ರಣ್ವೀರ್ ಬೆತ್ತಲೆ ಚಿತ್ರ: ಅದೇ ಕೆಲಸ ಮಹಿಳೆ ಮಾಡಿದ್ದರೆ? ಪ್ರಶ್ನೆ ಮಾಡಿದ ನಟಿ

ಇಂದು ಮುಂಜಾನೆಯಿಂದ ನಟ ರಣ್ವೀರ್ ಸಿಂಗ್ ರದ್ದೇ ಸುದ್ದಿ. ಮ್ಯಾಗಜೀನ್ ಒಂದಕ್ಕಾಗಿ ಬೆತ್ತಲಾಗಿ ನಟ ರಣ್ವೀರ್ ಸಿಂಗ್ ಫೊಸು ನೀಡಿರುವುದು ಬಹಳ ಸದ್ದು-ಸದ್ದಿ ಮಾಡುತ್ತಿವೆ.

'ಪೇಪರ್' ಹೆಸರಿನ ಮ್ಯಾಗಜೀನ್‌ನ ಕವರ್‌ಗಾಗಿ ಸಂಪೂರ್ಣ ಬೆತ್ತಲಾಗಿ ನಟ ರಣ್ವೀರ್ ಸಿಂಗ್ ಫೋಟೊ ಶೂಟ್ ಮಾಡಿಸಿದ್ದಾರೆ. ಸಂಪೂರ್ಣ ಬೆತ್ತಲಾದರೂ ಖಾಸಗಿ ಅಂಗಗಳು ಕಾಣದಂತೆ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ರಣ್ವೀರ್ ಸಿಂಗ್‌ರ ಈ ಬೆತ್ತಲೆ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ವಿಷಯವಾಗಿವೆ.

ರಣ್ವೀರ್ ಸಿಂಗ್‌ರ ಬೆತ್ತಲೆ ಚಿತ್ರಗಳನ್ನು ಹಲವರು ಮೆಚ್ಚಿಕೊಂಡಿದ್ದಾರೆ. ರಣ್ವೀರ್ ಸಖತ್ ಹಾಟ್ ಆಗಿ, ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ. ಆದರೆ ನಟಿ, ರಾಜಕಾರಣಿ ಮೀಮಿ ಚಕ್ರವರ್ತಿ ಬೇರೆಯದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಬೆಂಗಾಲಿ ನಟಿ ಮೀಮಿ ಚಕ್ರವರ್ತಿ, ''ರಣ್ವೀರ್ ಸಿಂಗ್‌ರ ಹೊಸ ಫೊಟೊಶೂಟ್ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಣ್ವೀರ್‌ಗೆ ಅಭಿನಂದನೆಗಳು ಸಲ್ಲಿಕೆಯಾಗುತ್ತಿವೆ. ಇದೇ ಕಾರ್ಯವನ್ನು ಒಬ್ಬ ನಟಿ ಮಾಡಿದ್ದಿದ್ದರೆ ಪ್ರತಿಕ್ರಿಯೆ ಹೀಗೆಯೇ ಇರುತ್ತಿತ್ತಾ. ಆಕೆಯ ಮನೆಗೆ ಬೆಂಕಿ ಇಟ್ಟು, ಆಕೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಮಾಡಿ, ಆಕೆಗೆ ಕೊಲೆ ಬೆದರಿಕೆ ಹಾಕಿ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಕಾರ್ಯ ಮಾಡಲಾಗಿರುತ್ತಿತ್ತು ಎಂದಿದ್ದಾರೆ.

What If Woman Posed Just Like Ranveer Singh Did: Ask Mimi Chakraborty

''ನಾವು ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಇಲ್ಲಿ ನಾವು ಬದಲಾಯಿಸಿಕೊಳ್ಳಬೇಕಿರುವುದು ನಮ್ಮ ದೃಷ್ಟಿಕೋನವನ್ನು, ಬದಲಾಯಿಸಿಕೊಳ್ಳಿ ಅಥವಾ ಸಂಪೂರ್ಣವಾಗಿ ಅದನ್ನು ನಾಶಮಾಡಿ. ಇನ್ನು ಈ ಪ್ರಕರಣದಲ್ಲಿ (ರಣ್ವೀರ್ ಸಿಂಗ್ ಫೊಟೊಶೂಟ್) ನಮ್ಮ ದೃಷ್ಟಿಕೋನವನ್ನು ತುಸು ವಿಸ್ತಾರಗೊಳಿಸಿಕೊಳ್ಳೋಣ ಮತ್ತು ಈ ಫೊಟೊಶೂಟ್ ಅನ್ನು ಅಭಿನಂದಿಸೋಣ ಏಕೆಂದರೆ ಆ ರೀತಿಯ ದೇಹವನ್ನು ಪಡೆಯುವುದು ಸುಲಭದ ಮಾತಲ್ಲ. ಸಾಕಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಸಕ್ಕರೆ, ಉಪ್ಪು ಕಾರ್ಬೊಹೈಡ್ರೇಟ್‌ಗಳನ್ನು ತ್ಯಜಿಸಿ ಆ ದೇಹವನ್ನು ಪಡೆದಿದ್ದಾರೆ ಅವರು ಎಂದಿದ್ದಾರೆ ಮೀಮಿ ಚಕ್ರವರ್ತಿ.

ಇನ್ನು ರಣ್ವೀರ್ ಸಿಂಗ್‌ರ ಬೆತ್ತಲೆ ಚಿತ್ರಗಳಿಗೆ ಮಿಶ್ರ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ನೆಗೆಟಿವ್ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಋಣಾತ್ಮಕ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರೋ ರಣ್‌ವೀರ್ ಸಿಂಗ್, 'ಎಲ್ಲರೆದುರು ಬೆತ್ತಲಾಗಿ ಪೋಸ್ ಕೊಡೋದು ನನಗೇನು ಕಷ್ಟವಲ್ಲ. ಈ ಫೋಟೊಗಳಲ್ಲಿ ನನ್ನ ಆತ್ಮವನ್ನು ನೋಡಬಹುದು. ನಾನು ಸಾವಿರ ಜನರ ನಡುವೆಯೂ ನಗ್ನವಾಗಿ ಇರಬಲ್ಲೆ. ಆದರೆ ಜನರು ಕಸಿವಿಸಿ ಆದರೆ ನಾನೇನು ಮಾಡೋಕೆ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

More from Filmibeat

English summary
Bengali actress and politician Mimi Chakraborty asked what if a actress posed just like Ranveer Singh did today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X