ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಸಲ್ಮಾನ್ ಖಾನ್: ಇಲ್ಲಿದೆ ನೋಡಿ ವಿಡಿಯೋ
'ಹಮ್ ಫಿಟ್ ತೋ ಇಂಡಿಯಾ ಫಿಟ್' (#HumFitThoIndiaFit) ಎಂಬ ಹ್ಯಾಶ್ ಟ್ಯಾಗ್ ಅಡಿ ಫಿಟ್ನೆಸ್ ಅಭಿಯಾನವನ್ನು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಆರಂಭಿಸಿದ್ಮೇಲೆ, ಇಡೀ ಭಾರತದಲ್ಲಿ ಈ ಚಾಲೆಂಜ್ ಟ್ರೆಂಡಿಂಗ್ ಆಗಿದೆ.
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಹೃತಿಕ್ ರೋಷನ್ ಸೇರಿದಂತೆ ಹಲವರು ಈಗಾಗಲೇ ಈ ಚಾಲೆಂಜ್ ನ ಸ್ವೀಕರಿಸಿದ್ದಾರೆ. ಕ್ರಿಕೆಟ್ ಹಾಗೂ ಬಾಲಿವುಡ್ ಲೋಕದಲ್ಲಿ ಈ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬರೀ ಬಾಲಿವುಡ್ ಮಾತ್ರ ಅಲ್ಲ, ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿಯೂ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ಚಾಲ್ತಿಯಲ್ಲಿದೆ.
ಸದ್ಯ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ನ ಸ್ವೀಕರಿಸಿರುವವರು ಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್. 'ಭಾರತ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದರೂ, ರಾಜಕಾರಣಿಯೊಬ್ಬರು ಎಸೆದ ಸವಾಲನ್ನು ಸಲ್ಮಾನ್ ಖಾನ್ ಸ್ವೀಕರಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫಿಟ್ನೆಸ್ ವಿಡಿಯೋನ ಸಲ್ಮಾನ್ ಖಾನ್ ಶೇರ್ ಮಾಡಿದ್ದಾರೆ. ಸೈಕ್ಲಿಂಗ್ ಹಾಗೂ ಜಿಮ್ ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋನ ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ.
ಪ್ರತಿ ನಿತ್ಯ ವ್ಯಾಯಾಮ ಮಾಡಿ ನಾವು ಆರೋಗ್ಯವಾಗಿದ್ದರೆ, ಇಡೀ ದೇಶವೇ ಆರೋಗ್ಯವಾಗಿರುತ್ತದೆ ಅನ್ನೋದು ಈ ಚಾಲೆಂಜ್ ನ ಉದ್ದೇಶ.


Click it and Unblock the Notifications











