For Quick Alerts
  ALLOW NOTIFICATIONS  
  For Daily Alerts

  ಗಲ್ಲಾ ಪೆಟ್ಟಿಗೆಯಲ್ಲಿ ಡಬಲ್ ಸೆಂಚುರಿ ದಾಖಲೆ ಬರೆದ 'ವಾರ್'

  |

  ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲು ಧೂಳೆಬ್ಬಿಸಿದೆ. 7 ದಿನಗಳಲ್ಲಿ 200 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿದೆ.

  ಅಕ್ಟೋಬರ್ 2 ರಂದು ಬಿಡುಗಡೆಯಾಗಿದ್ದ ವಾರ್ ಸಿನಿಮಾ ಮೊದಲ ದಿನ 53.60 ಕೋಟಿ ಗಳಿಸಿತ್ತು. ಇದೀಗ, 7 ದಿನದಲ್ಲಿ ಒಟ್ಟು 216.65 ಕೋಟಿ ತನ್ನ ಖಾತೆಗೆ ಹಾಕಿಕೊಂಡಿದೆ.

  ಕಲೆಕ್ಷನ್ ನಲ್ಲಿ ದಾಖಲೆ ನಿರ್ಮಿಸಿದ ಹೃತಿಕ್ ಮತ್ತು ಟೈಗರ್ 'ವಾರ್'ಕಲೆಕ್ಷನ್ ನಲ್ಲಿ ದಾಖಲೆ ನಿರ್ಮಿಸಿದ ಹೃತಿಕ್ ಮತ್ತು ಟೈಗರ್ 'ವಾರ್'

  ಈ ಕುರಿತು ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸೇರಿ 216.65 ಕೋಟಿ ಗಳಿಸಿದೆ ಎಂದು ತಿಳಿಸಿದ್ದಾರೆ.

  ಮೊದಲ ದಿನ (ಬುದವಾರ) 53.60 ಕೋಟಿ, ಎರಡನೇ ದಿನ (ಗುರುವಾರ) 23.10 ಕೋಟಿ, ಮೂರನೇ ದಿನ (ಶುಕ್ರವಾರ) 21.30 ಕೋಟಿ, ನಾಲ್ಕನೇ ದಿನ (ಶನಿವಾರ) 27.60 ಕೋಟಿ, ಐದನೇ ದಿನ (ಭಾನುವಾರ) 36.10 ಕೋಟಿ, ಆರನೇ ದಿನ (ಸೋಮವಾರ) 20.60 ಕೋಟಿ, ಏಳನೇ ದಿನ (ಮಂಗಳವಾರ) 27.75 ಕೋಟಿ, ಒಟ್ಟು 208.05 ಕೋಟಿ ಹಾಗೂ ತಮಿಳು ಮತ್ತು ತೆಲುಗು ಸೇರಿ 216.65 ಕೋಟಿ ಆಗಿದೆಯಂತೆ.

  ಮೊದಲ ದಿನದಲ್ಲೇ ದಾಖಲೆ ಬರೆದ ಹೃತಿಕ್-ಟೈಗರ್ ಶ್ರಾಫ್ಮೊದಲ ದಿನದಲ್ಲೇ ದಾಖಲೆ ಬರೆದ ಹೃತಿಕ್-ಟೈಗರ್ ಶ್ರಾಫ್

  'ವಾರ್' ಸಿನಿಮಾದ ವೇಗ ನೋಡುತ್ತಿದ್ದರೇ 300 ಕೋಟಿ ಕ್ಲಬ್ ಸೇರುವ ಎಲ್ಲ ಸಾಧ್ಯತೆ ಇದೆ. 2019ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಕಬೀರ್ ಸಿಂಗ್ (276 ಕೋಟಿ) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಉರಿ ಸಿನಿಮಾ (244 ಕೋಟಿ) ಇದೆ.

  English summary
  Hrithik Roshan and Tiger Shroff starrer War movie collect 200 crores in indian box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X