ದೀಪಿಕಾ ಪಡುಕೋಣೆ ಬ್ಯಾಗಿನಲ್ಲಿ ಯಾವ-ಯಾವ ವಸ್ತುಗಳಿವೆ?

ಸಾಮಾನ್ಯ ಜನರಿಗೆ ಸಿನಿಮಾ ನಟ-ನಟಿಯರ ಕುತೂಹಲ ಸಹಜ. ಸಾಮಾನ್ಯ ಜನರ ಜೀವನ, ಸೆಲೆಬ್ರಿಟಿಗಳ ಜೀವನಕ್ಕಿಂತಲೂ ಹೇಗೆ ಮತ್ತು ಎಷ್ಟರ ಮಟ್ಟಿಗೆ ಭಿನ್ನ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ.

ಇದೇ ಕಾರಣದಿಂದ ಸಿನಿಮಾ ನಟ-ನಟಿಯರ ಖಾಸಗಿ ಜೀವನದ ಬಗ್ಗೆ, ಅವರು ಬಳಸುವ ವಸ್ತುಗಲ ಬಗ್ಗೆ, ಅವರು ಧರಿಸುವ ಉಡುಪುಗಳ ಬಗ್ಗೆ ಅವರ ಲವ್ ಲೈಫ್ ಬಗ್ಗೆ ಗಾಸಿಪ್‌ಗಳು ಹೆಚ್ಚು ಹರಿದಾಡುತ್ತವೆ. ಗಾಸಿಪ್‌ಗಳ ಓದುಗರೂ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಾಲಿವುಡ್ ನಟಿಯರು ತಮ್ಮ ಸ್ಟೈಲಿಷ್‌ ಉಡುಗೆಗಳಿಗೆ ಬಹಳ ಖ್ಯಾತರು. ಒಬ್ಬರಿಗಿಂತಲೂ ಒಬ್ಬರು ಭಿನ್ನವಾದ, ದುಬಾರಿಯಾದ ಉಡುಗೆಗಳನ್ನು ಧರಿಸುತ್ತಾರೆ. ಅದರೊಟ್ಟಿಗೆ ಒಂದು ಪರ್ಸ್ ಸಾಮಾನ್ಯವಾಗಿ ಇರುತ್ತದೆ. ಆದರೆ ಅದರೊಳಗೆ ಅವರು ಏನಿಟ್ಟುಕೊಂಡಿರುತ್ತಾರೆ ಎಂಬುದು ಸಹಜ ಕುತೂಹಲ. ಫ್ಯಾಷನ್ ಬ್ರ್ಯಾಂಡ್ ಆಗಿರುವ ವೋಗ್, ನಟಿಯರು ತಮ್ಮ ಬ್ಯಾಗಿನಲ್ಲಿ ಏನಿಟ್ಟುಕೊಂಡಿರುತ್ತಾರೆ ಎಂಬುದನ್ನು ಅವರೇ ಹೇಳುವ ಶೋ ಒಂದನ್ನು ಆರಂಭಿಸಿದ್ದು, ಈ ಬಾರಿ ದೀಪಿಕಾ ಪಡುಕೋಣೆ, ತಮ್ಮ ಬ್ಯಾಗಿನಲ್ಲಿ ಯಾವ-ಯಾವ ವಸ್ತುಗಳನ್ನು ಇಟ್ಟುಕೊಂಡಿರುತ್ತೇನೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಬ್ಯಾಗಿನಲ್ಲಿ ಏನೇನಿದೆ?

ದೀಪಿಕಾ ಪಡುಕೋಣೆ ಬ್ಯಾಗಿನಲ್ಲಿ ಏನೇನಿದೆ?

