ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್ ಸಮಾರಂಭ ; ಕೈ ಬೀಸಿಕೊಂಡು ಹೋಗಿರಲಿಲ್ಲ ಬಾಲಿವುಡ್..!

ಅಂಬಾನಿ ಮಗನ ವಿವಾಹ ಪೂರ್ವ ಕಾರ್ಯಕ್ರಮ ಮುಗಿದು, ಹತ್ತು ದಿನಗಳಾದರೂ ಈ ಅದ್ಧೂರಿ ವೈಭೋವೋಪೇತ ಸಮಾರಂಭದ ಚರ್ಚೆ ಇನ್ನೂ ಮುಕ್ತಾಯವಾಗಿಲ್ಲ. ಇವತ್ತು ಕೂಡ ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಸುತ್ತ ಮುತ್ತ ಅನೇಕರಲ್ಲಿ ಕುತೂಹಲ ಇದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರನ್ನ ಹಾರೈಸಲು ಬಂದ ಗಣ್ಯಾತಿಗಣ್ಯರು ಏನೆಲ್ಲ ಉಡುಗೊರೆ ಕೊಟ್ಟಿರಬಹುದು ಎಂಬ ಜಿಜ್ಞಾಸೆ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಹಿಂದಿ ಚಿತ್ರರಂಗದಿಂದ ಈ ನವಜೋಡಿಗೆ ಸಿಕ್ಕಿರಬಹುದಾದ ಗಿಫ್ಟ್ ಗಳ ಕುರಿತು ಸುದ್ದಿ ಎಲ್ಲೆಡೆ ಹಬ್ಬಿದೆ.

ಮರ್ಸಿಡಿಸ್ ಬೆಂಜ್ ಕಾರು ನೀಡಿರುವ ಶಾರುಖ್..!

ಅಂಬಾನಿ ಮಗನ ಮದುವೆಯಲ್ಲಿ ಕುಣಿದ ಶಾರುಖ್ ಖಾನ್, ಅನಂತ್ ಅಂಬಾನಿ ಅವರಿಗೆ
ಮರ್ಸಿಡಿಸ್ ಬೆಂಜ್ 300 ಎಸ್‌ಎಲ್‌ಆರ್ ಕಾರನ್ನ ಉಡುಗೊರೆಯನ್ನಾಗಿ ನೀಡಿದ್ದಾರೆ. ಬಾಲಿವುಡ್ ನಲ್ಲಿ ಕೇಳಿ ಬರ್ತಿರುವ ಸುದ್ದಿಗಳ ಪ್ರಕಾರ ಈ ಕಾರಿನ ಬೆಲೆ ಐದು ಕೋಟಿ

What was Salman-Shah Rukh s gift to Anant Ambani and Radhika Merchant

ಸಲ್ಮಾನ್ ಖಾನ್ ಕೊಟ್ಟಿದ್ದೇನು..?

ಇನ್ನೂ ಶಾರುಖ್ ಖಾನ್ ಮಾತ್ರ ಅಲ್ಲ ಸಲ್ಮಾನ್ ಖಾನ್ ಕೂಡ ದುಬಾರಿಯಾದ ಉಡುಗೊರೆಯನ್ನೇ ನೀಡಿದ್ದಾರೆ. ವಾಚ್ ಗಳ ಬಗ್ಗೆ ಕ್ರೇಜ್ ಹೊಂದಿರುವ, ದುಬಾರಿ ವಾಚ್ ಗಳನ್ನತೊಡುವ, ತನ್ನ ಕೈಗಡಿಯಾರದಿಂದನೇ ಮಾರ್ಕ್ ಜುಕರ್ ಬರ್ಗ್ ಅವರನ್ನ ದಂಗಾಗಿಸಿದ ಅನಂತ್ ಅಂಬಾನಿಗೆ
ಸಲ್ಮಾನ್ ಖಾನ್ ವಿಶಿಷ್ಠವಾದ ವಾಚ್ ನೀಡಿದ್ದಾರೆ. ಇಷ್ಟೇ ಅಲ್ಲ ರಾಧಿಕಾಗೆ ಸಲ್ಮಾನ್ ವಜ್ರದ ಕಿವಿಯೋಲೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಅನ್ನುವುದು ಸದ್ಯದ ಸುದ್ದಿ

ಕಿಯಾರಾ ಹಾಗೂ ಸಿದ್ಧಾರ್ಥ್ ಕೊಟ್ಟಿದ್ದೇನು..?

ಕಿಯಾರಾ ಬಾಲ್ಯದಿಂದಲೂ ರಾಧಿಕಾ ಮರ್ಚೆಂಟ್ ಅವರ ಸ್ನೇಹಿತೆ ಮತ್ತು ಅವರು ತಮ್ಮ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಈ ಪಾರ್ಟಿಗೆ ಬಂದಿದ್ದರು. ಈ ವಿಶೇಷ ಸಂದರ್ಭದಲ್ಲಿ, ಅವರು ಅನಂತ್ ಮತ್ತು ರಾಧಿಕಾ ಅವರಿಗೆ ಚಿನ್ನದ ಲೇಪಿತ ಮತ್ತು ವಜ್ರ ಲೇಪಿತ ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಉಡುಗೊರೆಯಾಗಿ ನೀಡಿದ್ದಾರೆ!

ರಣ್ಭೀರ್ ಕಪೂರ್ - ಆಲಿಯಾ ಭಟ್..!

ಅನಂತ್ ಅವರ ಹಿರಿಯ ಸಹೋದರ ಆಕಾಶ್ ಅಂಬಾನಿ ಮತ್ತು ಅವರ ಪತ್ನಿ ಶ್ಲೋಕಾ ಮೆಹ್ತಾ ಅವರ ಉತ್ತಮ ಸ್ನೇಹಿತರಾದ ರಣಬೀರ್ ಮತ್ತು ಆಲಿಯಾ, ಶೀಘ್ರದಲ್ಲೇ ವಿವಾಹವಾಗಲಿರುವ ಅನಂತ್ ಮತ್ತು ರಾಧಿಕಾ ದಂಪತಿಗಳಿಗೆ 16 ಲಕ್ಷದಿಂದ 29 ಲಕ್ಷ ರೂಪಾಯಿ ಮೌಲ್ಯದ ಏರ್ ಜೋರ್ಡಾನ್ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. .

What was Salman-Shah Rukh s gift to Anant Ambani and Radhika Merchant

ವಿಕ್ಕಿ ಕೌಶಲ್- ಕತ್ರಿನಾ ಕೈಫ್..!

ಈ ಅದ್ಭುತ ಸಮಾರಂಭದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೋಡಿ ಕೂಡ ತುಂಬಾ ಸುಂದರವಾಗಿ ಕಾಣಿಸಿಕೊಂಡಿತು. ಡಿಎನ್‌ಎ ವರದಿಯ ಪ್ರಕಾರ, ವಿಕ್ಕಿ ಕತ್ರಿನಾ ಅವರು ರಾಧಿಕಾ ಮರ್ಚೆಂಟ್‌ಗೆ ವಜ್ರದ ಬಳೆ ಮತ್ತು ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಣ್ವೀರ್ ಸಿಂಗ್- ದೀಪಿಕಾ ಪಡುಕೋಣೆ..!

ರಾಮ್-ಲೀಲಾ ಜೋಡಿಯು ಅನಂತ್ ಮತ್ತು ರಾಧಿಕಾಗೆ 1 ಕೋಟಿ ರೂಪಾಯಿ ಮೌಲ್ಯದ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ! ನಿಜವಾಗಿ ಈ ವಸ್ತುಗಳನ್ನು ಅನಂತ್ ರಾಧಿಕಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

What was Salman-Shah Rukh s gift to Anant Ambani and Radhika Merchant

ಒಟ್ಟಿನಲ್ಲಿ ಮದುವೆಯ ಮುಂಚೆಯೇ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳು ಅನಂತ್ ಹಾಗೂ ರಾಧಿಕಾಗೆ ಸಿಕ್ಕಿವೆ. ಈಗಲೇ ಹೀಗೆ, ಇನ್ನೂ ಜುಲೈನಲ್ಲಿ ಮದುವೆಯ ಸಮಾರಂಭದಲ್ಲಿ ಯಾವೆಲ್ಲ ಉಡುಗೊರೆಗಳು ಸಿಗಬಹುದು ಎಂದು ನೀವೇ ಊಹಿಸಿ

More from Filmibeat

English summary
From Sha Ruk Khan To Katrina Kaif, Here Is The List Of Costly Gifts Received By Anant Ambani And Radhika Merchant At Their pre-wedding festivities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X