For Quick Alerts
  ALLOW NOTIFICATIONS  
  For Daily Alerts

  ಮದುವೆಗೂ ಮುಂಚೆ ನೇಹಾ ಧೂಪಿಯಾ ಗರ್ಭಿಣಿ ಆಗಿದ್ರಾ.?

  By Harshitha
  |
  ಈ ದೊಡ್ಡ ನಟಿ ಮದುವೆಗೂ ಮುನ್ನವೇ ಪ್ರೇಗ್ನನ್ಟ್ ಆಗಿದ್ದಳು

  ಇಡೀ ಬಾಲಿವುಡ್ಡಿಗೆ ಬಾಲಿವುಡೇ ನಟಿ ಸೋನಂ ಕಪೂರ್ ಮದುವೆಯಲ್ಲಿ ಮುಳುಗಿರುವಾಗ, ನಟಿ ನೇಹಾ ಧೂಪಿಯಾ ಸದ್ಡು ಮಾಡದೆ, ಸುದ್ದಿ ಆಗದೇ ಸರಳವಾಗಿ ನಡೆದ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಬಾಲಿವುಡ್ ನಟ ಅಂಗದ್ ಸಿಂಗ್ ಬೇಡಿ ಎಂಬುವರ ಜೊತೆ ನೇಹಾ ಧೂಪಿಯಾ ಹೊಸ ಜೀವನ ಆರಂಭಿಸಿದರು. ಅಷ್ಟಕ್ಕೂ, ದಿಢೀರ್ ಅಂತ ನಟಿ ನೇಹಾ ಧೂಪಿಯಾ ಮದುವೆ ಆಗಿದ್ದು ಯಾಕೆ.?

  ತರಾತುರಿಯಲ್ಲಿ ನಟಿ ನೇಹಾ ಧೂಪಿಯಾ ಮದುವೆ ಆಗಿರುವುದನ್ನು ನೋಡಿದ ಗಾಸಿಪ್ ಪ್ರಿಯರು ಈಗ ಏನೇನೋ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆಗಿದ್ದರು ಎಂಬ ಗುಲ್ಲು ಎಲ್ಲೆಡೆ ಕೇಳಿಬರುತ್ತಿದೆ.

  ಈ ಗಾಸಿಪ್ ನೇಹಾ ಧೂಪಿಯಾ ಮನೆಯವರ ಕಿವಿಗೂ ಬಿದ್ದಿದೆ. ಹೀಗಾಗಿ, ನೇಹಾ ಧೂಪಿಯಾ ತಂದೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿರಿ...

  ಸುಳ್ಳು ಸುದ್ದಿ

  ಸುಳ್ಳು ಸುದ್ದಿ

  ''ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆಗಿದ್ದರು ಅನ್ನೋದು ಶುದ್ಧ ಸುಳ್ಳು ಸುದ್ದಿ. ಆ ತರಹ ಏನೂ ಇರಲಿಲ್ಲ. ಇದ್ದಕ್ಕಿದ್ದಂತೆ ಇಬ್ಬರೂ ಮದುವೆ ಆಗಿದ್ರಿಂದ, ಈ ತರಹ ಗಾಳಿಮಾತು ಕೇಳಿಬರುತ್ತಿದೆ ಅಷ್ಟೇ. ಕೆಲವರು ತಮಗೆ ಇಷ್ಟಬಂದಂತೆ ರೂಮರ್ಸ್ ಹಬ್ಬಿಸುತ್ತಿರುತ್ತಾರೆ'' ಎಂದು ದಿನಪತ್ರಿಕೆಯೊಂದಕ್ಕೆ ನೇಹಾ ಧೂಪಿಯಾ ತಂದೆ ಪ್ರದೀಪ್ ಧೂಪಿಯಾ ಸ್ಪಷ್ಟನೆ ಕೊಟ್ಟಿದ್ದಾರೆ.

