ಸುಂದರ ಯುವತಿಯನ್ನು ಮಂಚಕ್ಕೆ ಕರೆದ ಬಿಗ್ ಬಾಸ್ ಸ್ಫರ್ಧಿ?ಸೆಲೆಬ್ರಿಟಿ ಇಮೇಜ್ ಮಣ್ಣುಪಾಲು-ಚಾಟ್ ಲೀಕ್
ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟಾತಿ ಕೆಟ್ಟ ಸಂದೇಶಗಳನ್ನು ಕಳಿಸೋದು, ಹೇಗೋ ಬಲೆಗೆ ಕೆಡವಿಕೊಂಡು ಬ್ಲಾಕ್‌ಮೇಲ್ ಮಾಡೋದೂ ಸೇರಿದಂತೆ ಡಿಜಿಟಲ್ ಕಾಮುಕರು ಥರ ಥರದಲ್ಲಿ ಕಾಡುತ್ತಿದ್ದಾರೆ.
ಇನ್ನು, ಚಿತ್ರರಂಗದಲ್ಲಿರುವ ನಾಯಕಿಯರ ಪಾಡು ಹೇಳತೀರದು. ಅಭಿಮಾನದ ಹೆಸರಿನಲ್ಲಿ ಅನೇಕರು ಅನೇಕ ನಾಯಕಿಯರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಸೈಬರ್ ಕ್ರೈಮ್ ಮೊರೆ ಹೋದರು ಕೂಡ ಇವರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ದುರಂತ ಅಂದರೆ ಚಿತ್ರರಂಗದಲ್ಲಿಯೇ ಈ ಆನ್‌ಲೈನ್ ಕಾ*ಮುಕರು ಇದ್ದಾರೆ. ಈ ಸಾಲಿನಲ್ಲಿ ಮೊನ್ನೆ ಮೊನ್ನೆಯಷ್ಟೇ ''ಕೆಆರ್‌ಕೆ'' ಅಲಿಯಾಸ್ ''ಕಮಲ್ ಆರ್ ಖಾನ್'' ಕೂಡ ಸೇರಿಕೊಂಡಿದ್ದರು. ಈಗ ಅಜಾಜ್ ಖಾನ್ ಸರದಿ.

ಹೌದು, ಅಜಾಜ್ ಖಾನ್ .. ಹಿಂದಿ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿರುವ ವ್ಯಕ್ತಿ. ''ಶ್ ಕೊಯಿ ಹೈ''.. ''ಕ್ಯಾ ಹೋಗಾ ನಿಮ್ಮೋ ಕಾ''.. ''ರಹೇ ತೇರಾ ಆಶೀರ್ವಾದ್''.. ''ಕರಮ್ ಅಪ್ನಾ ಅಪ್ನಾ''.. ''ಕಹಾನಿ ಹಮಾರೆ ಮಹಾಭಾರತ್ ಕಿ''.. ಸೇರಿ ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಅಜಾಜ್ ಖಾನ್ ''ರಕ್ತ ಚರಿತ್ರ 2''.. ''ಲಕೀರ್ ಕಾ ಫಕೀರ್''.. ''ಸಿಂಗಮ್ ರಿಟರ್ನ್ಸ್''..''ಯಾ ರಬ್''.. ''ಲವ್ ಡೇ'' ಮತ್ತು ''ಗುಲ್ ಮಕಾಯ್'' ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಇಷ್ಟೇ ಅಲ್ಲ ತೆಲುಗಿನಲ್ಲಿ ''ದೂಕಡು''.. ''ಬಾದ್‌ಷಾ''.. ''ನಾಯಕ್''.. ''ಟೆಂಪರ್''.. ಚಿತ್ರಗಳಲ್ಲಿಯೂ ಅಭಿನಯಿಸಿರುವ ಅಜಾಜ್ ಖಾನ್ ಕನ್ನಡದಲ್ಲಿ ''ರೋಗ್'' ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದ್ದಾರೆ.
''ಫಿಯರ್ ಫ್ಯಾಕ್ಟರ್- ಖತ್ರೋನ್ ಕೆ ಖಿಲಾಡಿ 5'' ರಲ್ಲಿ ಭಾಗವಹಿಸಿದ್ದ ಅಜಾಜ್ ಖಾನ್ ಹಿಂದಿಯ ''ಬಿಗ್ ಬಾಸ್'' ಸೀಸನ್ 7ರ ಎರಡನೇ ರನ್ನರ್ ಅಪ್ ಕೂಡ ಹೌದು. ಇನ್ನು 2018ರಲ್ಲಿ ಡ್ರಗ್ಸ್ ಸುಳಿಯಲ್ಲಿ ಸಿಲುಕಿದ್ದ ಅಜಾಜ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಎರಡು ವರ್ಷ ಕಂಬಿ ಹಿಂದೆ ಇದ್ದರು.
ಇಂಥಾ ಅಜಾಜ್ ಖಾನ್ ಮೇಲೆ ದೆಹಲಿ ಮೂಲದ ಫಿಟ್ನೆಸ್ ಇನ್‌ಫ್ಲುಯೆನ್ಸರ್ ಫಿಟ್ ವರ್ಮಾ ಬಾಂಬ್ ಎಸೆದಿದ್ದಾರೆ. ಅಸಹ್ಯ- ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಎಲ್ಲರೂ ಎಲ್ಲರ ನಿಜವಾದ ಬಣ್ಣ ಬಹಿರಂಗಪಡಿಸುತ್ತಿರುವಾಗ ನಾನೂ ಕೂಡ ಒಬ್ಬ ''ಬಿಗ್ ಬಾಸ್'' ಸ್ಪರ್ಧಿಯ ವಿಷಯ ಬಹಿರಂಗಪಡಿಸೋಣ ಎಂದುಕೊಂಡೆ ಎಂದು ಹೇಳಿ ಅಜಾಜ್ ಖಾನ್ ಕಳುಹಿಸಿರುವ ಮೆಸೇಜ್‌ಗಳ ಸ್ಕ್ರೀನ್ ಶಾಟ್‌ನ್ನು ಕೂಡ ಹಂಚಿಕೊಂಡಿದ್ದಾರೆ.

