ಮಗುವನ್ನು ಮಾಧ್ಯಮದ ಕಣ್ಣಿನಿಂದ ದೂರವಿಡಲು ವಿರಾಟ್-ಅನುಷ್ಕಾ ನಿರ್ಧಾರ

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಪೋಷಕರಾಗುತ್ತಿದ್ದಾರೆ. ಜನವರಿ ಅಂತಿಮ ವಾರದಲ್ಲಿ ಅನುಷ್ಕಾ ತಾಯಿಯಾಗಲಿದ್ದಾರೆ.

ವಿರಾಟ್-ಅನುಷ್ಕಾ ಮಗುವು ಭಾರತದ ಸೆಲೆಬ್ರಿಟಿ ಮಗು ಆಗುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಮಾಧ್ಯಮಗಳು ಅನುಷ್ಕಾ-ವಿರಾಟ್‌ ರ ಮನೆ ಮುಂದೆ ಕಾವಲು ನಿಂತಿವೆ. ಗರ್ಭಿಣಿ ಅನುಷ್ಕಾರ ಸಣ್ಣ ಕದಲಿಕೆಗಳೂ ಸುದ್ದಿಯಾಗುತ್ತಿವೆ ಕೆಲವು ಮಾಧ್ಯಮಗಳಲ್ಲಿ.

ಸೈಫ್ ಅಲಿ ಖಾನ್-ಕರೀನಾರ ಮಗ ತೈಮೂರ್ ಇಷ್ಟು ದಿನ ಮಾಧ್ಯಮಗಳ ಮೆಚ್ಚಿನ 'ಬೇಬಿ' ಆಗಿದ್ದ ಆ ಸ್ಥಾನವನ್ನು ವಿರಾಟ್-ಅನುಷ್ಕಾರ ಮಗು ಪಡೆವ ಎಲ್ಲ ಲಕ್ಷಣಗಳೂ ಇವೆ. ಆದರೆ ತಮ್ಮ ಮಗುವಿನ ಮೇಲೆ ಮಾಧ್ಯಮಗಳ ದೃಷ್ಟಿ ಬೀಳದಂತೆ ತಡೆಯುವ ಬಗ್ಗೆ ವಿರಾಟ್-ಅನುಷ್ಕಾ ಸಾಕಷ್ಟು ಚರ್ಚಿಸಿದ್ದಾರೆ.

'ಮಾಧ್ಯಮಗಳ ನಿಗಾವಣೆಯಲ್ಲಿ ಮಗುವನ್ನು ಬೆಳೆಸುವುದಿಲ್ಲ'

'ಮಾಧ್ಯಮಗಳ ನಿಗಾವಣೆಯಲ್ಲಿ ಮಗುವನ್ನು ಬೆಳೆಸುವುದಿಲ್ಲ'

ಈ ಬಗ್ಗೆ ವೋಗ್‌ ಮ್ಯಾಗಜೀನ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅನುಷ್ಕಾ, 'ಮಾಧ್ಯಮಗಳು ಹಾಗೂ ಸಮಾಜದ ನಿಗಾವಣೆಯನ್ನು ನಮ್ಮ ಮಗುವನ್ನು ಬೆಳೆಸಲು ನಮಗೆ ಇಷ್ಟವಿಲ್ಲ, ಈ ಬಗ್ಗೆ ನಾವಿಬ್ಬರೂ ನಿಶ್ಚಿತ ನಿರ್ಧಾರಕ್ಕೆ ಬಂದಿದ್ದೇವೆ' ಎಂದಿದ್ದಾರೆ.

