»   » ನವಾಜುದ್ದೀನ್ ಕಿಲ್ಲರ್ ಆದ 'ಬಹುಮೋಶೈ ಬಂದೂಕ್‌ಬಾಜ್' ಟ್ರೈಲರ್ ನೋಡಿ..

ನವಾಜುದ್ದೀನ್ ಕಿಲ್ಲರ್ ಆದ 'ಬಹುಮೋಶೈ ಬಂದೂಕ್‌ಬಾಜ್' ಟ್ರೈಲರ್ ನೋಡಿ..

Posted By:
Subscribe to Filmibeat Kannada

ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವವರು ನವಾಜುದ್ದೀನ್ ಸಿದ್ಧಿಕಿ. ಈಗ ತಮ್ಮ ಹಿಂದಿನ ಚಿತ್ರಗಳಲ್ಲಿ ಕಾಣಿಸಿಕೊಂಡಿರುವುದಕ್ಕಿಂತ ವಿಭಿನ್ನ ಲುಕ್‌ ನಲ್ಲಿ ತೆರೆಮೇಲೆ ಬರುತ್ತಿದ್ದಾರೆ.

ನವಾಜುದ್ದೀನ್ ಸಿದ್ಧಿಕಿ ನಟಿಸಿರುವ ಹೊಸ ಚಿತ್ರ 'ಬಹುಮೋಶೈ ಬಂದೂಕ್‌ಬಾಜ್' ಚಿತ್ರದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಬಾಲಿವುಡ್ ಸಿನಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಟ್ರೈಲರ್ ಬಿಡುಗಡೆ ಆದ 6 ದಿನಗಳಲ್ಲಿಯೇ ಯೂಟ್ಯೂಬ್ ನಲ್ಲಿ 6.2 ಮಿಲಿಯನ್ ಬಾರಿ ವೀಕ್ಷಣೆ ಪಡೆದುಕೊಂಡಿದೆ.

Watch Nawazuddin Siddiqui starrer 'Babumoshai Bandookbaaz' trailer

ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕ್ಕಿ ಅವರು ಬಾಬು ಪಾತ್ರದಲ್ಲಿ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡಿದ್ದು, ಸಾಮಾನ್ಯ ವ್ಯಕ್ತಿ ಥ್ರಿಲ್ಲಿಂಗ್ ವರ್ಲ್ಡ್ ಗೆ ಪಾದಾರ್ಪಣೆ ಮಾಡಿ ಕಾಂಟ್ರ್ಯಾಕ್ಟ್ ಕಿಲ್ಲರ್ ಆಗುವುದು ಅವರ ಪಾತ್ರದ ಕುರಿತ ಕಥೆ.

Watch Nawazuddin Siddiqui starrer 'Babumoshai Bandookbaaz' trailer

ನವಾಜುದ್ದೀನ್ ಸಿದ್ದಿಕಿ ಹೊರತುಪಡಿಸಿ ಉಳಿದಂತೆ ಚಿತ್ರದಲ್ಲಿ ಬಿದಿತಾ ಬಾಗ್, ಜತಿನ್ ಗೋಸ್ವಾಮಿ, ಶದ್ಧಾ ದಾಸ್, ಅನಿಲ್ ಜಾರ್ಜ್, ಭಗ್ವಾನ್ ತಿವಾರಿ ಮತ್ತು ಇತರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಕುಶನ್ ನಂದಿ ಆಕ್ಷನ್ ಕಟ್ ಹೇಳಿದ್ದು, ಕಿರಣ್ ಶ್ರಾಫ್, ಅಶ್ಮಿತ್ ಕುಂದರ್ ಎಂಬುವರೊಂದಿಗೆ ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ.

ನವಾಜುದ್ದೀನ್ ಸಿದ್ಧಿಕಿ ಅಭಿನಯದ 'ಬಹುಮೋಶೈ ಬಂದೂಕ್‌ಬಾಜ್' ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ.

English summary
Nawazuddin Siddiqui starrer Hindi Movie 'Babumoshai Bandookbaaz' trailer is out and looks Dashing/Rocking. Watch trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada