For Quick Alerts
  ALLOW NOTIFICATIONS  
  For Daily Alerts

  ಮುದ್ದು ಬೆಡಗಿ ಕೃತಿ ಅವರ 'ರಾಝ್-ರಿಬೂಟ್' ಟ್ರೈಲರ್ ನೋಡಿ...

  By Sonu
  |

  'ಚಿರು' ಮೂಲಕ ಕನ್ನಡಕ್ಕೆ ಬಂದ ಕೃತಿ ಖರಬಂದ ಎಂಬ ಮುದ್ದಾದ ಅರಗಿಣಿ ಪುರ್ರ..... ಅಂತ ಬಾಲಿವುಡ್ ಗೆ ಹಾರಿದ್ದೇ ತಡ ಸಖತ್ ಹಾಟ್ ಆಗಿ ಮಿಂಚಲು ಆರಂಭಿಸಿದ್ದಾರೆ. ಇಲ್ಲಿ ಇರುವಾಗ ತುಂಬಾ ಮುದ್ದು-ಮುದ್ದಾಗಿ ನಟಿಸುತ್ತಾ, ಸಂಪ್ರದಾಯಸ್ಥ ಬಟ್ಟೆ ತೊಟ್ಟು ಮಿರ-ಮಿರ ಮಿಂಚುತ್ತಿದ್ದ ಕೃತಿ ಬಾಲಿವುಡ್ ನಲ್ಲಿ ಪಡ್ಡೆ ಹೈಕಳ ಮೈ ಬೆಚ್ಚಗಾಗುವಂತೆ ಕಾಣಿಸಿಕೊಂಡಿದ್ದಾರೆ.

  ಬಾಲಿವುಡ್ ಕಿಸ್ಸರ್ ಬಾಯ್ ಅಂತಾನೇ ಹೆಸರು ಪಡೆದಿರುವ ಇಮ್ರಾನ್ ಹಶ್ಮಿ ಅವರ ಜೊತೆ 'ಗೂಗ್ಲಿ' ಬೆಡಗಿ ಕೃತಿ ಖರಬಂದ ಅವರು 'ರಾಝ್-ರಿಬೂಟ್' ಚಿತ್ರದಲ್ಲಿ ಮಿಂಚಿದ್ದಾರೆ. ಹೇಳಿ-ಕೇಳಿ ಇದು ಹಾರರ್ ಸಿನಿಮಾ, ಜೊತೆಗೆ ಇಮ್ರಾನ್ ನಟನೆ, ವಿಕ್ರಂ ಭಟ್ ಆಕ್ಷನ್-ಕಟ್ ಎಂದರೆ ಲಿಪ್ ಲಾಕ್ ಸೀನ್ ಗಳು ಯಥೇಚ್ಛವಾಗಿ ಇರುತ್ತದೆ.[ಗರತಿ 'ಗಂಗಮ್ಮ' ಹೋಗಿ 'ಬಿಚ್ಚಮ್ಮ' ಆದ್ರಾ 'ಗೂಗ್ಲಿ' ಬೆಡಗಿ ಕೃತಿ]

  ಈ ಮೊದಲು 'ರಾಝ್-ರಿಬೂಟ್' ಚಿತ್ರದ ಪೋಸ್ಟರ್ಸ್ ಮತ್ತು ಸಣ್ಣ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟು ಹಾಕಿದ್ದರು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. 'ರಾಝ್-ರಿಬೂಟ್' ಟ್ರೈಲರ್ ವಿಮರ್ಶೆ ನೋಡಲು ಮುಂದೆ ಓದಿ.....

  ಥ್ರಿಲ್ಲಿಂಗ್ ಟ್ರೈಲರ್

  ಥ್ರಿಲ್ಲಿಂಗ್ ಟ್ರೈಲರ್

  ಸಖತ್ ಥ್ರಿಲ್ಲಿಂಗ್ ಆಗಿರೋ 'ರಾಝ್-ರಿಬೂಟ್' ಚಿತ್ರದ ಟ್ರೈಲರ್ ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚುತ್ತಿದೆ.[ಕಿಸ್ಸರ್ ಬಾಯ್ ಜೊತೆ ಲಿಪ್ ಲಾಕ್ ಕಥೆ ಬಿಚ್ಚಿಟ್ಟ ಕೃತಿ ಖರಬಂದ]

  ಹಾರರ್ ಸಿನಿಮಾ

  ಹಾರರ್ ಸಿನಿಮಾ

  'ರಾಝ್' ಸಿರೀಸ್ ಆಗಿರೋ 'ರಾಝ್-ರಿಬೂಟ್' ಹಾರರ್ ಸಿನಿಮಾ ಆಗಿದ್ದು, ನಟ ಗೌರವ್ ಅರೋರಾ ಅವರ ಪತ್ನಿಯ ಪಾತ್ರದಲ್ಲಿ ನಟಿ ಕೃತಿ ಖರಬಂದ ಮಿಂಚಿದ್ದಾರೆ.[ಕೃತಿ ಖರಬಂದ ಆಹಾ ನಿನ್ನ ಧ್ವನಿ ಏನ್ ಚೆಂದಾ......]

