For Quick Alerts
  ALLOW NOTIFICATIONS  
  For Daily Alerts

  ಅಪಾರ ಹಣ ಸಂಪಾದನೆ ವಿಚಾರ ಬಹಿರಂಗ ಪಡಿಸಿದ ರಾಜ್ ಕುಂದ್ರ ವಾಟ್ಸಪ್ ಚಾಟ್

  |

  ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರ ಬಂಧನದ ಬಳಿಕ ಅನೇಕ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಇದೀಗ ರಾಜ್ ಕುಂದ್ರ ತನ್ನ ಪಾರ್ಟನರ್ ಜೊತೆ ಮಾಡಿರುವ ವಾಟ್ಸಪ್ ಚಾಟ್ ಲೀಕ್ ಆಗಿದ್ದು, ಇದರಿಂದ ಇನ್ನು ಅನೇಕರ ಹೆಸರು ಬಹಿರಂಗವಾಗಿದೆ. ಈ ಚಾಟ್‌ಗಳು ಪ್ರಕರಣದ ಪ್ರಮುಖ ಸಾಕ್ಷಿ ಎನ್ನಲಾಗುತ್ತಿದೆ.

  ರಾಜ್ ಕುಂದ್ರ ಮತ್ತು ಯುಕೆಯಲ್ಲಿ ವಾಸಿಸುತ್ತಿರುವ ಸಂಬಂಧಿ, ವ್ಯವಹಾರದ ಪಾಲುದಾರರಾಗಿರುವ ಪ್ರದೀಪ್ ಬಕ್ಷಿ ನಡುವಿನ ಸ್ಫೋಟಕ ವಾಟ್ಸಪ್ ಚಾಟ್ ವೈರಲ್ ಆಗಿದ್ದು, ಅಶ್ಲೀಲ ಚಿತ್ರಗಳನ್ನಿಟ್ಟುಕೊಂಡು ಹೇಗೆ ವ್ಯವಹಾರ ಮಾಡುತ್ತಿದ್ದರು ಮತ್ತು ಅಪಾರ ಹಣ ಸಂಪಾದಿಸುತ್ತಿದ್ದರು ಎನ್ನುವುದು ಬಹಿರಂಗವಾಗಿದೆ.

  ಈ ಚಾಟ್‌ನಲ್ಲಿ ಇನ್ನು ಯಾರೆಲ್ಲ ಭಾಗಿಯಾಗಿದ್ದಾರೆ ಮತ್ತು ಯಾರೆಲ್ಲ ನಟಿ ಮತ್ತು ಮಾಡೆಲ್‌ಗಳು ಇದ್ದಾರೆ ಎನ್ನುವುದು ಬಹಿರಂಗವಾಗಿದೆ. ರಾಜ್ ಕುಂದ್ರ ಒಡೆತನದ್ದು ಎನ್ನಲಾಗುತ್ತಿರುವ ಕೆನ್ರಿನ್ ಪ್ರೊಡಕ್ಷನ್ ಹೌಸ್‌ನ ಭಾರತ ಸಂಸ್ಥೆಯ ಪ್ರತಿನಿಧಿಯಾಗಿ ರಾಜ್ ಕುಂದ್ರ ಪಿಎ ಉಮೇಶ್ ಕಾಮತ್ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯು ಹೇಗೆ ಅಶ್ಲೀಲ ಚಿತ್ರಗಳನ್ನು ತಯಾರಿಸಲು ಏಜೆಂಟರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ ಮತ್ತು ಹಣದ ಸಹಾಯವನ್ನು ಮಾಡುತ್ತೆ ಎನ್ನುವ ವಿಚಾರ ತಿಳಿದುಬಂದಿದೆ.

  ಕುಮಾರಸ್ವಾಮಿಯನ್ನು ಕರಿಯ ಎಂದು ನಿಂದಿಸಿದ ಟ್ರೋಲ್ ಪೇಜ್ ವಿರುದ್ಧ ದೂರು ದಾಖಲು

  ಮಾಡೆಲ್ ಮತ್ತು ನಟಿ ಗೆಹ್ನಾ ವಶಿಶ್ತ್ ಮತ್ತು ಉಮೇಶ್ ಕಾಮೆತ್ ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ, ಅದನ್ನು ಸಾಮಾಜಿಕ ಜಾಲತಾಣದ ಅಪ್ಲಿಕೇಶನ್ ಹಾಟ್ ಶಾಟ್‌ನಲ್ಲಿ ಅಪ್ ಲೋಡ್ ಮಾಡುತ್ತಿದ್ದರು ಎನ್ನುವುದು ಬಹಿರಂಗವಾಗಿದೆ. ರಾಜ್ ಕುಂದ್ರ ಬಂಧನದಿಂದ ಬಾಲಿವುಡ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ಇದರಲ್ಲಿ ಇನ್ನು ಯಾರೆಲ್ಲ ಹೆಸರು ಇದೆ ಇನ್ನುವುದು ಬಹಿರಂಗವಾಗಲಿದೆ.

  English summary
  WhatsApp chat between Raj Kundra and Pradeep Bakshi reveal huge money earned through porn films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X