ಖಳನಾಯಕನಿಗೆ ಮುಸ್ಲಿಂ ಹೆಸರಿಟ್ಟರೆ ಸಮಸ್ಯೆಯೇನು?: ರೋಹಿತ್ ಶೆಟ್ಟಿ
ರೋಹಿತ್ ಶೆಟ್ಟಿ ಬಾಲಿವುಡ್‌ನ ಪ್ರಸ್ತುತ ಟಾಪ್ ನಿರ್ದೇಶಕರ ಪೈಕಿ ಒಬ್ಬರು. ಬಾಲಿವುಡ್ ಮಂದಿಗೆ ಸೌತ್ ಶೈಲಿಯ ಆಕ್ಷನ್- ಮಸಾಲ ಚಿತ್ರಗಳ ಪರಿಚಯವಾಗಿದ್ದೆ ರೋಹಿತ್ ಶೆಟ್ಟಿ ಮೂಲಕ. ಸೌತ್ ಶೈಲಿಯ ಫುಲ್ ಪ್ಯಾಕ್ಡ್ ಮಸಾಲ ಎಂಟರ್ಟೈನ್ಮೆಂಟ್ ಕೊಡುವುದರಲ್ಲಿ ರೋಹಿತ್ ಶೆಟ್ಟಿ ಸಿದ್ಧಹಸ್ತರು. ಹೀಗಾಗಿ ರೋಹಿತ್ ಶೆಟ್ಟಿ ಅವರ ಅಭಿಮಾನಿ ಬಳಗ ಬಾಲಿವುಡ್ ಫಿಲಂ ಪ್ರಿಯರಲ್ಲಿ ದೊಡ್ಡ ಮಟ್ಟದಲ್ಲಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರ ಅಂದರೆ ಮಿನಿಮಮ್ ಗ್ಯಾರಂಟಿ ಎಂಬ ಮಾತು ಕೂಡ ಬಾಲಿವುಡ್ ಸರ್ಕಲ್‌ನಲ್ಲಿದೆ.

ಎಂ.ಬಿ.ಶೆಟ್ಟಿ ಮಗ ರೋಹಿತ್ ಶೆಟ್ಟಿ
ಮುದ್ದು ಬಾಬು ಶೆಟ್ಟಿ ಅಥವಾ ಎಂ.ಬಿ ಶೆಟ್ಟಿ ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ಸ್ಟಂಟ್ ಮಾಸ್ಟರ್ ಆಗಿದ್ದರು. ಮೂಲತಃ ತುಳುನಾಡಿನ ಉಡುಪಿಯವರಾದ ಶೆಟ್ಟಿಯವರು 'ಶೆಟ್ಟಿ ಮಾಸ್ಟರ್' ಅಂತಲೇ ಬಾಲಿವುಡ್‌ನಲ್ಲಿ ಕರೆಸಿಕೊಂಡವರು. ಚಿತ್ರರಂಗಕ್ಕೆ ಬರುವುದಕ್ಕೆ ಮೊದಲು ಅವರು ಮುಂಬೈನ 'ಕಾಟನ್ ಗ್ರೀನ್' ಹೋಟೆಲ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಆರಂಭದ ಹಂತದಲ್ಲಿ ಸ್ಟೆಂಟ್ ಸಹಾಯಕರಾಗಿ, ವಿಲನ್ ಆಗಿ ಸಣ್ಣಪುಟ್ಟ ಪಾತ್ರಗಳಲ್ಲಿ ಸಹ ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡರು. ಆನಂತರ ಸ್ವತಂತ್ರ ಸಾಹಸ ನಿರ್ದೇಶಕರಾಗಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು. 'ಡಾನ್', 'ದಿವಾರ್', 'ತ್ರಿಶೂಲ್' ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟ ಚಿತ್ರಗಳು. ಕೇವಲ ಸಾಹಸ ನಿರ್ದೇಶಕರಾಗಿ ಮಾತ್ರವಲ್ಲದೆ ನಟನಾಗಿ- ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ ಶೆಟ್ಟಿ ಅವರು. ಬಾಲಿವುಡ್‌ನ ಜನಪ್ರಿಯ ಸಾಹಸ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಶೆಟ್ಟಿ ಅವರ ಮಗನೇ ರೋಹಿತ್ ಶೆಟ್ಟಿ.

