twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಗುಡ್ ನ್ಯೂಸ್ ಕೊಡ್ತಾರಾ ಕರೀನಾ ಕಪೂರ್ ಖಾನ್.?

    |

    ಬಾಲಿವುಡ್ ನಲ್ಲಿ ಪ್ರತಿಭಾವಂತ ನಟಿಯರ ಪೈಕಿ ಕರೀನಾ ಕಪೂರ್ ಖಾನ್ ಕೂಡ ಒಬ್ಬರು. 'ಹೀರೋಯಿನ್', 'ಚಮೇಲಿ', 'ವೀರೇ ದಿ ವೆಡ್ಡಿಂಗ್' ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ಕರೀನಾ ಕಪೂರ್ ಖಾನ್.

    ಪಟೌಡಿ ನವಾಬ, ನಟ ಸೈಫ್ ಅಲಿ ಖಾನ್ ಜೊತೆಗೆ ಮದುವೆ ಆಗಿ ಒಂದು ಮಗುವಿನ ತಾಯಿ ಆಗಿರುವ ಕರೀನಾ ಕಪೂರ್ ಖಾನ್ ಇದೀಗ ಬಣ್ಣದ ಪ್ರಪಂಚದಲ್ಲಿ ಮತ್ತೆ ಬಿಜಿಯಾಗಿದ್ದಾರೆ. 'ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಕರೀನಾ ಕಪೂರ್ ನಟಿಸಿದ್ದಾರೆ.

    ಐ.ವಿ.ಎಫ್ ಮೂಲಕ ಗರ್ಭ ಧರಿಸುವ ಮಹಿಳೆಯರ ಸುತ್ತ 'ಗುಡ್ ನ್ಯೂಸ್' ಚಿತ್ರದ ಕಥೆ ಹೆಣೆಯಲಾಗಿದ್ದು, ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. 'ಗುಡ್ ನ್ಯೂಸ್' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಕರೀನಾ ಕಪೂರ್ ಖಾನ್ ಗೆ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ.! ''ನಿಜ ಜೀವನದಲ್ಲಿ ಮತ್ತೆ ಗುಡ್ ನ್ಯೂಸ್ ಕೊಡ್ತೀರಾ.?'' ಅಂತ.!

    we-are-not-planning-on-having-a-second-child-as-of-now-says-kareena-kapoor-khan

    ಪದೇ ಪದೇ ಎರಡನೇ ಮಗುವಿನ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿರುವ ಕಾರಣ, ''ಎರಡನೇ ಮಗುವಿನ ಬಗ್ಗೆ ನಾನು ಮತ್ತು ನನ್ನ ಪತಿ ಸೈಫ್ ಅಲಿ ಖಾನ್ ಪ್ಲಾನ್ ಮಾಡಿಲ್ಲ. ನನ್ನ ಮಗ ತೈಮೂರ್ ಅಲಿ ಖಾನ್ ಜೊತೆಗೆ ನಾವು ತುಂಬಾ ಖುಷಿಯಾಗಿ ಇದ್ದೇವೆ. ನಾನು ಮತ್ತು ಸೈಫ್ ಕೆಲಸದಲ್ಲಿ ತುಂಬಾ ಬಿಜಿಯಾಗಿದ್ದೇವೆ. ವೃತ್ತಿ ಮತ್ತು ವೈಯುಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಿದೆ'' ಅಂತ ಕರೀನಾ ಕಪೂರ್ ಖಾನ್ ಸ್ಪಷ್ಟ ಪಡಿಸಿದ್ದಾರೆ.

    ಮಾಲ್ದೀವ್ಸ್ ನಲ್ಲಿ ಬಿಕಿನಿ ತೊಟ್ಟ ಕರೀನಾ: ಮುನಿಸಿಕೊಂಡ ನೆಟ್ಟಿಗರು.!ಮಾಲ್ದೀವ್ಸ್ ನಲ್ಲಿ ಬಿಕಿನಿ ತೊಟ್ಟ ಕರೀನಾ: ಮುನಿಸಿಕೊಂಡ ನೆಟ್ಟಿಗರು.!

    2012 ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2016 ರಲ್ಲಿ ಗಂಡು ಮಗುವಿಗೆ ಕರೀನಾ ಜನ್ಮ ನೀಡಿದರು. ಮಗ ತೈಮೂರ್ ಗಾಗಿ ಎರಡು ವರ್ಷ ಬ್ರೇಕ್ ಪಡೆದಿದ್ದ ಕರೀನಾ ಕಪೂರ್ ಖಾನ್ 2018 ರಲ್ಲಿ 'ವೀರೇ ದಿ ವೆಡ್ಡಿಂಗ್' ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ ಆರಂಭಿಸಿದರು.

    ಕರೀನಾ ಕಪೂರ್ ಖಾನ್ ಗೆ ಕಮ್ಮಿ ಆಗಿಲ್ಲ ಬೇಡಿಕೆ: ಸಂಭಾವನೆ ದಿಢೀರ್ ಏರಿಕೆ.!ಕರೀನಾ ಕಪೂರ್ ಖಾನ್ ಗೆ ಕಮ್ಮಿ ಆಗಿಲ್ಲ ಬೇಡಿಕೆ: ಸಂಭಾವನೆ ದಿಢೀರ್ ಏರಿಕೆ.!

    ಇದೀಗ 'ಗುಡ್ ನ್ಯೂಸ್' ಚಿತ್ರದಲ್ಲಿ ಗರ್ಭಿಣಿ ಆಗಿ ಕರೀನಾ ಕಾಣಿಸಿಕೊಂಡಿದ್ದಾರೆ. ಕರೀನಾ ಕೈಯಲ್ಲಿ 'ಅಂಗ್ರೇಜಿ ಮೀಡಿಯಂ' ಮತ್ತು 'ಲಾಲ್ ಸಿಂಗ್ ಚಡ್ಡಾ' ಚಿತ್ರಗಳಿವೆ.

    English summary
    We are not planning on having a second child as of now says Kareena Kapoor Khan.
    Wednesday, December 18, 2019, 7:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X