ನನ್ನ ತಪ್ಪೇನು, ಅದರಿಂದಾಗಿ ನನ್ನ ವೇಶ್ಯೆ ಎಂದು ಕರೆಯುತ್ತಾರೆ ; ಕಣ್ಣೀರಿಟ್ಟ ರಣವಿಕ್ರಮ ನಾಯಕಿ..
ಮರ್ಯಾದೆ ಕೊಟ್ಟು ಮರ್ಯಾದೆ ತಗೊಬೇಕು. ಯಾರನ್ನೂ ಕೀಳಾಗಿ ಕಾಣ್ಬಾರ್ದು. ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ರಿಗೂ ಅವರದೇ ಆದ ಸ್ಥಾನವಿದೆ. ಮೊನ್ನೆ ರಣವಿಕ್ರಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಂಡಿದ್ದ ಅದಾ ಶರ್ಮಾ ಹೇಳಿದ್ದು ಇದನ್ನೇ.
ಹೌದು, ದಿ ಕೇರಳ ಸ್ಟೋರಿ ಚಿತ್ರದ ಮೂಲಕ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಅಗಣಿತ ಅಭಿಮಾನಿಗಳನ್ನ ಸಂಪಾದಿಸಿದವರು ಅದಾ ಶರ್ಮಾ. ಆ ನಂತರ ಅದೇ ತಂಡದ ಜೊತೆ ಅದಾ ಶರ್ಮಾ ಬಸ್ತರ್ ಸಿನಿಮಾವನ್ನೂ ಮಾಡಿದ್ದ ವಿಚಾರ ನಿಮಗೆ ಗೊತ್ತೇ ಇರಬೇಕು.

ಸದ್ಯದ ಸಮಾಚಾರ ಏನೆಂದರೆ ದಿ ಕೇರಳ ಸ್ಟೋರಿಯನ್ನ ನೋಡಿದ್ದ ಜನ ಬಸ್ತರ್ ನ ನೋಡಲಿಲ್ಲ. ಸಿನಿಮಾ ಗೆಲ್ಲಲಿಲ್ಲ. ಇದಕ್ಕೆ ಕಾರಣ ಏನು..? ಅನ್ನುವುದಕ್ಕೆ ಸದ್ಯಕ್ಕೆ ಚಿತ್ರತಂಡದ ಬಳಿ ಉತ್ತರ ಇಲ್ಲವಾದರೂ ಅದಾ ಶರ್ಮಾ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಟ್ರೋಲ್ ಗಳಿಂದ ಆದ ಕಿರಿಕಿರಿಯ ಕಥೆಯನ್ನೂ ಹಂಚಿಕೊಂಡಿದ್ದಾರೆ
ಹೌದು, ದಿ ಕೇರಳ ಸ್ಟೋರಿ ಚಿತ್ರದ ನಂತರ, ಬಸ್ತರ್ ಸಿನಿಮಾದ ಘೋಷಣೆಯಾಗಿತ್ತು. ಇನ್ನೂ ಆ ಚಿತ್ರದ ಪೋಸ್ಟರ್ ಬಿಡುಗಡೆಯಾದಾಗ ಆ ಚಿತ್ರದ ನಾಯಕಿ ನಾನೇ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ ಆದರೂ ಕೂಡ ಅನೇಕರು ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದರು ಎಂದಿರುವ ಅದಾ ಶರ್ಮಾ, ಬಸ್ತರ್ ಚಿತ್ರಕ್ಕೂ ಪ್ರೊಪಗಂಡಾ ಸಿನಿಮಾ ಎಂಬ ಹಣೆಪಟ್ಟಿಯನ್ನ ಕಟ್ಟಿದರು ಎಂದು ಬೇಸರವನ್ನ ಹೊರ ಹಾಕಿದ್ದಾರೆ.
ಇನ್ನೂ ನಾನು ಯಾವುದೇ ಪೋಸ್ಟ್ ಹಾಕಿದರೂ ಅಲ್ಲಿ ಬಂದು ನನ್ನ ಮಾನಸಿಕ ನೆಮ್ಮದಿಯನ್ನ ಹಾಳು ಮಾಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ ಎಂದಿರುವ ಅದಾ ಶರ್ಮಾ, ಸನ್ ಪ್ಲವರ್ ಸೀಸನ್ ಎರಡು ಬಿಡುಗಡೆ ಸಮಯದಲ್ಲಿ ಅನೇಕರು ನನಗೆ ವೇಶ್ಯೆಯ ಪಟ್ಟವನ್ನೂ ಕಟ್ಟಿದರು ಎಂದು ಬಿಕ್ಕಿದ್ದಾರೆ. ಟ್ರೋಲ್ ಗಳಿಂದ ನಾನು ಕುಗ್ಗಿ ಹೋಗಿದ್ದೇ ಎಂದಿದ್ದಾರೆ