ಆ ಪ್ರಕಾರ ಅಜಾಜ್ ಖಾನ್ ನೀವು ದೆಹಲಿಯವರು ನಾನು ದೆಹಲಿಯಲ್ಲಿದ್ದೇನೆ ಎಂದು ಫಿಟ್ ವರ್ಮಾಗೆ ಸಂದೇಶ ಕಳುಹಿಸಿದ್ದಾರೆ. ಆ ನಂತರ ತಮ್ಮ ಫೋನ್ ನಂಬರ್ ಕೂಡ ಹಂಚಿಕೊಂಡಿದ್ದಾರೆ. ಫೋನ್ ನಂಬರ್ ಕಳುಹಿಸಿದ್ದೇಕೆ ಎಂದು ವರ್ಮಾ ಪ್ರಶ್ನೆ ಮಾಡಿದಾಗ ಬಾ ನಾವು ಇಬ್ಬರು ಏನಾದರೂ ಮಾಡಬಹುದು, ನಾನು ದೆಹಲಿಯಲ್ಲಿದ್ದೇನೆ ಎಂದು ಅಜಾಜ್ ಖಾನ್ ಮೆಸೇಜ್ ಮಾಡಿದ್ದಾರೆ. ಇದಕ್ಕೆ ಫಿಟ್ ವರ್ಮಾ ಗೆಟ್ ಲಾಸ್ಟ್ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಸದ್ಯ ಫಿಟ್ ವರ್ಮಾ ಹಂಚಿಕೊಂಡ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 3000ಕ್ಕೂ ಅಧಿಕ ಜನ ಕಾಮೆಂಟ್ ಮಾಡಿದ್ದು ಅದರಲ್ಲಿ ನನಗೂ ಕೂಡ ಮೆಸೇಜ್ ಮಾಡಿದ್ದರು ಎಂದು ಮತ್ತೊಬ್ಬ ಯುವತಿ ಕೂಡ ಕಾಮೆಂಟ್ ಮಾಡಿದ್ದಾರೆ.
ಈ ಕುರಿತು ಅಜಾಜ್ ಖಾನ್ ಆಗಲಿ ಅವರ ಪತ್ನಿ ಐಶಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಹಿಂದಿ ಕಿರುತೆರೆಯಲ್ಲಿಯೂ ಫೀಟ್ ವರ್ಮಾ ಹಂಚಿಕೊಂಡ ಈ ವಿಡಿಯೋ ಸಂಚಲನವನ್ನು ಸೃಷ್ಟಿಸಿದೆ.


Click it and Unblock the Notifications