ದೀಪಿಕಾ ಪಡುಕೋಣೆ, ಬಹಳ ಕ್ಯೂಟ್ ಆದ, ನೋಡಲು ಸರಳವಾಗಿ ಕಾಣುವ ಬ್ಯಾಗ್‌ ಒಂದನ್ನು ಕ್ಯಾರಿ ಮಾಡುತ್ತಾರೆ. ಅದರಲ್ಲಿ ಒಂದು ಸನ್‌ಗ್ಲಾಸ್‌ ಕಡ್ಡಾಯವಾಗಿರುತ್ತದೆ. ಬಿಸಿಲಿಂದ ಸುಸ್ತೆನಿದಾಗ ಅಥವಾ ಗ್ಲಾಮರ್ ಲುಕ್‌ಗೆ ಸ್ವಿಚ್ ಆಗಬೇಕು ಎಂದುಕೊಂಡಾಗ ಆ ಸನ್‌ ಗ್ಲಾಸ್ ಧರಿಸುತ್ತಾರೆ. ಅದರ ಜೊತೆಗೆ ಬಹಳ ಮುಖ್ಯವಾದ ವಸ್ತು, ಮನೆಯ ಕೀಗೊಂಚಲು ಸದಾ ದೀಪಿಕಾ ಬ್ಯಾಗಿನಲ್ಲಿರುತ್ತದೆ. ಬೀಗ್ ಗೊಂಚಲಿನಲ್ಲಿ ಮುಖ್ಯ ಬಾಗಿಲಿನ ಕೀ, ಹಿಂಬಾಗಿಲಿನ ಕೀ, ರೂಮಿನ ಕೀ, ಬಾತ್‌ರೂಮ್ ಕೀ ಎಲ್ಲವೂ ಇರುತ್ತದೆ. ಕೀ ಗೊಂಚಲಿಗೆ, ಪ್ಯಾರಿಸ್‌ನಿಂದ ತಂದ ಕ್ಯೂಟ್ ಆದ ಕೀ ಚೈನ್ ಅನ್ನು ಬಳಸುತ್ತಾರೆ ದೀಪಿಕಾ.

ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳು ಕೆಲವು

ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳು ಕೆಲವು

ಅದರ ನಂತರ ಸಗಂಧ ದ್ರವ್ಯವನ್ನು ತಪ್ಪದೇ ಕ್ಯಾರಿ ಮಾಡುತ್ತಾರೆ. ಮುಖ್ಯವಾಗಿ ಆರೆಂಜ್ ಬ್ಲಾಸಮ್ ಸುಗಂಧದ ದ್ರವ್ಯ ಕ್ಯಾರಿ ಮಾಡುತ್ತಾರೆ. ಬಳಿಕ ಮುಖಕ್ಕೆ ಹೊಡೆದುಕೊಳ್ಳುವ ಫೇಸ್‌ ಫ್ರೆಶ್ನರ್ ಅನ್ನೂ ಮರೆಯುವುದಿಲ್ಲ ದೀಪಿಕಾ. ಮುಖ ತೊಳೆದುಕೊಳ್ಳಲು ಸಮಯ ಸಿಗದಿದ್ದರೆ ಫ್ರೆಶ್ನರ್ ಹೊಡೆದುಕೊಂಡರೆ ಸಾಕು. ಬಳಿಕ ಮೌತ್ ಫ್ರೆಶ್ನರ್ ಸಹ ಸದಾ ಇರುತ್ತದೆ ದೀಪಿಕಾ ಬ್ಯಾಗಿನಲ್ಲಿ. ಜೊತೆಗೆ ಕೆಲವು ವೆಟ್ ಟಿಶ್ಯೂಗಳು, ಲಿಪ್ ಬಾಮ್, ಲಿಪ್‌ಸ್ಟಿಕ್‌ಗಳು, ತಲೆ ಕೂದಲು ಕಟ್ಟಿಕೊಳ್ಳಲು ಬಣ್ಣದ ಕ್ಲಿಪ್ ಸಹ ಕಡ್ಡಾಯವಾಗಿ ದೀಪಿಕಾ ಪಡುಕೋಣೆಯ ಬ್ಯಾಗಿನಲ್ಲಿರುತ್ತವೆ.

