2019ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ 'ವಾರ್'

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. 19 ದಿನಗಳಲ್ಲಿ 300 ಕೋಟಿ ಗಳಿಸುವ ಮೂಲಕ ಈ ವರ್ಷದ ಬಹುದೊಡ್ಡ ಹಿಟ್ ಸಿನಿಮಾ ಆಗಿದೆ.

ಅಕ್ಟೋಬರ್ 2 ರಂದು ಬಿಡುಗಡೆಯಾಗಿದ್ದ ವಾರ್ ಸಿನಿಮಾ ಮೊದಲ ದಿನ 53.60 ಕೋಟಿ ಗಳಿಸಿತ್ತು. ಇದೀಗ, 19 ದಿನದಲ್ಲಿ ಒಟ್ಟು 301 ಕೋಟಿ ತನ್ನ ಖಾತೆಗೆ ಹಾಕಿಕೊಂಡಿದೆ.

Recommended Video

ಹೀರೋ ಹಿಂದೆ ಡಾನ್ಸ್ ಮಾಡ್ತಿದ್ದೊರೆ ಈಗ ದೊಡ್ಡ ಸ್ಟಾರ್ಸ್ | Filmibeat Kannada

ಈ ಕುರಿತು ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸೇರಿ 301.75 ಕೋಟಿ ಗಳಿಸಿದೆ ಎಂದು ತಿಳಿಸಿದ್ದಾರೆ.

War Movie Crossed 300 Crore Club

ಮೂರನೇ ದಿನಕ್ಕೆ 100 ಕೋಟಿ, ಐದನೇ ದಿನಕ್ಕೆ 150 ಕೋಟಿ, ಏಳನೇ ದಿನಕ್ಕೆ 200 ಕೋಟಿ, ಹನ್ನೊಂದನೇ ದಿನಕ್ಕೆ 250 ಕೋಟಿ, ಹತ್ತೊಂಬನೇ ದಿನಕ್ಕೆ 300 ಕೋಟಿ ಗಳಿಸುವ ಮೂಲಕ ಈ ವರ್ಷದ ದಿ ಬೆಸ್ಟ್ ಸಿನಿಮಾ ಎನಿಸಿಕೊಂಡಿದೆ.

ಕಳೆದ ಐದು ವರ್ಷಗಳ ಬಾಲಿವುಡ್ ಪಟ್ಟಿ ನೋಡಿದರೆ, 2014ರಲ್ಲಿ ಪಿಕೆ, 2015ರಲ್ಲಿ ಭಜರಂಗಿ ಭಾಯ್ ಜಾನ್, 2016ರಲ್ಲಿ ಸುಲ್ತಾನ್ ಹಾಗೂ ದಂಗಲ್, 2017ರಲ್ಲಿ ಟೈಗರ್ ಜಿಂದಾ ಹೈ, 2018ರಲ್ಲಿ ಪದ್ಮಾವತ್ ಹಾಗೂ ಸಂಜು ಸಿನಿಮಾಗಳು 300 ಕೋಟಿ ಕ್ಲಬ್ ಸೇರಿದ್ದವು.

'ವಾರ್' ಸಿನಿಮಾದ ವೇಗ ನೋಡುತ್ತಿದ್ದರೇ 400 ಕೋಟಿ ಕ್ಲಬ್ ಸೇರುವ ಎಲ್ಲ ಸಾಧ್ಯತೆ ಇದೆ. 2019ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಕಬೀರ್ ಸಿಂಗ್ (276 ಕೋಟಿ) ಮೊದಲ ಸ್ಥಾನದಲ್ಲಿತ್ತು. ಎರಡನೇ ಸ್ಥಾನದಲ್ಲಿ ಉರಿ ಸಿನಿಮಾ (244 ಕೋಟಿ) ಇತ್ತು. ಈಗ ವಾರ್ ಮೊದಲ ಸ್ಥಾನಕ್ಕೆ ಹೋಗಿ ಉಳಿದ ಚಿತ್ರಗಳನ್ನು ಕೆಳಗೆ ತಳ್ಳಿದೆ.

More from Filmibeat

English summary
Hrithik Roshan and Tiger Shroff starrer War movie collect 300 crores in Indian box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X