»   » ಸಲ್ಮಾನ್ ಗಾನಬಜಾನ ಕೇಳಿ, ರೋಮ್ಯಾಂಟಿಕ್ ಮೂಡಲ್ಲಿ ತೇಲಾಡಿ...

ಸಲ್ಮಾನ್ ಗಾನಬಜಾನ ಕೇಳಿ, ರೋಮ್ಯಾಂಟಿಕ್ ಮೂಡಲ್ಲಿ ತೇಲಾಡಿ...

Posted By:
Subscribe to Filmibeat Kannada

ಪರದೆ ಮೇಲೆ ಜಬರ್ದಸ್ತ್ ಆಕ್ಷನ್ ಮಾಡೋದು ಮಾತ್ರ ಅಲ್ಲ, ಸಲ್ಮಾನ್ ಖಾನ್ ಉತ್ತಮ ಗಾಯಕ ಕೂಡ ಹೌದು ಅಂತ ಈಗಾಗ್ಲೇ 'ಕಿಕ್' ಸಿನಿಮಾದಲ್ಲಿ ಪ್ರೂವ್ ಮಾಡಿದ್ದಾರೆ. ಕನ್ನಡ ಸೆಲೆಬ್ರಿಟೀಸ್ ತರಹ ಆಕ್ಟಿಂಗ್ ಜೊತೆ ಸಿಂಗಿಂಗ್ ನೂ ಪ್ಯಾಶನ್ ಆಗಿ ಪರಿಗಣಿಸಿರುವ ಸಲ್ಲು ಭಾಯ್ ಇದೀಗ ಇತರರ ಚಿತ್ರಗಳಿಗೂ ಹಾಡು ಹಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ.

ಆದಿತ್ಯ ಪಾಂಚೋಲಿ ಪುತ್ರ ಸೂರಜ್ ಪಾಂಚೋಲಿ ಅಭಿನಯದ ಚೊಚ್ಚಲ ಚಿತ್ರ 'ಹೀರೋ' ಟೈಟಲ್ ಹಾಡಿಗೆ ಸಲ್ಮಾನ್ ಖಾನ್ ದನಿಯಾಗಿದ್ದಾರೆ. ಫುಲ್ ಫೀಲಿಂಗ್ ನಲ್ಲಿ ಸಲ್ಮಾನ್ ಹಾಡಿರುವ ''ಮೈ ಹೂಂ ಹೀರೋ ತೇರಾ..'' ಹಾಡಿನ ಟೀಸರ್ ಇಲ್ಲಿದೆ ನೋಡಿ....

Watch video: Salman Khan sings for 'Hero'

ಸಲ್ಮಾನ್ ಸುಮಧುರವಾಗಿ ಹಾಡಿರುವ ಈ ಹಾಡು ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ. ಅಂದ್ಹಾಗೆ, ಸಲ್ಮಾನ್ ಖಾನ್ ಈ ಹಾಡು ಹಾಡುವುದಕ್ಕೆ ಕಾರಣ ಸೂರಜ್ ಪಾಂಚೋಲಿ. ವರ್ಷಗಳಿಂದಲೂ ಸೂರಜ್ ಪಾಂಚೋಲಿ ಮತ್ತವರ ತಂದೆ ಆದಿತ್ಯ ಪಾಂಚೋಲಿ ಸಲ್ಲುಗೆ ಆಪ್ತರು. ಹಾಗ್ನೋಡಿದ್ರೆ, ಸೂರಜ್ ಗೆ ಬೆನ್ನೆಲುಬಾಗಿ ನಿಂತಿರುವುದೇ ಸಲ್ಲು ಮೀಯಾ. 'ಹೀರೋ' ಚಿತ್ರಕ್ಕೆ ಸಲ್ಮಾನ್ ಬಂಡವಾಳ ಕೂಡ ಹಾಕಿದ್ದಾರೆ. [ಸೂರಜ್ ಪಾಂಚೋಲಿ ಅತ್ತಿದ್ದಕ್ಕೆ ಭಾವುಕರಾದ ಸಲ್ಮಾನ್]

ಇಷ್ಟೆಲ್ಲಾ ಇರುವಾಗ, ಸಲ್ಲು ಒಂದು ಹಾಡು ಹಾಡಿದರೆ ಚೆನ್ನ ಅಂತ 'ಹೀರೋ' ಚಿತ್ರತಂಡ ನಿರ್ಧರಿಸಿದ್ದೇ ತಡ, ರಾತ್ರೋ ರಾತ್ರಿ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ಸಲ್ಲು ಗಾನ ಬಜಾಯ್ಸಿದ್ದಾರೆ. 1983 ರಲ್ಲಿ ತೆರೆಕಂಡ 'ಹೀರೋ' ಚಿತ್ರದ ರೀಮೇಕ್ ಇದು. ಸೆಪ್ಟೆಂಬರ್ ನಲ್ಲಿ ಹೊಸ 'ಹೀರೋ' ತೆರೆಗೆ ಬರಲಿದ್ದಾನೆ.

English summary
Bollywood Actor Salman Khan, for the first time has lent his voice to another Actor, Sooraj Pancholi for his debut movie 'Hero'. Yes, Salman Khan has crooned the title track for Hindi film 'Hero'. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada