»   » ಟ್ರೈಲರ್‌ನಲ್ಲೇ ಕುತೂಹಲ ಹೆಚ್ಚಿಸಿತು ರಣಬೀರ್-ಕತ್ರಿನಾ 'ಜಗ್ಗಾ ಜಸೂಸ್'!

ಟ್ರೈಲರ್‌ನಲ್ಲೇ ಕುತೂಹಲ ಹೆಚ್ಚಿಸಿತು ರಣಬೀರ್-ಕತ್ರಿನಾ 'ಜಗ್ಗಾ ಜಸೂಸ್'!

Posted By:
Subscribe to Filmibeat Kannada

ಬಾರ್ಬಿ ಡಾಲ್ ಕತ್ರಿನಾ ಕೈಫ್ ಮತ್ತು ನಟ ರಣಬೀರ್ ಕಪೂರ್ 'ಜಗ್ಗಾ ಜಸೂಸ್' ಸಿನಿಮಾ ಚಿತ್ರೀಕರಣ ಶುರುವಾದಾಗಿನಿಂದಲೂ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಇತ್ತೀಚೆಗೆ ಚಿತ್ರ ಪ್ರಚಾರ ವೇಳೆ ಒಬ್ಬರನೊಬ್ಬರು ಕಾಲೆಳೆದುಕೊಂಡು, ನೋಡುಗರ ಕಣ್ಣಿಗೆ ಕಾಮಿಡಿ ಪೀಸ್ ಗಳಾಗಿದ್ದಾರೆ. ಈಗ ಇವರಿಬ್ಬರು ತೆರೆಮೇಲೆ ಹೇಗೆಲ್ಲಾ ಕಿತ್ತಾಡಿದ್ದಾರೆ ಎಂಬುದನ್ನು ನೋಡುವ ಸಂದರ್ಭ ಹತ್ತಿರಕ್ಕೆ ಬಂದಿದೆ.

'ಐ ಲವ್ ಯು' ಎಂದಿದಕ್ಕೆ ಕತ್ರಿನಾಳಿಂದ ರಣಬೀರ್‌ಗೆ ಕಪಾಳ ಮೋಕ್ಷ

ಹೌದು, ಕ್ಯಾಟ್ ಮತ್ತು ರಣಬೀರ್ ಅಭಿನಯದ 'ಜಗ್ಗಾ ಜಸೂಸ್' ಚಿತ್ರ ಜುಲೈ 14 ರಂದು ಬಿಡುಗಡೆ ಆಗಲಿದೆ. ಈಗ ಚಿತ್ರತಂಡ ಅಫೀಶಿಯಲ್ ಟ್ರೈಲರ್ ಬಿಡುಗಡೆ ಮಾಡಿದ್ದು ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಕಾರಣ ಸಿನಿಮಾ ಅಷ್ಟೊಂದು ಅದ್ಭುತವಾಗಿರುವುದು ಟ್ರೈಲರ್ ನಿಂದ ಸ್ಪಷ್ಟವಾಗಿದೆ.

Watch Ranbir Kapoor and Katrina Kaif Starrer 'Jagga Jasoos' film Official Trailer

'ದಂಗಲ್' ಚಿತ್ರದಲ್ಲಿ ಅಮೀರ್ ಖಾನ್ ಕಿವಿ ನೆಟ್ಟಗೆ ಮಾಡಿಕೊಂಡು ಎಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರೋ, ಅದಕ್ಕಿಂದ ಎರಡು ಪಟ್ಟು ಕ್ಯೂಟ್ ಆಗಿ ಈಗ ರಣಬೀರ್ ಈ ಚಿತ್ರದಲ್ಲಿ ಒಂದು ಸೈಡ್ ನಲ್ಲಿ ತಲೆಕೂದಲು ನೆಟ್ಟಗೆ ಮಾಡಿಕೊಂಡು ಒಂದು ಕನ್ನಡಕ ಹಾಕಿಕೊಂಡು ಎಲ್ಲರ ಕಣ್ಮನಸೆಳೆದಿದ್ದಾರೆ. ಇನ್ನೂ ಅಷ್ಟೇ ಸುಂದರವಾಗಿ ಕತ್ರಿನಾ ಕೈಫ್ ಸಹ ವಿಭಿನ್ನವಾಗಿ ಅಭಿನಯಿಸಿದ್ದಾರೆ.

ಅನುರಾಗ್ ಬಸು ನಿರ್ದೇಶನದ 'ಜಗ್ಗಾ ಜಸೂಸ್' ಚಿತ್ರವನ್ನು 'ವಾಲ್ಟ್ ಡಿಸ್ನಿ ಪಿಕ್ಚರ್ಸ್' ಪ್ರೊಡಕ್ಷನ್ ಕಂಪನಿ ಅಡಿಯಲ್ಲಿ ಸಿದ್ಧಾರ್ಥ್ ರಾಯ್ ಕಪೂರ್, ಅನುರಾಗ್ ಬಸು ಮತ್ತು ರಣಬೀರ್ ಕಪೂರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಮೇಕಿಂಗ್ ದೃಷ್ಟಿಯಿಂದಲೂ ತುಂಬಾ ರಿಚ್‌ ಆಗಿ ಚಿತ್ರ ಮೂಡಿಬಂದಿದ್ದು, ಸಂಪೂರ್ಣ ಮನರಂಜನೆ ಜೊತೆಗೆ ಭಾವನಾತ್ಮಕವಾಗಿ ಪ್ರೇಕ್ಷಕರ ಗಮನ ಸೆಳೆಯುವ ಎಲ್ಲಾ ಭರವಸೆಯನ್ನು ಚಿತ್ರ ಮೂಡಿಸಿದೆ. ಚಿತ್ರದ ಟ್ರೈಲರ್ ಈ ಕೆಳಗಿನಂತಿದೆ ನೋಡಿ.

English summary
Ranbir Kapoor and Katrina Kaif Starrer Hindi movie 'Jagga Jasoos' Official Trailer released. This movie is releasing on July 14.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada