ಲಾಕ್‌ಡೌನ್ ಮುಗಿದ ಮೇಲೆ ಸನ್ನಿ ಲಿಯೋನ್ ಮಾಡುವ ಮೊದಲ ಕೆಲಸ ಇದೇ ಅಂತೆ

ಇಡೀಯ ದೇಶದ ಜನರೇ ಕೊರೊನಾ ವೈರಸ್ ಕಾರಣದಿಂದ ಲಾಕ್‌ಡೌನ್‌ ನಲ್ಲಿದ್ದಾರೆ. ಏಪ್ರಿಲ್ 14 ರ ವರೆಗೆ ಇದ್ದ ಲಾಕ್‌ಡೌನ್ ಅನ್ನು ಏಪ್ರಿಲ್ 30 ರ ವರೆಗೆ ವಿಸ್ತರಿಸಲಾಗಿದ್ದು, ಕಠಿಣ ದಿನಗಳು ಇನ್ನೂ ಮುಗಿದಿಲ್ಲ.

ಲಾಕ್‌ಡೌನ್ ಅನುಭವಿಸುತ್ತಾ, ಲಾಕ್‌ಡೌನ್ ಮುಗಿದ ಮೇಲೆ ಏನೇನು ಮಾಡಬೇಕು ಎಂದು ಈಗಿನಿಂದಲೇ ಯೋಜನೆ ರೂಪಿಸುತ್ತಿದ್ದಾರೆ. ಬಾಲಿವುಡ್‌ ಸೆಲೆಬ್ರಿಟಿಗಳು ಸಹ ಇದಕ್ಕೆ ಹೊರತಲ್ಲ.

ಕೊರೊನಾ ಲಾಕ್‌ಡೌನ್ ನಿಂದಾಗಿ ಮನೆಯಲ್ಲಿಯೇ ಉಳಿದಿರುವ ನಟಿ ಸನ್ನಿ ಲಿಯೋನ್ ಸಹ ಲಾಕ್‌ ಡೌನ್ ಮುಗಿದ ಮೇಲೆ ಮೊದಲು ಏನು ಮಾಡಬೇಕು ಎಂದು ಈಗಲೇ ಲೆಕ್ಕಾ ಹಾಕಿಕೊಂಡು ಕೂತಿದ್ದಾರೆ.

ಲಾಕ್‌ಡೌನ್ ಮುಗಿದ ಕೂಡಲೇ ಇದನ್ನು ಮಾಡ್ತಾರೆ ಸನ್ನಿ

ಲಾಕ್‌ಡೌನ್ ಮುಗಿದ ಕೂಡಲೇ ಇದನ್ನು ಮಾಡ್ತಾರೆ ಸನ್ನಿ

ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸನ್ನಿ ಲಿಯೋನಿ, 'ಲಾಕ್‌ಡೌನ್ ಮುಗಿದ ಕೂಡಲೇ ಮೊದಲು ಮಕ್ಕಳನ್ನು ಶಾಲೆಗೆ ಡ್ರಾಪ್‌ ಮಾಡಿ, ನೆಮ್ಮದಿಯ ಉಸಿರು ಬಿಡಬೇಕು'' ಎಂದು ಹೇಳಿದ್ದಾರೆ ಸನ್ನಿ ಲಿಯೋನ್.

ಮೂರೂ ಮಕ್ಕಳ ಬಹಳಾ ತುಂಟರಂತೆ: ಸನ್ನಿ

ಮೂರೂ ಮಕ್ಕಳ ಬಹಳಾ ತುಂಟರಂತೆ: ಸನ್ನಿ

ಸನ್ನಿ ಲಿಯೋನ್ ಗೆ ಮೂರು ಜನ ಸಣ್ಣ ಮಕ್ಕಳಿದ್ದಾರೆ. ಆಕೆಯೇ ಹೇಳುವ ಪ್ರಕಾರ ಮೂರೂ ಜನ ಮಕ್ಕಳು ಬಹಳಾ ತುಂಟರಂತೆ. 'ಮಕ್ಕಳಿಗೆ ಹೆಚ್ಚು ಗಮನವಹಿಸಬೇಕು, ಅವರಿಗೆ ಶಾಲೆಯ ಅವಶ್ಯಕತೆಯೂ ಹೆಚ್ಚಿದೆ, ಹಾಗಾಗಿ ಅವರನ್ನು ಮೊದಲು ಶಾಲೆಗೆ ಬಿಡಬೇಕು' ಎಂದಿದ್ದಾರೆ ಸನ್ನಿ.

ಮಕ್ಕಳೂ ಶಾಲೆಯನ್ನು ಮಿಸ್ ಮಾಡಿಕೊಳ್ತಿದ್ದಾರೆ: ಸನ್ನಿ

ಮಕ್ಕಳೂ ಶಾಲೆಯನ್ನು ಮಿಸ್ ಮಾಡಿಕೊಳ್ತಿದ್ದಾರೆ: ಸನ್ನಿ

ಮಕ್ಕಳು ಸಹ ಶಾಲೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಗೆಳೆಯರು, ಶಿಕ್ಷಕರು, ಅಲ್ಲಿ ನಡೆಯುವ ಚಟುವಟಿಕೆಗಳನ್ನು ಮಕ್ಕಳು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಲಾಕ್‌ಡೌನ್ ಮುಗಿದ ಮೇಲೆ ಮಕ್ಕಳನ್ನು ದುಬೈ ಗೆ ಕರೆದುಕೊಂಡು ಹೋಗುವುದಾಗಿ ಪ್ರಾಮಿಸ್ ಮಾಡಿದ್ದಾರಂತೆ ಸನ್ನಿ ಮತ್ತು ಪತಿ ಡೇನಿಯಲ್.

ಮನೆಯನ್ನೆಲ್ಲಾ ಒಪ್ಪ ಓರಣ ಮಾಡಬೇಕು: ಸನ್ನಿ

ಮನೆಯನ್ನೆಲ್ಲಾ ಒಪ್ಪ ಓರಣ ಮಾಡಬೇಕು: ಸನ್ನಿ

''ಮಕ್ಕಳನ್ನು ಶಾಲೆಗೆ ಬಿಟ್ಟು, ಮನೆಯನ್ನೆಲ್ಲಾ ಮೊದಲಿನಂತೆ ಸರಿ ಮಾಡಬೇಕು, ಈಗಾಗಲೇ ಮನೆ ಮಕ್ಕಳ ತುಂಟಾಟಕ್ಕೆ ಸಿಕ್ಕಿ ಚಿತ್ರ ವಿಚಿತ್ರವಾಗಿದೆ, ಮನೆಯನ್ನು ಮೊದಲಿನಂತೆ ಒಪ್ಪ ಓರಣಗೊಳಿಸಿಕೊಳ್ಳಬೇಕು'' ಎಂದಿದ್ದಾರೆ ಸನ್ನಿ.

ಸನ್ನಿ ಲಿಯೋನ್ ದಂಪತಿಗೆ ಮೂವರು ಮಕ್ಕಳು

ಸನ್ನಿ ಲಿಯೋನ್ ದಂಪತಿಗೆ ಮೂವರು ಮಕ್ಕಳು

ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್‌ ಗೆ ನಿಶಾ, ನೋಹಾ, ಅಶೆರ್ ಮೂರು ಮಂದಿ ಮಕ್ಕಳು. ಒಂದು ಮಗುವನ್ನು ದತ್ತು ಪಡೆದಿದ್ದರೆ, ಇಬ್ಬರು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ.

More from Filmibeat

English summary
Sunny Leone told about what she will do the first thing after the lock down ends. She said she drop her kids to school.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X