  ಸದ್ದು ಮಾಡದೆ, ಸುದ್ದಿ ಆಗದೆ, ಸೈಲೆಂಟ್ ಆಗಿ ಮದುವೆ ಆದ ನೇಹಾ ಧೂಪಿಯಾ.!ಸದ್ದು ಮಾಡದೆ, ಸುದ್ದಿ ಆಗದೆ, ಸೈಲೆಂಟ್ ಆಗಿ ಮದುವೆ ಆದ ನೇಹಾ ಧೂಪಿಯಾ.!

  ಇಬ್ಬರೂ ಬಿಜಿಯಿದ್ದರು

  ಇಬ್ಬರೂ ಬಿಜಿಯಿದ್ದರು

  ''ಮದುವೆ ದಿನಾಂಕ ನಿಗದಿ ಆದ್ಮೇಲೆ, ಮದುವೆ ತಯಾರಿ ಮಾಡಿಕೊಳ್ಳಲು ನಮಗೆ ಸಿಕ್ಕಿದ್ದು ಕೇವಲ ಎರಡು ದಿನ. ಯಾಕಂದ್ರೆ, ಅಂಗದ್ ಸಿಂಗ್ ಬೇಡಿ ಹಾಗೂ ನೇಹಾ... ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಿದ್ದರು'' ಅಂತಾರೆ ಪ್ರದೀಪ್ ಧೂಪಿಯಾ.

  ವಿಷಯ ಗೊತ್ತಿತ್ತು

  ವಿಷಯ ಗೊತ್ತಿತ್ತು

  ''ನೇಹಾ ಹಾಗೂ ಅಂಗದ್ ಸಿಂಗ್ ಬೇಡಿ ಒಳ್ಳೆಯ ಸ್ನೇಹಿತರು ಎಂಬ ವಿಷಯ ನಮಗೆ ಗೊತ್ತಿತ್ತು. ಅವರಾಗಿ ಅವರೇ ಮದುವೆ ಬಗ್ಗೆ ಮಾತನಾಡಲಿ ಅಂತ ನಾವು ಕಾಯ್ತಿದ್ವಿ. ಕಡೆಗೂ ಅವರು ಮದುವೆ ಬಗ್ಗೆ ತೀರ್ಮಾನ ಕೈಗೊಂಡರು. ನಾವೂ ಕೂಡ ಸಂತೋಷದಿಂದ ಒಪ್ಪಿಕೊಂಡ್ವಿ'' - ಪ್ರದೀಪ್ ಧೂಪಿಯಾ

  ಟ್ರೋಲ್ ಆಗಿದ್ದಾರೆ ನೇಹಾ

  ಟ್ರೋಲ್ ಆಗಿದ್ದಾರೆ ನೇಹಾ

  ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆ ಆಗಿರುವುದಕ್ಕಾಗಿ ನಟಿ ನೇಹಾ ಧೂಪಿಯಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಅಂಗದ್ ಸಿಂಗ್ ಬೇಡಿಗೆ ನೇಹಾ ರಾಖಿ ಕಟ್ಟಬೇಕಿತ್ತು ಅಂತೆಲ್ಲ ನೆಟ್ಟಿಗರು ಹೀಯಾಳಿಸುತ್ತಿದ್ದಾರೆ. ಟ್ರೋಲಿಗರಿಗೆಲ್ಲ ಕೇರ್ ಮಾಡದೇ, ತಮ್ಮ ಮಾತಲ್ಲೇ ಬಿಸಿ ಮುಟ್ಟಿಸಿದ್ದಾರೆ ನಟಿ ನೇಹಾ ಧೂಪಿಯಾ.

  English summary
  Bollywood Actress Neha Dhupia got married to Angad Singh Bedi on May 10th. But Was Neha Dhupia pregnant before marrying Angad Bedi.? Take a look at this article to know Neha's father reaction over the latest gossip.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X