  ವಿಲನ್ ಆದ ಇಮ್ರಾನ್ ಹಶ್ಮಿ

  ವಿಲನ್ ಆದ ಇಮ್ರಾನ್ ಹಶ್ಮಿ

  'ರಾಝ್' ಸಿರೀಸ್ ನಲ್ಲಿ ಸದಾ ಹೀರೋ ಆಗಿದ್ದ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಈ ಬಾರಿ 'ಜಸ್ಟ್ ಫೋರ್ ದ ಚೇಂಜ್' ಅಂತ ಈ ಚಿತ್ರದಲ್ಲಿ ಕೃತಿ ಅವರಿಗೆ ವಿಲನ್ ಆಗಿ ಕಾಡಿದ್ದಾರೆ.[ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!]

  ಎಲ್ಲವೂ ಕಾಗೆಮಯ

  ಎಲ್ಲವೂ ಕಾಗೆಮಯ

  ಈ ಚಿತ್ರದಲ್ಲಿ ಕಾಗೆಯೊಂದು ಪ್ರಮುಖ ಪಾತ್ರ ವಹಿಸಿದ್ದು, ಅದೆಲ್ಲಿರುತ್ತೋ ಅಲ್ಲಿ ಕೃತಿ ಮತ್ತು ಗೌರವ್ ಅರೋರಾ ಅವರಿಗೆ ದೆವ್ವದ ಕಾಟ ತಪ್ಪಿದ್ದಲ್ಲ. ಜೊತೆಗೆ ಕಾಗೆಯಿಂದ ಸದಾ ಪ್ರಾಣಾಪಾಯ ಉಂಟಾಗುತ್ತದೆ.

  ಕೊಲೆಗಾತಿ ಕೃತಿ

  ಕೊಲೆಗಾತಿ ಕೃತಿ

  ಈ ಚಿತ್ರದಲ್ಲಿ ಕೃತಿ ಅವರು ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಲು ಪ್ರಯತ್ನ ಪಡುತ್ತಾರೆ ಅನ್ನೋದು ಟ್ರೈಲರ್ ನಲ್ಲಿ ಸ್ಪಷ್ಟವಾಗುತ್ತದೆ.

  ಕ್ಷಣ-ಕ್ಷಣಕ್ಕೂ ಕಾಡುವ ದೆವ್ವ

  ಕ್ಷಣ-ಕ್ಷಣಕ್ಕೂ ಕಾಡುವ ದೆವ್ವ

  ಕೃತಿ ಮತ್ತು ಗೌರವ್ ಅರೋರಾ ಅವರ ಸುಂದರವಾದ ಸಂಸಾರ, ರೊಮೇನಿಯಾಗೆ ಬಂದ ಕೂಡಲೇ ದೆವ್ವದ ಚೇಷ್ಟೆ ಆರಂಭವಾಗುತ್ತದೆ. ಕ್ಷಣ-ಕ್ಷಣಕ್ಕೂ ಕೃತಿ ಅವರನ್ನು ದೆವ್ವ ಕಾಡಲಾರಂಭಿಸುತ್ತದೆ.

  ಸ್ವತಃ ಡಬ್ ಮಾಡಿದ ಕೃತಿ

  ಸ್ವತಃ ಡಬ್ ಮಾಡಿದ ಕೃತಿ

  ಕನ್ನಡದಲ್ಲಿ ಹಲವಾರು ಸಿನಿಮಾ ಮಾಡಿದರೂ, ಯಾವುದೇ ಚಿತ್ರಕ್ಕೆ ಕೃತಿ ಅವರು ತಮ್ಮ ಧ್ವನಿ ನೀಡಿರಲಿಲ್ಲ. ಆದರೆ ಇದೀಗ ಈ ಚಿತ್ರಕ್ಕೆ ಖುದ್ದು ಕೃತಿ ಅವರೇ ಮೊದಲ ಬಾರಿಗೆ ಡಬ್ ಮಾಡಿದ್ದಾರೆ.

  ಯಾವಾಗ ರಿಲೀಸ್

  ಯಾವಾಗ ರಿಲೀಸ್

  ಸಸ್ಪೆನ್ಸ್-ಥ್ರಿಲ್ಲರ್ ಕಮ್ ಹಾರರ್ 'ರಾಝ್-ರಿಬೂಟ್' ಸೆಪ್ಟೆಂಬರ್ 16ಕ್ಕೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ನಿರ್ಮಾಪಕರಾದ ಭೂಷಣ್ ಕುಮಾರ್, ಮುಖೇಶ್ ಭಟ್ ಮತ್ತು ಕೃಷ್ಣ ಕುಮಾರ್ ಬಂಡವಾಳ ಹೂಡಿದ್ದಾರೆ.

  ಟ್ರೈಲರ್ ನೋಡಿ...

  ಟ್ರೈಲರ್ ನೋಡಿ...

  ನಮ್ಮ ಕನ್ನಡದ ಹುಡುಗಿ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮಿಂಚಿರುವ ಹಾರರ್-ಥ್ರಿಲ್ಲರ್ 'ರಾಝ್-ರಿಬೂಟ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

  English summary
  Watch Hindi Movie "RAAZ - Reboot" Official Theatrical Trailer. The Movie is an Indian supernatural thriller movie written and directed by Vikram Bhatt. Starring Hindi Actor Emraan Hashmi, Actress Kriti Kharbanda and Gaurav Arora.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X