ಮದುವೆ ಬಳಿಕ ಸಿದ್ಧಾರ್ಥ್,ಕಿಯಾರಾ ಜೋಡಿ ಮೇಲೆ ಶುಕ್ರನ ವಕ್ರ ದೃಷ್ಠಿ: ಬಾಂಬ್ ಸಿಡಿಸಿದ ಜ್ಯೋತಿಷಿ
ಬಾಲಿವುಡ್‌ನ ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಇಂದು (ಫೆಬ್ರವರಿ 07) ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದೆ.
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರಿಗೂ ಬಾಲಿವುಡ್‌ನಲ್ಲಿ ಸಕ್ಸಸ್ ಸಿಕ್ಕಿದೆ. ಅದರಲ್ಲೂ ಕಿಯಾರಾ ಅಡ್ವಾಣಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.
ಹೀಗಾಗಿ ಸಿದ್ಧಾರ್ಥ್ ಹಾಗೂ ಕಿಯಾರಾ ಜೋಡಿಗೆ ಸೆಲೆಬ್ರೆಟಿಗಳು ಶುಭಕೋರುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಇರುವ ಅಭಿಮಾನಿಗಳಿಗೂ ಇವರ ಮದುವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾದು ಕೂತಿದ್ದಾರೆ. ಈ ಮಧ್ಯೆ ಬಾಲಿವುಡ್‌ನಲ್ಲಿ ಜ್ಯೋತಿಷಿಗಳು ಇವರ ಮದುವೆ ಭವಿಷ್ಯದ ಬಗ್ಗೆ ಮಾತಾಡೋಕೆ ಶುರು ಮಾಡಿದ್ದಾರೆ. ಅಸಲಿಗೆ ಜ್ಯೋತಿಷಿಗಳ ಪ್ರಕಾರ, ಮ್ಯಾರೇಜ್ ಲೈಫ್ ಹೇಗಿರುತ್ತೆ? ತಿಳಿಯುವುದಕ್ಕೆ ಮುಂದೆ ಓದಿ.

ಸಿದ್ಧಾರ್ಥ್, ಕಿಯಾರಾ ಮದುವೆ
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ವೈವಾಹಿಕ ಜೀವನ ಈಗತಾನೇ ಆರಂಭ ಆಗಿದೆ. ಕಳೆದ ಎರಡು ದಿನಗಳಿಂದ ಇಬ್ಬರ ಮನೆಯಲ್ಲೂ ಮದುವೆ ಸಂಭ್ರಮ ಮನೆ ಮಾಡಿದೆ. ರಾಜಸ್ಥಾನದ ಜೈಸಲ್ಮೇರ್ ನಗರದ ಸುರಯ್ಯ ಪ್ಯಾಲೇಸ್ ಹೊಟೇಲ್‌ನಲ್ಲಿ ಇಬ್ಬರ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಹೀಗಾಗಿ ಬಾಲಿವುಡ್ ಸೆಲೆಬ್ರೆಟಿಗಳ ಮದುವೆ ಬಗ್ಗೆ ಜ್ಯೋತಿಷಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಕಿಯಾರಾ, ಸಿದ್ಧಾರ್ಥ್ ವೈವಾಹಿಕ ಜೀವನ ಹೇಗಿರುತ್ತೆ?
ಜನಪ್ರಿಯ ಸೆಲೆಬ್ರೆಟಿಗಳು ಯಾರೇ ಮದುವೆ ಆದರೂ, ಅವರ ಮುಂದಿನ ಭವಿಷ್ಯ ಹೇಗಿರುತ್ತೆ? ಅನ್ನೋದನ್ನು ಜ್ಯೋತಿಷಗಳು ಅಂಧಾಜು ಹಾಕುತ್ತಾರೆ. ಅದರಂತೆ ಈ ಬಾಲಿವುಡ್ ಜೋಡಿಯ ವೈವಾಹಿಕ ಜೀವನದ ಬಗ್ಗೆನೂ ಭವಿಷ್ಯ ನುಡಿಯುತ್ತಿದ್ದಾರೆ. ಇವರ ಪ್ರಕಾರ, ಕಿಯಾರಾ ಅಡ್ವಾಣಿಗೆ ಉತ್ತರ ಭವಿಷ್ಯವಿದೆ. ಮದುವೆ ಬಳಿಕ ಅವರ ವೃತ್ತಿ ಬದುಕು ಉತ್ತಮಗೊಳ್ಳಲಿದೆ. ಸಿದ್ಧಾರ್ಥ್ ಮಲ್ಹೋತ್ರಾ ರಾಶಿ ಮಕರ. ಹಾಗೇ ಕಿಯಾರಾ ರಾಶಿ ಸಿಂಹ. ಹೀಗಾಗಿ ಇಬ್ಬರ ರಾಶಿಗಳೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ. ಆದರೆ, ಇವರು ಸಾಗುವ ಹಾದಿಯಲ್ಲಿ ಚಿಕ್ಕ ಪುಟ್ಟ ಹಂಪುಗಳಿವೆ ಎಂದೂ ಹೇಳುತ್ತಿದ್ದಾರೆ.

ಜ್ಯೋತಿಷಿ ನುಡಿದ ಭವಿಷ್ಯವೇನು?
ಬಾಲಿವುಡ್ ಲೈಫ್ ವೆಬ್‌ಸೈಟ್‌ಗೆ ಜಗನ್ನಾಥ್ ಗುರೂಜಿ ಅನ್ನೋರು ಪ್ರತಿಕ್ರಿಯೆ ನೀಡಿದ್ದಾರೆ. " ಈ ಜೋಡಿಗಳು ಮದುವೆ ಬಳಿಕ ಒಬ್ಬರಿಗೊಬ್ಬರು ಪ್ರತಿಕ್ರಿಯೆಗಳನ್ನು ನೀಡಬೇಕು. ಇಬ್ಬರ ನಡುವೆ ಕಮ್ಯೂನಿಕೇಷನ್ ಅನ್ನೋದು ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವೈಯಕ್ತಿಕ ವಿಚಾರದಲ್ಲಿ ಶುಕ್ರ ಗ್ರಹ ಕೆಲವು ಸಮಸ್ಯೆಗಳನ್ನು ನೀಡುವ ಸಾಧ್ಯತೆಯಿದೆ. ಸಮಸ್ಯೆಗಳಿಂದ ದೂರವಿರಲು ಇಬ್ಬರೂ ಓಪನ್ ಆಗಿರಬೇಕು." ಎಂದು ಗುರೂಜಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ಧಾರ್ಥ್‌ಗೆ ಯಶಸ್ಸು ಸಿಗಲಿದೆ
ಮದುವೆ ಬಳಿಕ ಸಿದ್ಧಾರ್ಥ್ ಮಲ್ಹೋತ್ರಾ ಅವರ ವೈಯಕ್ತಿಕ ಬದುಕು ಉತ್ತಮಗೊಳ್ಳಲಿದೆ. ಸೂರ್ಯ ಹಾಗೂ ಗುರು ಉತ್ತಮ ಸ್ಥಾನದಲ್ಲಿದ್ದಾರೆ. ಇವರ ಬೆಂಬಲದಿಂದ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಇಬ್ಬರಿಗೂ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications










