಾ ಬಿಡುಗಡೆ ಆಗುವರೆಗೆ ಕಾಯಬೇಕು.

More from Filmibeat

English summary
The teaser of 'Janaab-e-Aali' from Ayan Mukerji’s War 2 showcases an electrifying dance face-off between Hrithik Roshan and Jr. NTR. Fans are eagerly debating who danced better ahead of the film’s release on August 14.
Read more about: hrithik roshan ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X