ನಮ್ಮ ಮಗು ಎಲ್ಲರಲ್ಲಿ ಒಂದಾಗಿ ಬೆಳೆಯಬೇಕು: ಅನುಷ್ಕಾ

ನಮ್ಮ ಮಗು ಎಲ್ಲರಲ್ಲಿ ಒಂದಾಗಿ ಬೆಳೆಯಬೇಕು: ಅನುಷ್ಕಾ

'ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮಗುವಿನ ಬಗ್ಗೆ ಚರ್ಚೆಯಾಗುವುದು ನಮಗೆ ಇಷ್ಟವಿಲ್ಲ. ಯಾವುದೇ ಮಗುವೂ ಸಹ 'ತಾನು ವಿಶೇಷ' ಎಂಬ ಭಾವದೊಂದಿಗೆ ಬೆಳೆಯಬಾರದು. ಎಲ್ಲಾ ಮಕ್ಕಳು ಒಂದೇ, ತಾನೂ ಎಲ್ಲರಂತೆ ಎಂಬ ಭಾವದೊಂದಿಗೆ ಬೆಳೆಯಬೇಕು, ಅದೇ ಪೋಷಕರಾಗಿ ನಮ್ಮ ಉದ್ದೇಶ' ಎಂದಿದ್ದಾರೆ ಅನುಷ್ಕಾ.

ಕುಟುಂಬವಾಗಿ ಮಗುವಿನ ಆರೈಕೆ ಮಾಡಲಿದ್ದೇವೆ: ಅನುಷ್ಕಾ

ಕುಟುಂಬವಾಗಿ ಮಗುವಿನ ಆರೈಕೆ ಮಾಡಲಿದ್ದೇವೆ: ಅನುಷ್ಕಾ

ಮಗುವನ್ನು ಹೇಗೆ ಬೆಳೆಸಬೇಕು, ತಂದೆ-ತಾಯಿಯಾಗಿ ಯಾರು ಯಾವ ಜವಾಬ್ದಾರಿ ಹೊರಬೇಕು ಎಂಬ ಬಗ್ಗೆಯೂ ಈ ದಂಪತಿ ಚರ್ಚಿಸಿದ್ದಾರೆ. ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು. ಆದರೆ ನಾವು ತಂದೆ-ತಾಯಿಯಾಗಿ ಅಲ್ಲದೆ ಕುಟುಂಬವಾಗಿ ಮಗುವನ್ನು ನೋಡಿಕೊಳ್ಳಲಿದ್ದೇವೆ.

ವಿರಾಟ್‌ ಗೆ ಹೆಚ್ಚು ಸಮಯ ದೊರಕುವುದಿಲ್ಲ: ಅನುಷ್ಕಾ

ವಿರಾಟ್‌ ಗೆ ಹೆಚ್ಚು ಸಮಯ ದೊರಕುವುದಿಲ್ಲ: ಅನುಷ್ಕಾ

ನಾನು ಸ್ವ-ಉದ್ಯೋಗಿ, ಹಾಗಾಗಿ ನಾನು ಯಾವಾಗ ಕೆಲಸ ಮಾಡಬೇಕು, ಮಾಡಬಾರದು ಎಂಬುದನ್ನು ನಾನೇ ನಿಶ್ಚಯಿಸುತ್ತೇನೆ. ಆದರೆ ವಿರಾಟ್‌ನದ್ದು ಹಾಗಲ್ಲ, ವರ್ಷಪೂರ್ತಿ ಆತ ಆಡುತ್ತಲೇ ಇರಬೇಕಾಗುತ್ತದೆ, ಆತನಿಗೆ ಸಮಯ ಬಹಳ ಕಡಿಮೆ ಸಿಗುತ್ತದೆ. ಆದರೆ ಸಿಕ್ಕ ಸಮಯವನ್ನು ಹೇಗೆ ಮೌಲ್ಯಯುತವಾಗಿ ಕಳೆಯುತ್ತೇವೆ ಎಂಬುದು ನಮಗೆ ಮುಖ್ಯ ಎಂದಿದ್ದಾರೆ ಅನುಷ್ಕಾ.

More from Filmibeat

English summary
Anushka Sharma said, i and Virat decided to keep our child away from media and social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X