»   » 'ಬರೇಲಿ ಕಿ ಬರ್ಫಿ' ಚಿತ್ರದ ಟೇಸ್ಟಿಯಸ್ಟ್ ಎಂಟರ್‌ಟೈನರ್ ಟ್ರೈಲರ್ ನೋಡಿ..

'ಬರೇಲಿ ಕಿ ಬರ್ಫಿ' ಚಿತ್ರದ ಟೇಸ್ಟಿಯಸ್ಟ್ ಎಂಟರ್‌ಟೈನರ್ ಟ್ರೈಲರ್ ನೋಡಿ..

Posted By:
Subscribe to Filmibeat Kannada

ರಾಜ್ ಕುಮಾರ್ ರಾವ್ ಮತ್ತು ಕೃತಿ ಸನೋನ್ ಅಭಿನಯದ 'ಬರೇಲಿ ಕಿ ಬರ್ಫಿ' ಚಿತ್ರದ ಟ್ರೈಲರ್ ಇಂದು(ಜು. 19) ಬಿಡುಗಡೆ ಆಗಿದೆ. ಟ್ರೈಲರ್ ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಈಗಾಗಲೇ 1.6 ದಶಲಕ್ಷ ಬಾರಿ ವೀಕ್ಷಣೆ ಪಡೆದಿದೆ.

'ಬರೇಲಿ ಕಿ ಬರ್ಫಿ' ಚಿತ್ರ 'ದಂಗಲ್' ಚಿತ್ರದ ನಿರ್ದೇಶಕ ನಿತಿಶ್ ತಿವಾರಿ ಮತ್ತು ಶ್ರೇಯಸ್ ಜೈನ್ ರವರು ಕತೆ ರಚಿಸಿರುವ ಕಾರಣದಿಂದ ಹೆಚ್ಚು ಗಮನಸೆಳೆದಿತ್ತು. ಈಗ ಟ್ರೈಲರ್ ಸಹ ಇಂದು ಬಿಡುಗಡೆ ಆಗಿದ್ದು, ಹೆಚ್ಚು ಫನ್ನಿ ಆಗಿರುವುದರಿಂದ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿದೆ. ಟ್ರೈಲರ್ ನಲ್ಲಿಯೇ ರಾಜ್ ಕುಮಾರ್ ರಾವ್, ಕೃತಿ ಸನೋನ್ ಮತ್ತು ಆಯುಷ್ಮಾನ್ ಖುರಾನಾ ಅವರ ಅಭಿನಯ ಮತ್ತು ಸಂಭಾಷಣೆ ಪ್ರೇಕ್ಷಕರಿಗೆ ಟೇಸ್ಟಿಯಸ್ಟ್ ಎಂಟರ್‌ಟೈನ್‌ಮೆಂಟ್ ನೀಡುವ ಭರವಸೆ ನೀಡಿದೆ.

Watch 'Bareilly Ki Barfi' movie Official Trailer

ಚಿತ್ರಕ್ಕೆ ಅಶ್ವಿನಿ ಅಯ್ಯರ್ ತಿವಾರಿ ಆಕ್ಷನ್ ಕಟ್ ಹೇಳಿದ್ದು, ವಿನೀತ್ ಜೈನ್ ಮತ್ತು ರೇಣು ರವಿ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ತಾನಿಶ್ಕ್ ಬಾಘ್ಛಿ ಸಂಗೀತ ನಿರ್ದೇಶನ, Gavemi U Ary ಛಾಯಾಗ್ರಹಣ ಇದೆ. ಸಿನಿಮಾ ಆಗಸ್ಟ್ 18 ರಂದು ಬಿಡುಗಡೆ ಆಗಲಿದೆ.

'ಬರೇಲಿ ಕಿ ಬರ್ಫಿ' ಚಿತ್ರದ ಫನ್ನಿ ಟ್ರೈಲರ್ ಇಲ್ಲಿದೆ ನೋಡಿ

English summary
Kriti Sanon and Rajkumar Rao Starrer Hindi Movie 'Bareilly Ki Barfi' official trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada