ಹಾಲಿವುಡ್-ಬಾಲಿವುಡ್: ಪ್ರಿಯಾಂಕಾ ಚೋಪ್ರಾ ಆಯ್ಕೆ ಮಾಡಿದ್ದು ಯಾವುದು?

ನಟಿ ಪ್ರಿಯಾಂಕಾ ಚೋಪ್ರಾ ಈಗ ಬಾಲಿವುಡ್‌ಗೆ ಮಾತ್ರ ಸೀಮಿತವಲ್ಲ. ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್‌ನಲ್ಲಿ ಮಾತ್ರವಲ್ಲ ಹಾಲಿವುಡ್‌ ಚಿತ್ರಗಳಲ್ಲೂ ನಟಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ. ಆ ಕಡೆ ಹಾಲಿವುಡ್ ಈ ಕಡೆ ಬಾಲಿವುಡ್ ಹೀಗೆ ಎರಡೂ ಇಂಡಸ್ಟ್ರಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಟಿ ಪ್ರಯತ್ನಿಸುತ್ತಿದ್ದಾರೆ.

ಆದರೆ, ಕಳೆದ ನಾಲ್ಕು ವರ್ಷದಿಂದ ನಟಿ ಪ್ರಿಯಾಂಕಾ ಚೋಪ್ರಾ ಬಿಟೌನ್‌ನಿಂದ ಅಂತರ ಕಾಯ್ದುಕೊಂಡಿದ್ದು, ಹೆಚ್ಚು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಪ್ರಿಯಾಂಕಾಗೆ ಹಾಲಿವುಡ್ ಅಥವಾ ಬಾಲಿವುಡ್ ಎಂಬ ಆಯ್ಕೆ ಎದುರಾದಾಗಿದೆ. ಎರಡು ಇಂಡಸ್ಟ್ರಿಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ ಆಕೆ ಕೊಟ್ಟ ಉತ್ತರ ಹೆಚ್ಚು ಸುದ್ದಿಯಾಗಿದೆ.

ಇತ್ತೀಚಿಗಷ್ಟೆ ನಟಿ ಪ್ರಿಯಾಂಕಾ ವಿಡಿಯೋ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದರು. ತಮಗೆ ಯಾವುದು ಇಷ್ಟ ಎಂಬ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಅದರಲ್ಲಿ ಕೇಳಲಾಯಿತು. ಕ್ವಾಲಿಟಿ ಅಥವಾ ಕ್ವಾಂಟಿಟಿ, ಬಿಸಿ ಕಾಫಿ ಅಥವಾ ಐಸ್ ಕಾಫಿ, ಮೆಟಲ್ ಸ್ಟ್ರಾ ಅಥವಾ ಪೇಪರ್ ಸ್ಟ್ರಾ, ಹೇರ್ ಮಾಸ್ಕ್ ಅಥವಾ ಕಂಡಿಷನರ್, ಬ್ಲೋ ಡ್ರೈ ಅಥವಾ ಏರ್ ಡ್ರೈ ಹೀಗೆ ಇನ್ನು ಹಲವು ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸಿದ ಪ್ರಿಯಾಂಕಾ, ಕೊನೆಯಲ್ಲಿ ಹಾಲಿವುಡ್ ಅಥವಾ ಬಾಲಿವುಡ್ ಎಂದು ಕೇಳಿದ್ದಕ್ಕೆ 'ನಾನು ಕ್ವಿಟ್ ಮಾಡುತ್ತೇನೆ' ಎಂದು ಹೇಳಿದ್ದಾರೆ.

What Priyanka Chopra Choosed In Bollywood or Hollywood?