ಮೊದ ಮೊದಲು ಇದೆಲ್ಲದರಿಂದ ಹೊರ ಬರುವುದು ಹೇಗೆ ಎಂದು ನನಗೆ ಅರ್ಥವಾಗಲಿಲ್ಲವೆಂದಿರುವ ಅದಾ ಶರ್ಮಾ ಅವರದ್ದು ಈಗ ಡೊಂಟ್ ಕೇರ್ ವ್ಯಕ್ತಿತ್ವ. ಇನ್ನೂ ಇದೇ ವೇಳೆ ಟ್ರೋಲ್ ಮಾಡುವವರಿಗೂ ತಿರುಗೇಟು ಕೊಟ್ಟಿರುವ ಅದಾ ಶರ್ಮಾ, ನೀವು ಸಿನಿಮಾವನ್ನು ನೋಡುವ ಮೊದಲು ಅದನ್ನು ಟೀಕಿಸಲು ಬಯಸಿದರೆ, ಅದು ನಿಮಗೆ ಬಿಟ್ಟದ್ದು ಎಂದಿದ್ದಾರೆ. "ನಿಮಗೆ ಅನಿಸಿದ್ದನ್ನು ಹೇಳುವ ಹಕ್ಕು ಹೇಗೆ ನಿಮಗಿದೆಯೋ ಹಾಗೇ ಒಬ್ಬ ನಟಿಯಾಗಿ ನನಗೆ ಇಷ್ಟವಾದ ಚಿತ್ರಗಳನ್ನು ಮಾಡುವ ಹಕ್ಕು ನನಗಿದೆ" ಎಂದಿದ್ದಾರೆ.
ಒಟ್ನಲ್ಲಿ ತನ್ನ ಬೋಲ್ಡ್ ನಿರ್ಧಾರಗಳಿಂದನೇ, ಬಣ್ಣದ ಪ್ರಪಂಚದಲ್ಲಿ ನೆಲೆಯೂರಿ ಒಂದಾದ ಮೇಲೊಂದು ಸಿನಿಮಾ ಮಾಡ್ತಿರುವ ಅದಾ ಶರ್ಮಾ, ಟ್ರೋಲ್ ಗಳಿಂದ ನೊಂದು ಬೆಂದು ಹೋದ ಕಥೆ ಹಂಚಿಕೊಂಡಿದ್ದಾರೆ. ಚಿತ್ರವನ್ನ ನೋಡದೇ ಆ ಚಿತ್ರದ ಬಗ್ಗೆ ತಂಟೆ ತಕರಾರು ತೆಗೆಯುವರಿಗೂ ಮಾತಿನ ಮೂಲಕ ಚಾಟಿ ಬೀಸಿದ್ದಾರೆ. ಅದಾ ಶರ್ಮಾ ಅವರ ಈ ಮಾತು ಮಂಥನ ಬಾಲಿವುಡ್ ನಲ್ಲಿ ಹೊಸದೊಂದು ಚರ್ಚೆಯನ್ನ ಹುಟ್ಟು ಹಾಕಿದೆ.


Click it and Unblock the Notifications