ಮೊದಲಿಂದಲೂ ನಿರ್ದೇಶನದ ಮೇಲೆ ಆಸಕ್ತಿ
ರೋಹಿತ್ ಶೆಟ್ಟಿ ಅವರಿಗೆ ಬಾಲ್ಯದಿಂದಲೂ ನಿರ್ದೇಶನದ ಮೇಲೆ ಅತೀವವಾದ ಆಸಕ್ತಿ. ಹೀಗಾಗಿ ತಮ್ಮ 17ನೇ ವಯಸ್ಸಿಗೆ ಅಜಯ್ ದೇವಗನ್ ಅಭಿನಯದ ಮೊಟ್ಟ ಮೊದಲ ಚಿತ್ರ 'ಫೂಲ್ ಔರ್ ಕಾಂಟೆ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸುತ್ತಾರೆ. ಇದೇ ಸಮಯದಲ್ಲಿ ಶೆಟ್ಟಿ ಅವರಿಗೆ ಅಜಯ್ ದೇವಗನ್ ಅವರೊಂದಿಗೆ ಉತ್ತಮವಾದ ಸ್ನೇಹ ಮತ್ತು ಸಂಬಂಧ ಏರ್ಪಡುತ್ತದೆ. ಒಂದು ಅರ್ಥದಲ್ಲಿ ಹೇಳಬೇಕೆಂದರೆ ಶೆಟ್ಟಿ ಪಾಲಿಗೆ ಅಜಯ್ ದೇವಗನ್ ಗಾಡ್ ಫಾದರ್ ಆಗಿರುತ್ತಾರೆ. ಹೀಗಾಗಿಯೇ ಅವರ ಮೊಟ್ಟ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರ 'ಜಮೀನ್' ಅಜಯ್ ದೇವಗನ್ ಅವರಿಗೆ ನಿರ್ದೇಶನ ಮಾಡುತ್ತಾರೆ.

ಗೋಲ್ ಮಾಲ್ ಸರಣಿ ತಂದುಕೊಟ್ಟ ಯಶಸ್ಸು
ಮೊದಲ ಚಿತ್ರ 'ಜಮೀನ್' ಅಂತಹ ಯಶಸ್ಸು ಕಾಣದೇ ಹೋದಾಗ ಶೆಟ್ಟಿಗೆ ಕೆಲಸವಿಲ್ಲದೆ ಹೋಗುತ್ತದೆ. ಆಗಲೂ ಅವರಿಗೆ ಬೆನ್ನುತಟ್ಟಿ ಅಜಯ್ ದೇವಗನ್ ಅವಕಾಶ ಕೊಡುತ್ತಾರೆ ಅದೇ 'ಗೋಲ್ ಮಾಲ್'. 'ಗೋಲ್ ಮಾಲ್ ' ಹಾಸ್ಯ ಪ್ರಧಾನ ಚಿತ್ರವಾಗಿದ್ದು ಚಿತ್ರ ಸಕ್ಕತ್ತಾಗಿ ಯಶಸ್ಸನ್ನು ಕಾಣುತ್ತದೆ. ಮುಂದೆ 'ಗೋಲ್ ಮಾಲ್' ಸರಣಿ 2, 3 ಕೂಡ ಯಶಸ್ಸು ಕಾಣುತ್ತದೆ.

