»   » ಇಂದಿರಾ ಗಾಂಧಿ ಸರ್ಕಾರದ ಮರುಸೃಷ್ಟಿ 'ಇಂದು ಸರ್ಕಾರ್' ಟ್ರೈಲರ್ ನೋಡಿದ್ರಾ..

ಇಂದಿರಾ ಗಾಂಧಿ ಸರ್ಕಾರದ ಮರುಸೃಷ್ಟಿ 'ಇಂದು ಸರ್ಕಾರ್' ಟ್ರೈಲರ್ ನೋಡಿದ್ರಾ..

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ 'ಫ್ಯಾಷನ್', 'ಪೇಜ್ 3' ನಂತಹ ಸೂಪರ್ ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ಮಧುರ್ ಭಂಡಾರ್ಕರ್ ನಿರ್ದೇಶನದ 'ಇಂದು ಸರ್ಕಾರ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

1975 ರಲ್ಲಿಯ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದ ಸತ್ಯ ಘಟನೆ ಆಧಾರಿತ ಸಿನಿಮಾ 'ಇಂದು ಸರ್ಕಾರ್'. ಚಿತ್ರದಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತ ಅಂಶ ಪ್ರಧಾನವಾಗಿ ಮೂಡಿಬಂದಿದೆ. ಆದ್ದರಿಂದ ಟ್ರೈಲರ್ ನೋಡಿರುವ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದ್ದು, ಜೂನ್ 16 ರಂದು ಬಿಡುಗಡೆ ಆಗಿರುವ ಟ್ರೈಲರ್ ಈಗಾಗಲೇ 1.7 ಮಿಲಿಯನ್ ಬಾರಿ ವೀಕ್ಷಣೆ ಪಡೆದಿದೆ.

Watch Madhur Bhandarkar directorial 'Indu Sarkar' film official trailer

'ಇಂದು ಸರ್ಕಾರ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಟಿ ಸುಪ್ರಿಯಾ ವಿನೋದ್ ಮತ್ತು ಸಂಜಯ್ ಗಾಂಧಿ ರವರ ಪಾತ್ರವನ್ನು ನೀಲ್ ನಿತಿನ್ ಮುಕೇಶ್ ನಿರ್ವಹಿಸಿದ್ದಾರೆ. ಅಲ್ಲದೇ 'ಪಿಂಕ್' ಚಿತ್ರ ಖ್ಯಾತಿಯ ನಟಿ ಕೃತಿ ಕುಲ್ಹರಿ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ 'ಇಂದು ಸರ್ಕಾರ್' ಚಿತ್ರವನ್ನು ಮಧು ಭಂಡಾರ್ಕರ್ ದೃಶ್ಯಗಳು, ಪಾತ್ರಧಾರಿಗಳ ವಸ್ತ್ರ ಎಲ್ಲದರಲ್ಲೂ 1975 ರ ಕಾಲವನ್ನು ಮರುಸೃಷ್ಟಿ ಮಾಡಿದ್ದಾರೆ.

Watch Madhur Bhandarkar directorial 'Indu Sarkar' film official trailer

1975-1977 ರ ಕಾಲಘಟ್ಟದ ಇಂದಿರಾ ಗಾಂಧಿ ಸರ್ಕಾರದ ಇತಿಹಾಸ ಕುರಿತ ಈ ಚಿತ್ರಕ್ಕೆ ಅನುಮಲಿಕ್, ಬಪ್ಪಿಲಹರಿ ಎಂಬುವರು ಸಂಗೀತ ಸಂಯೋಜನೆ ನೀಡಿದ್ದಾರೆ. ಈ ಚಿತ್ರ ಜುಲೈ 28 ರಂದು ತೆರೆ ಕಾಣಲಿದೆ. ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
'Page 3' fame Bollywood Director Madhur Bhandarkar directorial new hindi movie 'Indu Sarkar' official trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada