ಬಾಯ್‌ಫ್ರೆಂಡ್ ಚೀಟ್ ಮಾಡಿದರೇ ಶಾರುಖ್ ಖಾನ್ ಪುತ್ರಿ ಏನ್ ಮಾಡ್ತಾರಂತೆ ಗೊತ್ತಾ?

ಸುಹಾನಾ ಖಾನ್ ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ಸೆಲಬ್ರಿಟಿ ಜೋಡಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ. ಬಾಲಿವುಡ್ ಕಿಂಗ್ ಖಾನ್ ಮಗಳಾಗಿರುವ ಅವರು, ತನ್ನ ಚೊಚ್ಚಲ ಚಿತ್ರ ದಿ ಆರ್ಚೀಸ್ ಮತ್ತು ತನ್ನ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಅವರು, ಸಿನಿಮಾದ ಪಾತ್ರ ಮತ್ತು ತನ್ನ ನಿಜ ಜೀವನದ ಪಾತ್ರಗಳು ಪರಸ್ಪರ ಹೇಗೆ ಭಿನ್ನ ಎಂಬುದನ್ನು ಹೇಳಿದ್ದಾರೆ. ಸುಹಾನಾ ಖಾನ್, ಆರ್ಚೀಸ್ ಕಾಮಿಕ್ಸ್ ಆಧಾರಿತ ನೆಟ್‌ಫ್ಲಿಕ್ಸ್ ಚಿತ್ರದಲ್ಲಿ ಅವರು ವರೋನಿಕಾ ಲಾಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

suhana-khan

ಬಾಯ್‌ಫ್ರೆಂಡ್ ಬಗ್ಗೆ ಸುಹಾನಾ ಖಾನ್ ಮಾತು

ವೋಗ್ ಇಂಡಿಯಾದೊಂದಿಗಿನ ಸಂದರ್ಶನದಲ್ಲಿ, ಮಾತನಾಡಿರುವ ಅವರು ಡೇಟಿಂಗ್ ಮಾಡುತ್ತಿರುವ ಹುಡುಗರು ಇತರ ಹುಡುಗಿಯರಿಗೆ ಮೇಸೆಜ್ ಮಾಡುವುದನ್ನು ಕಂಡುಕೊಂಡರೆ ವರೋನಿಕಾ ಏನು ಮಾಡುತ್ತಾರೆ ಎಂದು ಪ್ರಶ್ನಿಸಲಾಯಿತು. ಈ ವೇಳೆ ಉತ್ತರಿಸಿರುವ ಅವರು, "ವರೋನಿಕಾ ಈಗಾಗಲೇ ತನ್ನನ್ನು ಫಾಲೋ ಮಾಡುವ ಹುಡುಗರ ದೊಡ್ಡ ಪಟ್ಟಿಯನ್ನೇ ಹೊಂದಿದ್ದಾಳೆ. ಅವಳು ಇತರ ಹುಡುಗರಿಗೆ ಸ್ವತಃ ಮೆಸೇಜ್ ಕಳುಹಿಸಲಿದ್ದಾಳೆ" ಎಂದು ಹೇಳಿದ್ದಾರೆ.

ಮುಂದುವರಿದು, ವರೋನಿಕಾ ಈ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ . ಆದರೆ, ಸುಹಾನಾ ಜೀವನದಲ್ಲಿ ಇಂತಹದ್ದು ಆಗಿಲ್ಲ ಎಂದು ಬಹಿರಂಗಪಡಿಸಿದ್ದಾರೆ. "ನನ್ನ ಜೀವನದಲ್ಲಿ ನನ್ನ ಬಾಯ್‌ಫ್ರೆಂಡ್ ಏನಾದರೂ ಹಾಗೆ ಮಾಡಿದರೆ ನಾನು ಅವನ್ನನು ಬಿಟ್ಟುಬಿಡುತ್ತೇನೆ. ಏಕೆಂದರೆ ನಾನು ಒಬ್ಬ ಮಹಿಳೆ ಒಬ್ಬ ಪುರುಷ ಎಂಬುದನ್ನು ಕಟ್ಟುನಿಟ್ಟಾಗಿ ಪಾಲಿಸುವ ಹುಡುಗಿ" ಎಂದು ತಿಳಿಸಿದ್ದಾರೆ. ಸುಹಾನಾ ಖಾನ್ ಅವರು ಅಗಸ್ತ್ಯ ನಂದಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.

suhana-khan

ದಿ ಆರ್ಚೀಸ್

ದಿ ಆರ್ಚೀಸ್ ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದಾರೆ. ಸುಹಾನಾ ಜೊತೆಗೆ, ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಜಾನ್ವಿ ಕಪೂರ್ ಅವರ ಸಹೋದರಿ, ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಕಪೂರ್ ಅವರ ಅಭಿನಯದ ಚೊಚ್ಚಲ ಚಿತ್ರವಾಗಿದೆ. ಅಗಸ್ತ್ಯ ಆರ್ಚಿ ಆಂಡ್ರ್ಯೂಸ್ ಆಗಿ ಮತ್ತು ಖುಷಿ ಕಪೂರ್ ಬೆಟ್ಟಿ ಕೂಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ವೇದಾಂಗ್ ರೈನಾ, ಯುವರಾಜ್ ಮೆಂಡಾ, ಮಿಹಿರ್ ಅಹುಜಾ ಮತ್ತು ಅದಿತಿ ಡಾಟ್ ಕೂಡ ನಟಿಸಿದ್ದಾರೆ.

ದಿ ಆರ್ಚೀಸ್ ಅನ್ನು ಟೈಗರ್ ಬೇಬಿ ಫಿಲ್ಮ್ಸ್, ಆರ್ಚಿ ಕಾಮಿಕ್ಸ್ ಮತ್ತು ಗ್ರಾಫಿಕ್ ಇಂಡಿಯಾ ನಿರ್ಮಿಸಿದೆ. ಇದು ಡಿಸೆಂಬರ್ 7 ರಿಂದ ಸ್ಟ್ರೀಮಿಂಗ್‌ ಆಗಲಿದೆ. ಚಿತ್ರದ ಟೀಸರ್ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಸಿನಿಪ್ರೇಮಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Suhana Khan talks about relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X