ಮಾಸ್ ಚಿತ್ರಗಳ ಕಡೆಗೆ ಮನಸ್ಸು ಮಾಡಿದ ರೋಹಿತ್ ಶೆಟ್ಟಿ
'ಗೋಲ್ ಮಾಲ್'ಸರಣಿ ಯಶಸ್ವಿ ಕಾಣುತ್ತಿದ್ದರು ರೋಹಿತ್ ಶೆಟ್ಟಿ ಅವರಿಗೆ ನಿರ್ದೇಶಕನಾಗಿ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಆಗಲೇ ಅವರು ಸೌತ್ ಚಿತ್ರಗಳ ಕಡೆಗೆ ಮುಖಮಾಡಿ ನೋಡುತ್ತಾರೆ. ಸೌತ್ ಸಿನಿ ಇಂಡಸ್ಟ್ರಿಯ ಮಾಸ್ ಚಿತ್ರಗಳ ನಿರ್ದೇಶಕರ ಸ್ಥಾನಮಾನದ ಬಗ್ಗೆ ಚೆನ್ನಾಗಿ ಅರಿತಿದ್ದ ರೋಹಿತ್ ಶೆಟ್ಟಿಯವರು, ಅಂತಹ ಮಾಸ್ ಚಿತ್ರಗಳ ನಿರ್ದೇಶನಕ್ಕೆ ಮನಸ್ಸು ಮಾಡುತ್ತಾರೆ. ತಮಿಳಿನ ಯಶಸ್ವಿ ಚಿತ್ರ 'ಸಿಂಗಂ' ಹಿಂದಿಗೆ ರಿಮೇಕ್ ಮಾಡುತ್ತಾರೆ. ಚಿತ್ರ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದೆ. 'ಸಿಂಗಂ' ಯಶಸ್ಸಿನ ನಂತರ ರೋಹಿತ್ ಶೆಟ್ಟಿ ಅವರ ವೃತ್ತಿ ಜೀವನ ಬದಲಾಗುತ್ತದೆ.

ಮಾಸ್ ಸಿನಿಮಾಗಳ ಟಾಪ್ ಡೈರೆಕ್ಟರ್
'ಸಿಂಗಂ' ಯಶಸ್ಸಿನ ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್ಪ್ರೆಸ್' ನಿರ್ದೇಶನ ಮಾಡಿ ಬಾಲಿವುಡ್ ಟಾಪ್ ಡೈರೆಕ್ಟರ್ ಲಿಸ್ಟ್‌ನಲ್ಲಿ ಸೇರ್ಪಡೆಯಾಗುತ್ತಾರೆ. ರಣವೀರ್ ಸಿಂಗ್ ಅಭಿನಯದ 'ಸಿಂಬಾ' ಚಿತ್ರ ಕೂಡ ಮಾಸ್ ಚಿತ್ರವಾಗಿ ಯಶಸ್ಸನ್ನು ರೋಹಿತ್ ಶೆಟ್ಟಿ ಅವರಿಗೆ ತಂದುಕೊಟ್ಟಿತು. ಪ್ರಸ್ತುತ ಬಾಲಿವುಡ್‌ನಲ್ಲಿ ರೋಹಿತ್ ಶೆಟ್ಟಿ ಎಂದರೆ ಮಾಸ್ ಚಿತ್ರಗಳ ಟಾಪ್ ಡೈರೆಕ್ಟರ್.

ಸೂರ್ಯವಂಶಿ ಬಗ್ಗೆ ರೋಹಿತ್ ಶೆಟ್ಟಿ ಹೇಳಿದ ವಿಷಯಗಳೇನು?
ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಅಭಿನಯದ ಅಜಯ್ ದೇವಗನ್, ರಣವೀರ್ ಸಿಂಗ್ ವಿಶೇಷ ಪಾತ್ರಗಳಲ್ಲಿ ನಟಿಸಿರುವ 'ಸೂರ್ಯವಂಶಿ' ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕರೋನಾ ಎರಡನೆಯ ಅಲೆ ನಂತರ ಬಿಡುಗಡೆಯಾದ ಬಾಲಿವುಡ್ ಚಿತ್ರಗಳಲ್ಲಿ ಅತ್ಯಂತ ಯಶಸ್ಸು ಕಂಡ ಚಿತ್ರ ಈಗ ಸೂರ್ಯವಂಶಿ. ಇನ್ನು ಈ ಚಿತ್ರದ ಬಗ್ಗೆ 'ದಿ ಕ್ವಿಂಟ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಚಿತ್ರಗಳಿಗೆ ಬೇರೆ ಇದೆ ಪ್ರೇಕ್ಷಕ ವರ್ಗವಿದೆ
ನಾನು ಹೆಚ್ಚಿಗೆ ಮಾಸ್ ಚಿತ್ರಗಳನ್ನೇ ಮಾಡಿಕೊಂಡು ಬರುತ್ತಿರುವುದಾಗಿ ಹೇಳಿಕೊಂಡು ಬರುವ ರೋಹಿತ್ ಶೆಟ್ಟಿ ಅವರು ಈ ಬಗ್ಗೆ "ನಾನು ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳನ್ನು ಮಾಡುತ್ತೇನೆ. ಅದರಲ್ಲೂ ಸಿಂಗಲ್ ಥಿಯೇಟರ್ ಪ್ರೇಕ್ಷಕರು ನನ್ನ ಮೊದಲನೆಯ ಸಿನಿಮಾ ವರ್ಗ. ಅವರನ್ನು ಸಂತೃಪ್ತಿಪಡಿಸುವ ಪ್ರಯತ್ನ ನನ್ನ ಸಿನಿಮಾಗಳು ಮಾಡುತ್ತವೆ. ನನ್ನ ಚಿತ್ರಗಳನ್ನು ಇಷ್ಟಪಡುವ ಒಂದು ವರ್ಗವಿದೆ. ಅದೇ ಸಂದರ್ಭದಲ್ಲಿ ನನ್ನ ಚಿತ್ರಗಳನ್ನು ಕ್ರಿಟಿಸೈಸ್ ಮಾಡುವ ವರ್ಗ ಕೂಡ ಇದೆ. ನನ್ನ ಚಿತ್ರಗಳನ್ನು ನೋಡುವ ಪ್ರೇಕ್ಷಕರಿಗಾಗಿಯೇ ನಾನು ಸದಾ ಸಿನಿಮಾಗಳನ್ನು ಮಾಡುತ್ತಿರುತ್ತೇನೆ" ಅಂತ ಹೇಳಿದ್ದಾರೆ.

