»   » 'ವೆಡ್ಡಿಂಗ್ ಪುಲಾವ್' ತಿನ್ನಿಸೋಕೆ ಬಂದ್ರು ದಿಗಂತ್

'ವೆಡ್ಡಿಂಗ್ ಪುಲಾವ್' ತಿನ್ನಿಸೋಕೆ ಬಂದ್ರು ದಿಗಂತ್

Posted By:
Subscribe to Filmibeat Kannada

ದೂಡ್ ಪೇಡಾ ದಿಗಂತ್ ಬಾಲಿವುಡ್ ಗೆ ಹಾರಿದ್ದಾರೆ. ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ. ಸದ್ದಿಲ್ಲದೇ ಹಿಂದಿ ಸಿನಿಮಾ ಮಾಡ್ತಿದ್ದಾರೆ. ಹೀಗಂತ ವರ್ಷದಿಂದಲೂ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು.

ಆದ್ರೆ, ದಿಗಂತ್ ಅಭಿನಯಿಸುತ್ತಿರುವ ಹಿಂದಿ ಸಿನಿಮಾ ಯಾವುದು. ಅವರ ಪಾತ್ರವೇನು? ಯಾರ ಜೊತೆ ದಿಗಂತ್ ನಟಿಸುತ್ತಿದ್ದಾರೆ ಅಂತ ಮಾತ್ರ ಯಾರಿಗೂ ಗೊತ್ತಿರಲಿಲ್ಲ. [ದಿಗಂತ್ ಬಾಲಿವುಡ್ ಕನಸು ಕೊನೆಗೂ ನನಸು]

diganth

ಅದನ್ನ ದಿಗಂತ್ ಕೂಡ ಬಹಿರಂಗ ಪಡಿಸಿರಲಿಲ್ಲ. ಇಲ್ಲಿಯವರೆಗೂ ಗಪ್ ಚುಪ್ ಆಗಿದ್ದ ದಿಗಂತ್ ಬಾಲಿವುಡ್ ಕಹಾನಿ ಈಗ ಔಟ್ ಆಗಿದೆ. ದಿಗಂತ್ ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ಚಿತ್ರದ ಹೆಸರು 'ವೆಡ್ಡಿಂಗ್ ಪುಲಾವ್'.

'ವೆಡ್ಡಿಂಗ್ ಪುಲಾವ್' ಚಿತ್ರದಲ್ಲಿ ಮಧುಮಗನಾಗಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ನೀವೇ ನೋಡಿ....

Watch Diganth starrer Bollywood Movie 'Wedding Pullav' trailer

ಇಬ್ಬರು ಬೆಸ್ಟ್ ಫ್ರೆಂಡ್ಸ್ ಬೇರೆ ಬೇರೆಯವರೊಂದಿಗೆ ಮದುವೆಯಾಗೋಕೆ ನಿರ್ಧರಿಸಿದಾಗ ನಡೆಯುವ ಕನ್ಫ್ಯೂಷನ್ ಸ್ಟೋರಿ 'ವೆಡ್ಡಿಂಗ್ ಪುಲಾವ್'. [ದಿಗಂತ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಬಿಜಿ]

diganth

'ವೆಡ್ಡಿಂಗ್ ಪುಲಾವ್' ಚಿತ್ರದಲ್ಲಿ ಚಾಕಲೇಟ್ ಬಾಯ್ ಆಗಿ ದಿಗಂತ್ ಕಂಗೊಳಿಸಿದ್ದಾರೆ. ಅವರ ಜೊತೆ ಅನುಷ್ಕಾ ರಂಜನ್, ರಿಷಿ ಕಪೂರ್, ಹಿಮಾನಿ ಶಿವಪುರಿ, ಕರಣ್.ವಿ.ಗ್ರೋವರ್, ಸೊನಾಲಿ ಸೆಹಗಲ್ ನಟಿಸಿದ್ದಾರೆ.

diganth

ಬಿನೋದ್ ಪ್ರಧಾನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಅಕ್ಟೋಬರ್ 16 ರಂದು ರಿಲೀಸ್ ಆಗಲಿದೆ. ಅಂತೂ ಬಾಲಿವುಡ್ ಬೆಳ್ಳಿಪರದೆ ಮೇಲೆ ದಿಗಂತ್ ಮಿಂಚುವಂತಾಗಿದೆ.

English summary
Kannada Actor Diganth has made his Bollywood Debut with the film 'Wedding Pullav'. Binod Pradhan directorial 'Wedding Pullav' trailer is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada