twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ನವರು 'ಕೆಜಿಎಫ್' ಮಾಡಿದ್ದರೆ ಏನಾಗಿರುತ್ತಿತ್ತು? ಕರಣ್ ಜೋಹರ್ ಕೊಟ್ಟಿದ್ದಾರೆ ಉತ್ತರ

    |

    'ಕೆಜಿಎಫ್ 2' ಸಿನಿಮಾ, ಭಾರತದಲ್ಲಿ ಅತಿ ಹೆಚ್ಚು ಸೆಲೆಬ್ರೇಟ್ ಮಾಡಲಾದ ಸಿನಿಮಾಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿದೆ. ಹಲವು ಪ್ರದೇಶಗಳಲ್ಲಿ 'RRR' ಅನ್ನು ಹಿಂದಿಕ್ಕಿ ಈ ಸಿನಿಮಾ ಮುನ್ನುಗ್ಗಿದೆ.

    ಕನ್ನಡ ಚಿತ್ರರಂಗದ ಈ ಹೆಮ್ಮೆಯ ಸಿನಿಮಾವನ್ನು ಸ್ಯಾಂಡಲ್‌ವುಡ್ ಅಲ್ಲದೆ ಬಾಲಿವುಡ್‌ನವರು ನಿರ್ಮಾಣ ಮಾಡಿದ್ದರೆ ಸಿನಿಮಾ ಏನಾಗಿರುತ್ತಿತ್ತು? ಈ ಪ್ರಶ್ನೆಗೆ ಕರಣ್ ಜೋಹರ್ ಉತ್ತರ ನೀಡಿದ್ದಾರೆ.

    'ಕೆಜಿಎಫ್ 2' ಸಿನಿಮಾದ ಜೊತೆಗೆ ಗುರುತಿಸಿಕೊಂಡಿರುವ, ಹಿಂದಿ ಪ್ರದೇಶದಲ್ಲಿ ವಿತರಣೆಯಲ್ಲಿ ಭಾಗಿಯಾಗಿದ್ದ ಕರಣ್ ಜೋಹರ್ 'ಕೆಜಿಎಫ್ 2' ಸಿನಿಮಾದ ಬಗ್ಗೆ ಮಾತನಾಡಿದ್ದು, ಆ ಸಿನಿಮಾವನ್ನು ಬಾಲಿವುಡ್‌ನವರೇ ನಿರ್ಮಾಣ ಮಾಡಿ, ಬಾಲಿವುಡ್‌ನವರೇ ನಟಿಸಿದ್ದಿದ್ದರೆ ಏನಾಗಿರುತ್ತಿತ್ತು ಎಂದು ಹೇಳಿದ್ದಾರೆ.

    ಪ್ರಶಾಂತ್ ನೀಲ್, ರಾಜಮೌಳಿ ಅಂಥಹವರನ್ನು ಭೇಟಿಯಾದಾಗ ನನಗೆ ಖುಷಿಯಾಗುತ್ತದೆ. ಅವರೇನು ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಬಲ್ಲರು. ತಮ್ಮ ಗುರಿಯ ಬಗ್ಗೆ ಅವರಿಗೆ ಸ್ಪಷ್ಟನೆ ಇದೆ. ಆದರೆ ಬಾಲಿವುಡ್‌ನ ನಿರ್ದೇಶಕರಿಗೆ ಸ್ಪಷ್ಟತೆ, ಗುರಿ ಇಲ್ಲ. ಬಾಲಿವುಡ್‌ನ ನಿರ್ದೇಶಕರು ಕಾರ್ಪೊರೇಟ್‌ ಕಂಟ್ರೋಲ್‌ನಲ್ಲಿದ್ದಾರೆ. 'ಕೆಜಿಎಫ್' ಅಂಥಹಾ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿದ್ದಿದ್ದರೆ ದೊಡ್ಡ ಫ್ಲಾಪ್ ಆಗಿರುತ್ತಿತ್ತು'' ಎಂದಿದ್ದಾರೆ.

    ಹಣ ಕೊಟ್ಟು ಜನಪ್ರಿಯತೆ ಖರೀದಿಸಲಾಗುತ್ತಿದೆ: ಕರಣ್ ಜೋಹರ್

    ಹಣ ಕೊಟ್ಟು ಜನಪ್ರಿಯತೆ ಖರೀದಿಸಲಾಗುತ್ತಿದೆ: ಕರಣ್ ಜೋಹರ್

    ಬಾಲಿವುಡ್‌ನ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ''ಬಾಲಿವುಡ್‌ನಲ್ಲಿ ಎಲ್ಲರೂ ನಕಲಿ ಬ್ರ್ಯಾಂಡ್‌ ಬಿಲ್ಡಿಂಗ್‌ ಹಿಂದೆ ಓಡುತ್ತಿದ್ದಾರೆ. ಹಣ ಕೊಟ್ಟು ಜನಪ್ರಿಯತೆ ಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹಿಂಡು ಪ್ರಾಣಿಗಳ ಮನಸ್ಥಿತಿ ಇದೆ. ಒಬ್ಬರನ್ನು ನೋಡಿ ಒಬ್ಬರು ಹಳ್ಳಕ್ಕೆ ಬೀಳುತ್ತಿದ್ದಾರೆ. ಬಾಲಿವುಡ್‌ಗೆ ನಿರ್ದಿಷ್ಟತೆಯ ಕೊರತೆ ಇದೆ. ಆದರೆ ದಕ್ಷಿಣ ಭಾರತ ಸಿನಿಮಾ ಕರ್ಮಿಗಳಿಗೆ ಅವರು ಮಾಡುತ್ತಿರುವ ಕೆಲಸದ ಬಗ್ಗೆ ಸ್ಪಷ್ಟತೆ ಇದೆ'' ಎಂದಿದ್ದಾರೆ ಕರಣ್ ಜೋಹರ್.

    ದಕ್ಷಿಣ ಭಾರತದ ಚಿತ್ರಕರ್ಮಿಗಳಿಗೆ ಸ್ಪಷ್ಟತೆ ಇದೆ: ಕರಣ್

    ದಕ್ಷಿಣ ಭಾರತದ ಚಿತ್ರಕರ್ಮಿಗಳಿಗೆ ಸ್ಪಷ್ಟತೆ ಇದೆ: ಕರಣ್

    ''ದಕ್ಷಿಣ ಭಾರತದ ಚಿತ್ರಕರ್ಮಿಗಳಿಗೆ ಸ್ಪಷ್ಟತೆ ಇದೆ. ತಮಗೆ ಬೇಕಿರುವುದೇನು, ತಾವು ಮಾಡುತ್ತಿರುವುದು ಏನು ಎಂಬ ಬಗ್ಗೆ ಸ್ಪಷ್ಟತೆಯನ್ನು ಇಟ್ಟುಕೊಂಡಿದ್ದಾರೆ. ತಮ್ಮ ಕೆಲಸದ ಬಗ್ಗೆ ಬೇರೆಯವರ ಅಭಿಪ್ರಾಯವನ್ನು ಅವರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬೇರೆಯವರನ್ನು ಮೆಚ್ಚಿಸಲೆಂದು ಅವರು ಕೆಲಸ ಮಾಡುವುದಿಲ್ಲ. ನಮ್ಮಲ್ಲಿ ಟ್ರೆಂಡ್ ಫಾಲೋ ಮಾಡುವ ಸಂಪ್ರದಾಯ ಇದೆ. ಆದರಿಂದಾಗಿ ಒಂದು ಸಿನಿಮಾದ ಬಳಿಕ ಹಲವು ಸಿನಿಮಾ ಹಳ್ಳ ಹಿಡಿಯುತ್ತಿವೆ'' ಎಂದಿದ್ದಾರೆ ಕರಣ್.

    ಬರಹಗಾರರಿಗೆ ಒತ್ತು ನೀಡಬೇಕಾಗಿದೆ: ಕರಣ್ ಜೋಹರ್

    ಬರಹಗಾರರಿಗೆ ಒತ್ತು ನೀಡಬೇಕಾಗಿದೆ: ಕರಣ್ ಜೋಹರ್

    ''ನಿರ್ಮಾಪಕರು, ನಿರ್ದೇಶಕರು, ನಟರು ಎಲ್ಲರೂ ಸಿನಿಮಾ ಬರಹಗಾರರಿಗೆ ಒತ್ತು ನೀಡಬೇಕಿದೆ. ಒಳ್ಳೆಯ ಕತಾಸೃಷ್ಟಿಯ ಕಡೆಗೆ ಮತ್ತೆ ಗಮನ ಕೊಡಬೇಕಿದೆ. ಪ್ರೇಕ್ಷಕರಿಗೆ ಇದು ಬೇಕು, ಪ್ರೇಕ್ಷಕರಿಗೆ ಅದು ಬೇಕು, ನಟನನ್ನು ಹೀಗೆ ಪ್ರೆಸೆಂಟ್ ಮಾಡಬೇಕು ಎಂದುಕೊಳ್ಳುವ ಬದಲು ಒಳ್ಳೆಯ ಕತೆಯ ಕಡೆಗೆ ಗಮನ ಕೊಡಬೇಕಿದೆ. ನಿರ್ದೇಶಕನಾಗಿ ಅವನ ಶಕ್ತಿಯ ಅರಿವಿನ ಜೊತೆಗೆ, ನಟ-ನಟಿಯರ ಸಾಮರ್ಥ್ಯದ ಅರಿವು ಇರಬೇಕು, ಅದರಂತೆ ಆತ ಸಿನಿಮಾ ಮಾಡಬೇಕಾಗುತ್ತದೆ'' ಎಂದಿದ್ದಾರೆ.

    ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಬೇಕಿದೆ: ಕರಣ್

    ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಬೇಕಿದೆ: ಕರಣ್

    ''ಬಫೆಟ್ ರೀತಿಯಲಲ್ಲದೆ, ನಾವು ಸ್ವತಂತ್ರ್ಯವಾಗಿ, ಭಿನ್ನವಾಗಿ ಯೋಚಿಸುವಂಥಹವರಾಗಬೇಕಿದೆ. ಹಿಂದೆ ನಮ್ಮಲ್ಲಿ ಇದ್ದ ಸ್ಪಷ್ಟತೆ, ಗುರಿ, ಸ್ವಾತಂತ್ರ್ಯತೆಯನ್ನು ನಾವು ಮತ್ತೆ ಸಂಪಾದಿಸಬೇಕಿದೆ. ರಾಜಮೌಳಿ, ಪ್ರಶಾಂತ್ ನೀಲ್ ಅಂಥಹವರನ್ನು ಭೇಟಿಯಾದಾಗ ನನಗೆ ಖುಷಿಯಾಗುತ್ತದೆ. ಅವರಿಗೆ ಗೊತ್ತಿಗೆ ಅವರಿಗೇನು ಬೇಕು ಎಂಬುದು, ತಾವು ಏನು ಮಾಡುತ್ತಿದ್ದೇವೆ ಎಂಬುದು ಸಹ ಅವರಿಗೆ ಗೊತ್ತಿದೆ. ಆದರೆ ನಮ್ಮ ಸಿನಿಮಾ ಕರ್ಮಿಗಳಿಗೆ ಸ್ಪಷ್ಟತೆ ಇಲ್ಲ'' ಎಂದಿದ್ದಾರೆ ಕರಣ್ ಜೋಹರ್.

    English summary
    What if KGF 2 movie made in Bollywood. Karan Johar said If KGF 2 made in Bollywood it would be big flop.
    Friday, June 17, 2022, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X