ಸೂರ್ಯವಂಶಿಯಲ್ಲಿ ಖಳನಾಯಕನ ಪಾತ್ರಕ್ಕೆ ಮುಸ್ಲಿಂ ಹೆಸರಿನ ಟೀಕೆಗೆ ಪ್ರತಿಕ್ರಿಯಿಸಿ....
ಇನ್ನು ಇದೇ ಸಂದರ್ಶನದಲ್ಲಿ ಸಂದರ್ಶಕಿ, " ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮುಸ್ಲಿಂ ಹೆಸರಿಡುವ ಅಗತ್ಯವಾದರೂ ಏನಿತ್ತು? " ಅಂತ ಪ್ರಶ್ನೆ ಮಾಡಿದಾಗ, ಮುಸ್ಲಿಂ ಖಳನಾಯಕರ ಟೀಕೆಗೆ ಪ್ರತಿಕ್ರಿಯಿಸಿದ್ದ ಶೆಟ್ಟಿಯವರು "ಹಿಂದೂ ಖಳನಾಯಕರು ಈ ಹಿಂದೆ ಏಕೆ ಸಮಸ್ಯೆಯನ್ನು ಸೃಷ್ಟಿಸಲಿಲ್ಲ" ಎಂದು ಕೇಳಿದ್ದಾರೆ. "ಸಿಂಗಂನಲ್ಲಿ ವಿಲನ್ ಪಾತ್ರದ ಹೆಸರು ಜಯಕಾಂತ್ ಶಿಕ್ರೆ, ಒಬ್ಬ ಹಿಂದೂ, ಕಾಪ್ ಯೂನಿವರ್ಸ್ ಇದರಲ್ಲಿ, ಒಬ್ಬ ಹಿಂದೂ ದೇವಮಾನವ ಅವನು ಖಳನಾಯಕನಾಗಿದ್ದನು. ಸಿಂಬಾದಲ್ಲಿ, ದೂರ್ವಾ ಯಶವಂತ್ ರಾನಡೆ (ಸೋನು ಸೂದ್ ನಿರ್ವಹಿಸಿದ) ಒಬ್ಬ ಮಹಾರಾಷ್ಟ್ರದವರು. ಈ ಮೂರು ಚಿತ್ರಗಳಲ್ಲಿ ನಕಾರಾತ್ಮಕ ಶಕ್ತಿಗಳು ಹಿಂದೂಗಳಾಗಿದ್ದವು. ಅದು ಏಕೆ ಸಮಸ್ಯೆಯಾಗಲಿಲ್ಲ? " ಎಂದು ಕೇಳಿದ್ದಾರೆ.

ಪಾಕಿಸ್ತಾನದಿಂದ ಬರುವ ಭಯೋತ್ಪಾದಕನಿಗೆ ಯಾವ ಜಾತಿ ಇರುತ್ತದೆ?
ಇನ್ನು ಸಂದರ್ಶನದಲ್ಲಿ ಆಸಕ್ತಿದಾಯಕವಾದ ಮತ್ತೊಂದು ವಿಷಯ ಕೂಡ ಶೆಟ್ಟಿ ಹೇಳುತ್ತಾರೆ. "ಈಗ ವಿಲನ್ ಪಾಕಿಸ್ತಾನದಿಂದ ಬಂದರೆ ಆತನ ಜಾತಿ ಅಥವಾ ಧರ್ಮ ಯಾವುದಾಗಿರುತ್ತದೆ? ಕಥೆಗೆ ಅನುಗುಣವಾಗಿಯೇ ವಿಲನ್ ಪಾತ್ರಗಳು ಸೃಷ್ಟಿ ಮಾಡಲಾಗುತ್ತದೆ ಇದರಲ್ಲಿ ಯಾವುದೇ ಜಾತಿ ಅಥವಾ ಧರ್ಮವನ್ನು ಬೆರೆಸುವ ಉದ್ದೇಶ ಇರುವುದಿಲ್ಲ. ಸಿನಿಮಾ ನೋಡುವ ಸಾಮಾನ್ಯ ಪ್ರೇಕ್ಷಕರಿಗೆ ಇದು ಯಾವುದು ಕೂಡ ಸಮಸ್ಯೆಗೆ ಕಾಣುವುದಿಲ್ಲ, ಆದರೆ ಕೆಲವು ಪತ್ರಕರ್ತರಿಗೆ ಪ್ರತಿಯೊಂದರಲ್ಲೂ ಯಾವುದೋ ಒಂದು ನಕಾರಾತ್ಮಕತೆ ಹುಡುಕುತ್ತಿರುವವರಿಗೆ ಇದೆಲ್ಲವೂ ಕೂಡ ಸಮಸ್ಯೆಯಾಗಿ ಕಾಣುತ್ತದೆ ಅಷ್ಟೇ, ನಮ್ಮಲ್ಲಿ ಸ್ಲೀಪರ್ ಸೆಲ್ ಇದ್ದರೆ ಸ್ಲೀಪರ್ ಸೆಲ್ ನಲ್ಲಿರುವನಿಗೆ ಯಾವ ಹೆಸರು ಕೊಡಬೇಕಾಗುತ್ತದೆ? " ರೋಹಿತ್ ಶೆಟ್ಟಿ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.

ರೋಹಿತ್ ಶೆಟ್ಟಿಅವರ ಖಡಕ್ ಮಾತುಗಳಿಗೆ ನೆಟ್ಟಿಗರು ಫಿದಾ!
ರೋಹಿತ್ ಶೆಟ್ಟಿ ಅವರ ಸಂದರ್ಶನ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅವರು ನೇರವಾಗಿ ಆಡಿರುವ ಮಾತುಗಳಿಗೆ ಜನ ಕೂಡ ಸಿಕ್ಕಾಪಟ್ಟೆ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ನೆಟ್ಟಿಗರು ಕೂಡ ಇದಕ್ಕೆ ಪ್ರತಿಕ್ರಿಯಿಸಿ 'ಇದು ಒಬ್ಬ ನಿರ್ದೇಶಕನಿಗೆ ಇರಬೇಕಾದ ಸ್ಪಷ್ಟತೆ. ತಾನು ಮಾಡುವ ಕೆಲಸದಲ್ಲಿ ಬದ್ಧತೆ ಇರುವ ವ್ಯಕ್ತಿಗಳು ಮಾತ್ರ ಹೀಗೆ ನೇರವಾಗಿ ವಿಷಯ ಹೇಳಲು ಸಾಧ್ಯ. ಕೆಲವರು ಕೆಲವರನ್ನು ಸಂತೃಪ್ತಿಪಡಿಸಲು ಇತಿಹಾಸ ತಿರುಚುತ್ತಾರೆ. ಅಂತಹದರಲ್ಲಿ ನೇರವಾಗಿ, ಎದೆಗಾರಿಕೆಯಿಂದ ರೋಹಿತ್ ಶೆಟ್ಟಿ ಹೇಳಿರುವ ಮಾತುಗಳು ಇಷ್ಟವಾಗುತ್ತಿದೆ' ಅಂತ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











