For Quick Alerts
  ALLOW NOTIFICATIONS  
  For Daily Alerts

  ಅರೇ.. ಏರ್ ಪೋರ್ಟ್ ನಲ್ಲಿ ಇದೇನ್ ಮಾಡ್ಬಿಟ್ರು ನಟಿ ಪ್ರಿಯಾಂಕಾ.?

  By Harshitha
  |

  ಇತ್ತೀಚಿನ ದಿನಗಳಲ್ಲಂತೂ ನಟಿ ಪ್ರಿಯಾಂಕಾ ಛೋಪ್ರಾ ಕುಂತ್ರೂ, ನಿಂತ್ರೂ ಸುದ್ದಿ ಆಗ್ತಿದ್ದಾರೆ.

  ಬೇಸ್ ಬಾಲ್ ಗೇಮ್ ನೋಡಲು ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಒಟ್ಟಿಗೆ ಹೋದ್ಮೇಲಂತೂ ಎಲ್ಲರ ಕಣ್ಣು ಇವರಿಬ್ಬರ ಮೇಲೆ ಬಿದ್ದಿದೆ. ಪ್ರಿಯಾಂಕಾ ಹಾಗೂ ನಿಕ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗುಸುಗುಸು ಎಲ್ಲಾ ಕಡೆ ಹಬ್ಬಿದೆ.

  ಅದರಲ್ಲೂ, ಪ್ರಿಯಾಂಕಾ ಕೈಹಿಡಿದು ನಿಕ್ ಭಾರತಕ್ಕೆ ಬಂದ ಮೇಲಂತೂ ಈ ಜೋಡಿ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಅಂತಲೇ ಎಲ್ಲರೂ ಮಾತನಾಡಿಕೊಳ್ತಿದ್ದಾರೆ. ಇನ್ನೆರಡು ಮೂರು ತಿಂಗಳಲ್ಲಿ ಪ್ರಿಯಾಂಕಾ-ನಿಕ್ ಮದುವೆ ನಡೆಯಲಿದ್ದು, ಈಗಾಗಲೇ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ ಮುಗಿದು ಹೋಗಿದೆ ಅಂತ ಹೇಳುವವರೂ ಇದ್ದಾರೆ.

  ಇದರಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದನ್ನ ಪ್ರಿಯಾಂಕಾ ಆಗಲಿ, ನಿಕ್ ಜೊನಾಸ್ ಆಗಲಿ ಖಚಿತ ಪಡಿಸಿಲ್ಲ. ಆದ್ರೆ, ಇತ್ತೀಚೆಗಷ್ಟೇ ಏರ್ ಪೋರ್ಟ್ ಒಂದರಲ್ಲಿ ಪ್ರಿಯಾಂಕಾ ಛೋಪ್ರಾ ಬಂದಿಳಿದಾಗ, ಅವರ ವರ್ತನೆ ಕೆಲವರ ತಲೆಗೆ ಹುಳ ಬಿಟ್ಟ ಹಾಗಾಗಿದೆ. ಮುಂದೆ ಓದಿರಿ...

  ಭಾರತಕ್ಕೆ ವಾಪಸ್ ಬಂದಾಗ...

  ಭಾರತಕ್ಕೆ ವಾಪಸ್ ಬಂದಾಗ...

  ಗೆಳೆಯ ನಿಕ್ ಜೊನಾಸ್ ಕಾನ್ಸರ್ಟ್ ನಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಛೋಪ್ರಾ ಸಿಂಗಾಪುರಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಭಾರತಕ್ಕೆ ಬಂದಿಳಿದ ಪ್ರಿಯಾಂಕಾ ಛೋಪ್ರಾ ಇದೀಗ ಸದ್ದು ಮಾಡುತ್ತಿರುವುದು ಏರ್ ಪೋರ್ಟ್ ನಲ್ಲಿ ಸೆರೆಯಾದ ಒಂದು ವಿಡಿಯೋ ಮೂಲಕ.

  ನಟಿ ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಇವರೇನಾ.?

  ವಿಡಿಯೋ ಇಲ್ಲಿದೆ ನೋಡಿ...

  ಏರ್ ಪೋರ್ಟ್ ಗೆ ಪ್ರಿಯಾಂಕಾ ಛೋಪ್ರಾ ಬಂದಿಳಿದ ಕೂಡಲೆ ಫೋಟೋಗ್ರಾಫರ್ ಗಳು ಪ್ರಿಯಾಂಕಾ ಛೋಪ್ರಾ ಫೋಟೋಗಳನ್ನು ಸೆರೆಹಿಡಿಯಲು ತಯಾರಾದರು. ಈ ವೇಳೆ ಎಡಗೈ ಉಂಗುರ ಬೆರಳಿಗೆ ತೊಟ್ಟಿದ್ದ ವಜ್ರದ ಉಂಗುರ(?)ವನ್ನ ಬಿಚ್ಚಿ ಪ್ರಿಯಾಂಕಾ ಜೇಬಿನ ಒಳಗೆ ಹಾಕೊಂಡ ದೃಶ್ಯ ಕ್ಯಾಮರಾ ಕಂಗಳಲ್ಲಿ ಸೆರೆ ಆಗಿದೆ.

  ನಿಕ್ ಜೊನಾಸ್-ಪ್ರಿಯಾಂಕಾ ಮದುವೆ ನಡೆಯುವುದು 'ಈ' ದಿನ.?

  ಅದು ಎಂಗೇಜ್ ಮೆಂಟ್ ಉಂಗುರ.?

  ಅದು ಎಂಗೇಜ್ ಮೆಂಟ್ ಉಂಗುರ.?

  ಕಳೆದ ಜುಲೈ 18 ರಂದು ಪ್ರಿಯಾಂಕಾ ಛೋಪ್ರಾ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು. ಜನ್ಮದಿನದಂದೇ ಪ್ರಿಯಾಂಕಾಗೆ ನಿಕ್ ಪ್ರಪೋಸ್ ಮಾಡಿ, ಕೈ ಬೆರಳಿಗೆ ಉಂಗುರ ತೊಡಿಸಿದ್ದಾರೆ ಎಂಬ ಗುಲ್ಲು ಬಾಲಿವುಡ್ ತುಂಬಾ ಹಬ್ಬಿತ್ತು. ಇದೀಗ ಏರ್ ಪೋರ್ಟ್ ನಲ್ಲಿ ಪ್ರಿಯಾಂಕಾ ಬಚ್ಚಿಟ್ಟುಕೊಂಡಿದ್ದು ಅದೇ ಎಂಗೇಜ್ ಮೆಂಟ್ ರಿಂಗ್ ಇರಬಹುದಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.

  ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!

  ಬಚ್ಚಿಟ್ಟುಕೊಂಡಿದ್ದು ಯಾಕೆ.?

  ಬಚ್ಚಿಟ್ಟುಕೊಂಡಿದ್ದು ಯಾಕೆ.?

  ಸಣ್ಣ ಪುಟ್ಟ ವಿಚಾರಕ್ಕೂ ಸುದ್ದಿ ಆಗುತ್ತಿರುವ ಈ ಸಮಯದಲ್ಲಿ, ಪ್ರಿಯಾಂಕಾ ತಮ್ಮ ಉಂಗುರವನ್ನು ಬಿಚ್ಚಿಟ್ಟು ಎಲ್ಲರ ಕಣ್ಣರಳಿಸಿದ್ದಾರೆ. ಒಂದ್ವೇಳೆ, ಪ್ರಿಯಾಂಕಾ ಕೈಯಲ್ಲಿ ಆ ಉಂಗುರ ಇದ್ದಿದ್ರೆ, ಇಷ್ಟೊಂದು ಗಮನ ಸೆಳೆಯುತ್ತಿರಲಿಲ್ವೇನೋ.. ಆದ್ರೆ, ಅದನ್ನ ಬಿಚ್ಚಿಟ್ಟು.. ಕ್ಯಾಮರಾದಿಂದ ಬಚ್ಚಿಟ್ಟು ಪ್ರಿಯಾಂಕಾ ಇದೀಗ ಬ್ರೇಕಿಂಗ್ ನ್ಯೂಸ್ ಮಾಡ್ತಿದ್ದಾರೆ.

  English summary
  Bollywood Actress Priyanka Chopra pulls engagement ring out of her finger at Airport. Watch video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X