ಏರ್‌ಲೈನ್ ಕಾರ್ಡ್‌ಗಳನ್ನು ಸಂಗ್ರಹಿಸುವ ದೀಪಿಕಾ

ಏರ್‌ಲೈನ್ ಕಾರ್ಡ್‌ಗಳನ್ನು ಸಂಗ್ರಹಿಸುವ ದೀಪಿಕಾ

ದೀಪಿಕಾರ ಬ್ಯಾಗಿನಲ್ಲಿ ಒಂದು ಸಣ್ಣ ಕಾರ್ಡ್ ಹೋಲ್ಡರ್ ಇರುತ್ತದೆ. ಆ ಹೋಲ್ಡರ್‌ನಲ್ಲಿ ದೀಪಿಕಾರ ಕ್ರೆಡಿಕ್ ಕಾರ್ಡ್, ಡೆಬಿಟ್ ಕಾರ್ಡ್‌ಗಳು ಇರುತ್ತವೆ. ಆದರೆ ದೀಪಿಕಾ ಅವಕ್ಕಿಂತಲೂ ಹೆಚ್ಚಾಗಿ ತಮ್ಮ ಟ್ರಾವೆಲ್ ಕಾರ್ಡ್‌ಗಳನ್ನು ಜೋಪಾನವಾಗಿ ಅದರಲ್ಲಿಟ್ಟಿರುತ್ತಾರೆ. ಏರ್‌ಲೈನ್ ಕಾರ್ಡ್‌ಗಳನ್ನು ಜೋಪಾನವಾಗಿಟ್ಟುಕೊಳ್ಳುವಂತೆ ಅವರ ತಾಯಿ ಹೇಳಿದ್ದರಂತೆ. ಹಾಗಾಗಿ ಏರ್‌ಲೈನ್ ಕಾರ್ಡ್‌ಗಳನ್ನು ಲ್ಯಾಮಿನೇಟ್ ಮಾಡಿಸಿ ಜೋಪಾನವಾಗಿ ಎತ್ತಿಟ್ಟುಕೊಂಡಿರುತ್ತಾರೆ.

ನೋಟ್‌ಬುಕ್, ಪೆನ್ಸಿಲ್ ಸದಾ ಇರುತ್ತದೆ

ನೋಟ್‌ಬುಕ್, ಪೆನ್ಸಿಲ್ ಸದಾ ಇರುತ್ತದೆ

ದೀಪಿಕಾ ಬ್ಯಾಗಿನಲ್ಲಿ ಇರುವ ಮತ್ತೊಂದು ಮುಖ್ಯ ವಸ್ತುವೆಂದರೆ ಒಂದು ನೋಟ್‌ಬುಕ್ ಹಾಗೂ ಒಂದು ಪೆನ್ಸಿಲ್. ಈ ನೋಟ್‌ಬುಕ್‌ ಅನ್ನು ಹಲವು ಕಾರಣಗಳಿಗಾಗಿ ದೀಪಿಕಾ ಬಳಸುತ್ತಾರಂತೆ. ಡೈಲಾಗ್ ಬರೆದುಕೊಳ್ಳಲು, ಮಾಡಬೇಕಾದ ಕೆಲಗಳನ್ನು ನೆನಪು ಮಾಡಿಟ್ಟುಕೊಳ್ಳಲು. ಇಷ್ಟದ ಸಾಲುಗಳನ್ನು ಬರೆದಿಟ್ಟುಕೊಳ್ಳಲು ಇನ್ನೂ ಹಲವು ಕಾರಣಗಳಿಗೆ ನೋಟ್‌ಬುಕ್ ಅನ್ನು ದೀಪಿಕಾ ಬಳಸುತ್ತಾರಂತೆ. ಅದರೊಟ್ಟಿಗೆ ಪೆನ್ಸಿಲ್ ಒಂದನ್ನು ಸದಾ ಕ್ಯಾರಿ ಮಾಡುತ್ತಾರೆ. ಪೆನ್ಸಿಲ್ ಶಾರ್ಪ್‌ ಮಾಡುವುದು, ತಪ್ಪಾದರೆ ರಬ್ಬರ್‌ ನಿಂದ ಅಳಿಸುವುದು ದೀಪಿಕಾಗೆ ಇಷ್ಟ. ಅಲ್ಲದೆ, ಸಿನಿಮಾ ಡೈಲಾಗ್ ಪ್ರ್ಯಾಕ್ಟೀಸ್ ಮಾಡುವಾಗ ಡೈಲಾಗ್ ಸರಿಯಾಗಿ ಬರದೇ ಇದ್ದರೆ ಪೆನ್ಸಿಲ್ ಬಾಯಿಯಲ್ಲಿಟ್ಟುಕೊಂಡರೆ ಸಂಭಾಷಣೆ ತಾನೇ ತಾನಾಗಿ ಹೊರಗೆ ಬರುತ್ತದೆಯಂತೆ!