ಪ್ರಿಯಾಂಕಾ ಚೋಪ್ರಾ ಸದ್ಯ ಟಿವಿ ಸಿರೀಸ್ 'ಸಿಟಾಡೆಲ್' ಚಿತ್ರೀಕರಣ ಮಾಡುತ್ತಿದ್ದಾರೆ. ಲಂಡನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಚಿತ್ರ ಹಂಚಿಕೊಂಡಿದ್ದಾರೆ ಪಿಗ್ಗಿ. ಈ ಸ್ಪೈ ಥ್ರಿಲ್ಲರ್‌ನಲ್ಲಿ 'ಗೇಮ್ ಆಫ್ ಥ್ರೋನ್ಸ್' ಖ್ಯಾತಿಯ ರಿಚರ್ಡ್ ಮ್ಯಾಡೆನ್ ಕೂಡ ನಟಿಸಿದ್ದಾರೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಆಕ್ಷನ್ ದೃಶ್ಯಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸಿಟಾಡೆಲ್ ಚಿತ್ರೀಕರಣ ವೇಳೆ ಪ್ರಿಯಾಂಕಾ ಚೋಪ್ರಾಗೆ ಗಾಯವಾಗಿದೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಡಹುಬ್ಬು ಕಟ್ ಆಗಿ ತೀವ್ರ ರಕ್ತಸ್ರಾವವಾಗಿದೆ. ಪ್ರಿಯಾಂಕಾ ಮುಖದ ಮೇಲೆ ಇನ್ನೂ ಕೆಲವು ಗಾಯಗಳು ಇವೆ. ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಚಿತ್ರ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಮುಖದ ಮೇಲೆ ಆಗಿರುವ ಗಾಯಗಳಲ್ಲಿ ಯಾವುದು ನಿಜ ಯಾವುದು ಸುಳ್ಳು ಹುಡುಕಿ ಎಂದಿದ್ದಾರೆ. ನಂತರ ಮುಂದಿನ ಚಿತ್ರದಲ್ಲಿ ಅವರೇ ಉತ್ತರ ಹೇಳಿದ್ದು, ಹುಬ್ಬಿನ ಮೇಲೆ ಆಗಿರುವುದು ನಿಜವಾದ ಗಾಯ, ಕೆನ್ನೆಯ ಮೇಲೆ ಆಗಿರುವುದು ಫೇಕ್ ಗಾಯ ಎಂದಿದ್ದಾರೆ.

What Priyanka Chopra Choosed In Bollywood or Hollywood?

ಪ್ರಿಯಾಂಕಾ ಚೋಪ್ರಾ ಅವರ ಮುಂದಿನ ಪ್ರಾಜೆಕ್ಟ್‌ಗಳನ್ನು ನೋಡುವುದಾದರೆ, 'ಸಿಟಾಡೆಲ್' ಜೊತೆ 'ಮೆಟ್ರಿಕ್ಸ್' ಹಾಗೂ ಸ್ಯಾಮ್ ಹ್ಯೂಘನ್, ಸೆಲೀನ್ ಡಿಯಾನ್, ರಸೆಲ್ ಟೋವಿ ಮತ್ತು ಒಮಿಡ್ ಜಲೀಲಿ ನಟಿಸುತ್ತಿರುವ 'ಟೆಕ್ಸ್ಟ್‌ ಫಾರ್ ಯೂ' ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಇನ್ನು ಹಿಂದಿಯಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ಜೊತೆ 'ಜೀ ಲಿ ಜರಾ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀಲಾ ಮತ್ತು ಕಲ್ಪಾ ಚಾವ್ಲಾ ಚಿತ್ರಗಳು ಸಹ ಪ್ರಿಯಾಂಕಾ ಕೈಯಲ್ಲಿದೆ.

ಪ್ರಿಯಾಂಕಾ ಚೋಪ್ರಾ ನಟಿಸಿರುವ 'ದಿ ಮ್ಯಾಟ್ರಿಕ್ಸ್; ರಿಸೆರಕ್ಷನ್' ಸಿನಿಮಾವು ಡಿಸೆಂಬರ್ 15ಕ್ಕೆ ಬಿಡುಗಡೆ ಆಗಲಿದೆ. ಪ್ರಿಯಾಂಕಾ ಅಭಿನಯಿಸಿದ್ದ ಹಾಲಿವುಡ್ ಸಿನಿಮಾ 'ವಿ ಕ್ಯಾನ್ ಬಿ ಹೀರೋಸ್' ಇತ್ತೀಚೆಗೆ ಬಿಡುಗಡೆ ಆಗಿತ್ತು.

ಭಾರತಕ್ಕೆ ಬರುವುದು ಬಹು ಅಪರೂಪವಾದ ಕಾರಣ ಮುಂಬೈನ ಎರಡು ಮನೆಗಳನ್ನು ಪ್ರಿಯಾಂಕಾ ಚೋಪ್ರಾ ಮಾರಿದ್ದಾರೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿತ್ತು. ಅಂಧೇರಿ ವೆಸ್ಟ್‌ನ ರಾಜ್ ವರ್ಸೋವಾ ಅಪಾರ್ಟ್‌ಮೆಂಟ್ಸ್‌ನಲ್ಲಿ ಎರಡು ಐಶಾರಾಮಿ ಫ್ಲ್ಯಾಟ್‌ಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ಹೊಂದಿದ್ದರು. ಕೆಲವಾರು ವರ್ಷಗಳ ಹಿಂದೆ ಖರೀದಿಸಿದ್ದ ಫ್ಲ್ಯಾಟ್‌ಗಳನ್ನು ಬರೋಬ್ಬರಿ ಏಳು ಕೋಟಿ ರುಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿತ್ತು.

More from Filmibeat

English summary
Actress Priyanka Chopra asked to Select Bollywood or Hollywood. Watch what she chose?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X