ಹೈ ಹೀಲ್ಸ್ ತಂದ ಎಡವಟ್ಟು: ಆಯತಪ್ಪಿ ಬಿದ್ದ ನಟಿ ಕಾಜೋಲ್.!
Recommended Video

ಹೈ ಹೀಲ್ಸ್ ನೋಡೋಕಷ್ಟೇ ಚೆಂದ.. ಪಾಯಿಂಟೆಡ್ ಹೀಲ್ಸ್ ಧರಿಸಿ ಅರ್ಧ ಗಂಟೆ ನಡೆದಾಡಿದರೂ, ಕಾಲು ನೋವು ಗ್ಯಾರೆಂಟಿ. ಬ್ಯಾಲೆನ್ಸ್ ತಪ್ಪಿ ಬಿದ್ದು ಬಿಟ್ಟರೆ, ಕಾಲು ಮುರಿತ ಖಂಡಿತ. ಅಂಥದ್ರಲ್ಲಿ ನಮ್ಮ ನಟಿಯರು, ಮಾಡೆಲ್ ಗಳು ಅದ್ಹೇಗೆ ಅಷ್ಟು ಸಲೀಸಾಗಿ ಹೈ ಹೀಲ್ಡ್ ಧರಿಸಿ ನಡೆದಾಡುತ್ತಾರೆ ಎಂಬ ಅನುಮಾನ ಹಲವರಿಗೆ ಇರಬಹುದು.
ನಟಿಯರು ಹಾಗೂ ಮಾಡೆಲ್ ಗಳಿಗೂ ಹೈ ಹೀಲ್ಸ್ ನಿಂದ ಕಿರಿಕಿರಿ ತಪ್ಪಿದ್ದಲ್ಲ. ಅವರುಗಳಿಗೆ ಅವೆಲ್ಲ ಅಭ್ಯಾಸ ಆಗ್ಹೋಗಿರಬಹುದು. ಆದ್ರೆ, ಒಮ್ಮೊಮ್ಮೆ ಹೈ ಹೀಲ್ಸ್ ನಿಂದ ನಟಿಯರು ಎಂಥ ಮುಜುಗರಕ್ಕೆ ಈಡಾಗುತ್ತಾರೆ ಅನ್ನೋದಕ್ಕೆ ನಟಿ ಕಾಜೋಲ್ ರವರ ಈ ಒಂದು ವಿಡಿಯೋ ಸಾಕ್ಷಿ.
ಅಷ್ಟಕ್ಕೂ, ನಟಿ ಕಾಜೋಲ್ ಮುಂಬೈನ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ಗೆ ಭೇಟಿ ಕೊಟ್ಟಿದ್ದರು. ಬಿಳಿ ಬಣ್ಣ ಡ್ರೆಸ್ ಧರಿಸಿ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದ ನಟಿ ಕಾಜೋಲ್ ಹೆಲ್ತ್ ಅಂಡ್ ಗ್ಲೋ ಸ್ಟೋರ್ ಉದ್ಘಾಟನೆ ಮಾಡಲು ಆಗಮಿಸುತ್ತಿದ್ದರು.
ಹೈ ಹೀಲ್ಸ್ ಧರಿಸಿ ನಡೆದು ಬರುತ್ತಿದ್ದ ನಟಿ ಕಾಜೋಲ್ ಇದ್ದಕ್ಕಿದ್ದಂತೆ ಆಯಾತಪ್ಪಿ ಕೆಳಗೆ ಬಿದ್ದರು. ಪುಣ್ಯಕ್ಕೆ ಹಿಂದೆ-ಮುಂದೆ ಬೌನ್ಸರ್ ಗಳಿದ್ದ ಕಾರಣ, ತಕ್ಷಣ ನಟಿ ಕಾಜೋಲ್ ರನ್ನ ಹಿಡಿದುಕೊಂಡರು. ಇಲ್ಲಾಂದ್ರಿದ್ರೆ, ನಟಿ ಕಾಜೋಲ್ ಕಾಲಿಗೆ ಖಂಡಿತ ಪೆಟ್ಟಾಗುತ್ತಿತ್ತು.

ನಟಿ ಕಾಜೋಲ್ ರನ್ನ ನೋಡಲು ನೂರಾರು ಜನ ಮಾಲ್ ನಲ್ಲಿ ಜಮಾಯಿಸಿದ್ದರು. ಅದೇ ನೂರಾರು ಜನರ ಮುಂದೆ ಬ್ಯಾಲೆನ್ಸ್ ತಪ್ಪಿ ಬಿದ್ದು ನಟಿ ಕಾಜೋಲ್ ಮುಜುಗರ ಎದುರಿಸುವಂತಾಯಿತು.


Click it and Unblock the Notifications