ಯೂನಿವರ್ಸರ್ ಅಡಾಪ್ಟರ್ ಇಟ್ಟುಕೊಂಡಿರುತ್ತಾರೆ

ಯೂನಿವರ್ಸರ್ ಅಡಾಪ್ಟರ್ ಇಟ್ಟುಕೊಂಡಿರುತ್ತಾರೆ

ಕೋವಿಡ್ ಸಮಯದಲ್ಲಿ ಸಣ್ಣ ಮೊಬೈಲ್ ಹೋಲ್ಡರ್ ಅನ್ನು ದೀಪಿಕಾ ಪಡುಕೋಣೆ ಖರೀದಿಸಿದ್ದಾರೆ. ಪುಟ್ಟ ಆ ಮೊಬೈಲ್ ಹೋಲ್ಡರ್‌ನಲ್ಲಿ ಮೊಬೈಲ್ ಇಟ್ಟು ವಿಡಿಯೋ ಕಾಲ್‌ಗಳನ್ನು ಸುಲಭವಾಗಿ ಅಟೆಂಡ್ ಮಾಡಬಹುದಂತೆ. ಇದರ ಜೊತೆಗೆ ಯೂನಿವರ್ಸಲ್ ಅಡಾಪ್ಟರ್ ಒಂದನ್ನು ಸಹ ದೀಪಿಕಾ ಕ್ಯಾರಿ ಮಾಡುತ್ತಾರೆ. ವಿಶ್ವದ ಯಾವುದೇ ಮೂಲೆಗೆ ಹೋದರು, ಅಲ್ಲಿನ ಸ್ವಿಚ್‌ ಬೋರ್ಡ್‌ನಲ್ಲಿ ಈ ಅಡಾಪ್ಟರ್ ಅನ್ನು ಬಳಸಬಹುದಂತೆ ಹಾಗಾಗಿಯೇ ಈ ಯೂನಿವರ್ಸಲ್ ಅಡಾಪ್ಟರ್‌ ಅನ್ನು ಮರೆಯದೇ ಬ್ಯಾಗಿನಲ್ಲಿಟ್ಟುಕೊಳ್ಳುತ್ತಾರೆ. ಆ ಅಡಾಪ್ಟರ್ ಅನ್ನು ಚಿನ್ನ ಎಂದು ಕರೆಯುತ್ತಾರೆ ದೀಪಿಕಾ.

