ಮತ್ತೆ ಗುಡ್ ನ್ಯೂಸ್ ಕೊಡ್ತಾರಾ ಕರೀನಾ ಕಪೂರ್ ಖಾನ್.?

ಬಾಲಿವುಡ್ ನಲ್ಲಿ ಪ್ರತಿಭಾವಂತ ನಟಿಯರ ಪೈಕಿ ಕರೀನಾ ಕಪೂರ್ ಖಾನ್ ಕೂಡ ಒಬ್ಬರು. 'ಹೀರೋಯಿನ್', 'ಚಮೇಲಿ', 'ವೀರೇ ದಿ ವೆಡ್ಡಿಂಗ್' ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ಕರೀನಾ ಕಪೂರ್ ಖಾನ್.

ಪಟೌಡಿ ನವಾಬ, ನಟ ಸೈಫ್ ಅಲಿ ಖಾನ್ ಜೊತೆಗೆ ಮದುವೆ ಆಗಿ ಒಂದು ಮಗುವಿನ ತಾಯಿ ಆಗಿರುವ ಕರೀನಾ ಕಪೂರ್ ಖಾನ್ ಇದೀಗ ಬಣ್ಣದ ಪ್ರಪಂಚದಲ್ಲಿ ಮತ್ತೆ ಬಿಜಿಯಾಗಿದ್ದಾರೆ. 'ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಕರೀನಾ ಕಪೂರ್ ನಟಿಸಿದ್ದಾರೆ.

ಐ.ವಿ.ಎಫ್ ಮೂಲಕ ಗರ್ಭ ಧರಿಸುವ ಮಹಿಳೆಯರ ಸುತ್ತ 'ಗುಡ್ ನ್ಯೂಸ್' ಚಿತ್ರದ ಕಥೆ ಹೆಣೆಯಲಾಗಿದ್ದು, ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. 'ಗುಡ್ ನ್ಯೂಸ್' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಕರೀನಾ ಕಪೂರ್ ಖಾನ್ ಗೆ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ.! ''ನಿಜ ಜೀವನದಲ್ಲಿ ಮತ್ತೆ ಗುಡ್ ನ್ಯೂಸ್ ಕೊಡ್ತೀರಾ.?'' ಅಂತ.!

we-are-not-planning-on-having-a-second-child-as-of-now-says-kareena-kapoor-khan

ಪದೇ ಪದೇ ಎರಡನೇ ಮಗುವಿನ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿರುವ ಕಾರಣ, ''ಎರಡನೇ ಮಗುವಿನ ಬಗ್ಗೆ ನಾನು ಮತ್ತು ನನ್ನ ಪತಿ ಸೈಫ್ ಅಲಿ ಖಾನ್ ಪ್ಲಾನ್ ಮಾಡಿಲ್ಲ. ನನ್ನ ಮಗ ತೈಮೂರ್ ಅಲಿ ಖಾನ್ ಜೊತೆಗೆ ನಾವು ತುಂಬಾ ಖುಷಿಯಾಗಿ ಇದ್ದೇವೆ. ನಾನು ಮತ್ತು ಸೈಫ್ ಕೆಲಸದಲ್ಲಿ ತುಂಬಾ ಬಿಜಿಯಾಗಿದ್ದೇವೆ. ವೃತ್ತಿ ಮತ್ತು ವೈಯುಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಿದೆ'' ಅಂತ ಕರೀನಾ ಕಪೂರ್ ಖಾನ್ ಸ್ಪಷ್ಟ ಪಡಿಸಿದ್ದಾರೆ.

2012 ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016 ರಲ್ಲಿ ಗಂಡು ಮಗುವಿಗೆ ಕರೀನಾ ಜನ್ಮ ನೀಡಿದರು. ಮಗ ತೈಮೂರ್ ಗಾಗಿ ಎರಡು ವರ್ಷ ಬ್ರೇಕ್ ಪಡೆದಿದ್ದ ಕರೀನಾ ಕಪೂರ್ ಖಾನ್ 2018 ರಲ್ಲಿ 'ವೀರೇ ದಿ ವೆಡ್ಡಿಂಗ್' ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ ಆರಂಭಿಸಿದರು.

ಇದೀಗ 'ಗುಡ್ ನ್ಯೂಸ್' ಚಿತ್ರದಲ್ಲಿ ಗರ್ಭಿಣಿ ಆಗಿ ಕರೀನಾ ಕಾಣಿಸಿಕೊಂಡಿದ್ದಾರೆ. ಕರೀನಾ ಕೈಯಲ್ಲಿ 'ಅಂಗ್ರೇಜಿ ಮೀಡಿಯಂ' ಮತ್ತು 'ಲಾಲ್ ಸಿಂಗ್ ಚಡ್ಡಾ' ಚಿತ್ರಗಳಿವೆ.

More from Filmibeat

English summary
We are not planning on having a second child as of now says Kareena Kapoor Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X