ಆರೋಗ್ಯ, ಸ್ವಚ್ಚತೆಗೆ ಸಂಬಂಧಿಸಿದ ವಸ್ತುಗಳು

ಆರೋಗ್ಯ, ಸ್ವಚ್ಚತೆಗೆ ಸಂಬಂಧಿಸಿದ ವಸ್ತುಗಳು

ಕೊನೆಗೆ ಒಂದು ಪ್ರತ್ಯೇಕ ಕಿಟ್ ಅನ್ನು ದೀಪಿಕಾ ತಮ್ಮ ಬ್ಯಾಗಿನಲ್ಲಿಟ್ಟುಕೊಂಡಿರುತ್ತಾರೆ. ವೈಯಕ್ತಿಕ ಆರೋಗ್ಯ, ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಆ ಕಿಟ್‌ನಲ್ಲಿಟ್ಟಿರುತ್ತಾರೆ. ದೀಪಿಕಾ ತೆಗೆದುಕೊಳ್ಳಬೇಕಾದ ಮಾತ್ರೆಗಳು, ಆ ದಿನಗಳ ತುರ್ತಿಗೆ ಬೇಕಾದ ಟ್ರಾಂಪೊಲಿನ್, ಕಲೆ ಅಳಿಸುವ ಪೆನ್‌, ಬ್ಯಾಂಡ್‌ಏಡ್‌ಗಳು, ಹ್ಯಾಂಗ್ ಓವರ್ ಆದರೆ ತೆಗೆದುಕೊಳ್ಳಲು ಮಾತ್ರೆ. ಸೇಫ್ಟಿ ಪಿನ್‌ಗಳು, ಗಾಯವಾದರೆ ಹಚ್ಚುವ ಮುಲಾಮುಗಳು ಇತರೆ ಕೆಲವು ವಸ್ತುಗಳನ್ನು ದೀಪಿಕಾ ಆ ಕಿಟ್‌ನಲ್ಲಿ ಇಟ್ಟುಕೊಂಡಿರುತ್ತಾರೆ.

ನಟಿಯರು ತಮ್ಮ ಬ್ಯಾಗಿನಲ್ಲಿ ಏನಿಟ್ಟುಕೊಂಡಿರಬೇಕು?

ನಟಿಯರು ತಮ್ಮ ಬ್ಯಾಗಿನಲ್ಲಿ ಏನಿಟ್ಟುಕೊಂಡಿರಬೇಕು?

ನಟ-ನಟಿಯರು ತಮ್ಮ ಬ್ಯಾಗಿನಲ್ಲಿ ಏನಿಟ್ಟುಕೊಂಡಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ, ''ನಟಿಯರು ಸಾಮಾನ್ಯವಾಗಿ ವಿಶ್ವದ ತುಂಬೆಲ್ಲ ಓಡಾಡುತ್ತಿರುತ್ತಾರೆ ಹಾಗಾಗಿ ಅವರು ಮನೆಯೊಟ್ಟಿಗೆ ಸಂಬಂಧ ಉಳಿಸಿಕೊಳ್ಳವಂತೆ ಮಾಡುವ ಚಿತ್ರವೊ, ವಸ್ತುವನ್ನೋ ಇಟ್ಟುಕೊಂಡರೆ ಒಳ್ಳೆಯದು. ಸ್ಟಾರ್‌ಗಳಲ್ಲ ನಾವು ಸಾಮಾನ್ಯ ಮನುಷ್ಯರು ಎಂದು ನೆನಪಿಸುವ ವಸ್ತುವೊಂದನ್ನು ಬ್ಯಾಗಿನಲ್ಲಿಟ್ಟುಕೊಂಡರೆ ಸಹ ಬಹಳ ಒಳ್ಳೆಯದು. ನಾನು ನನ್ನ ಕುಟುಂಬದ ಚಿತ್ರಗಳನ್ನು ಇಟ್ಟುಕೊಂಡಿರುತ್ತೇನೆ'' ಎಂದಿದ್ದಾರೆ ದೀಪಿಕಾ ಪಡುಕೋಣೆ.

More from Filmibeat

English summary
What is inside actress Deepika Padukone's bag. She showed what is in her bag. She carries notebook and pencil in her bag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X