For Quick Alerts
ALLOW NOTIFICATIONS  
For Daily Alerts

  ನಿರ್ದೇಶಕನ ಅಸಹ್ಯತನ ಬಯಲು ಮಾಡಿದ ನಟಿ ಸುರ್ವಿನ್

  By Sonu
  |

  ಕನ್ನಡದ 'ಪರಮೇಶ ಪಾನ್ ವಾಲಾ' ಚಿತ್ರದ ಮೂಲಕ ಬೆಳ್ಳಿತೆರೆ ಸ್ಪರ್ಶಿಸಿದ ಪಂಜಾಬಿ ಬೆಡಗಿ ಸುರ್ವಿನ್ ಚಾವ್ಲಾ ಕೊಂಚ ಗಟ್ಟಿಗಿತ್ತಿ. ಮೊದಲ ಸಿನಿಮಾಗಳಿಂದಲೇ ಸಖತ್ ಬೋಲ್ಡ್ ಲುಕ್ ಗಳಿಂದ ಎಲ್ಲರನ್ನು ಆಕರ್ಷಿಸಿರುವ ಇವರು 'ಕ್ಯಾಸ್ಟಿಂಗ್ ಕೌಚ್', ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಈ ವಿಚಾರದಲ್ಲಿ ಖಡಕ್ ಆಗಿದ್ದಾರೆ.

  ಚಿತ್ರರಂಗಕ್ಕೆ ಮೊದ-ಮೊದಲು ಕಾಲಿಡುವ ಎಲ್ಲಾ ಸುರ-ಸುಂದರಿ ನಟಿಮಣಿಯರಿಗೆ ಇಂತಹ ಅನುಭವ ಬೇಕಾದಷ್ಟು ಆಗುತ್ತವೆ. ಕೆಲವರು ಹೆದರಿ ಈ ಇಂಡಸ್ಟ್ರಿ ಸಹವಾಸ ಬೇಡಪ್ಪಾ, ಅಂತ ವಾಪಸ್ ಹೋದ್ರೆ, ಇನ್ನೂ ಕೆಲವರು ಅದನ್ನು ಮೆಟ್ಟಿ ನಿಂತು, ಸವಾಲಾಗಿ ಸ್ವೀಕರಿಸಿ, ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಾರೆ. ಇದರಲ್ಲಿ ಸುರ್ವಿನ್ ಎರಡನೇ ಕೆಟಗರಿಗೆ ಸೇರುತ್ತಾರೆ.

  ಇನ್ನು ಈ 'ಕ್ಯಾಸ್ಟಿಂಗ್ ಕೌಚ್' ವಿಚಾರದ ಬಗ್ಗೆ ನಟಿ ಸುರ್ವಿನ್ ಚಾವ್ಲಾ ಅವರು ಈ ಮೊದಲೇ ಎಲ್ಲರೆದುರು ಬಾಯಿ ಬಿಟ್ಟು ಭೇಷ್ ಎನಿಸಿಕೊಂಡಿದ್ದರು. ಬಾಲಿವುಡ್ ಗಿಂತ ಜಾಸ್ತಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ 'ಕ್ಯಾಸ್ಟಿಂಗ್ ಕೌಚ್' (ಅವಕಾಶ ನೀಡುವ ಸಲುವಾಗಿ ನಟಿಯರನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಳ್ಳುವುದು) ಹೆಚ್ಚಾಗಿದೆ ಅಂತ ಸುರ್ವಿನ್ ಸಂಕೋಚ ಇಲ್ಲದೆ ಕಡ್ಡಿ ಮುರಿದಂತೆ ಹೇಳಿದ್ದರು.[ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸುರ್ವಿನ್]

  ಇದೀಗ ಒಬ್ಬ ನಿರ್ದೇಶಕನ ಕರ್ಮಕಾಂಡವನ್ನು ಸುರ್ವಿನ್ ಅವರು ಬಯಲು ಮಾಡಿದ್ದಾರೆ. ಸುರ್ವಿನ್ ಅವರಿಗೆ ನಿರ್ದೇಶಕನೊಬ್ಬ ಮಂಚಕ್ಕೆ ಕರೆದ ವಿಚಾರವನ್ನು ಮಾಧ್ಯಮದ ಮುಂದೆ, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

  ಕಷ್ಟದ ದಿನಗಳು

  ನಟಿ ಸುರ್ವಿನ್ ಚಾವ್ಲಾ ಅವರು ಸೀರಿಯಲ್ ನಲ್ಲಿ ಸಣ್ಣ-ಸಣ್ಣ ಪಾತ್ರ ಮಾಡುತ್ತಾ, ರಿಯಾಲಿಟಿ ಶೋಗಳನ್ನು ನಡೆಸಿಕೊಡ್ತಾ ಇದ್ದ ಆಗಿನ ದಿನಗಳಲ್ಲಿ, ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದರು.[ಸ್ಯಾಂಡಲ್ ವುಡ್ ನಲ್ಲಿ 'ಲೈಂಗಿಕ ಕಿರುಕುಳ' ಬಗ್ಗೆ ಕವಿತಾ ಲಂಕೇಶ್ ಪ್ರತಿಕ್ರಿಯೆ]

  ಅವಕಾಶಕ್ಕಾಗಿ ಅಲೆಯುತ್ತಿದ್ದ ಸುರ್ವಿನ್

  ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಅಂತ ಅದಮ್ಯ ಆಸೆ ಇಟ್ಟುಕೊಂಡಿದ್ದ ಸುರ್ವಿನ್ ಗೆ ಎದುರಾಗಿದ್ದು ಕೆಟ್ಟ ಸನ್ನಿವೇಶ. ತಮಿಳು ನಿರ್ದೇಶಕನೊಬ್ಬ ಅಸಹ್ಯ ಬೇಡಿಕೆ ಇಟ್ಟು ಅವಕಾಶ ಕೊಡುತ್ತೇನೆ ಎಂದಿದ್ದ.[ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ]

  ಮಂಚಕ್ಕೆ ಕರೆದ ನಿರ್ದೇಶಕ

  ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ, ಆದರೆ ಒಂದು ರಾತ್ರಿ ನನ್ನ ಜೊತೆ ಕಳೆಯಬೇಕು ಅಂತ ಆ ನಿರ್ದೇಶಕ, ನಟಿ ಸುರ್ವಿನ್ ಚಾವ್ಲಾ ಅವರಿಗೆ ಬೇಡಿಕೆ ಇಟ್ಟಿದ್ದನಂತೆ. ತನ್ನ ಕೆಟ್ಟ ಚಪಲ ತೀರಿಸಿಕೊಳ್ಳಲು ಅಮಾಯಕ ಹುಡುಗಿಯನ್ನು ಬಳಸಿಕೊಳ್ಳಲು 'ಆ' ನಿರ್ದೇಶಕ ತಯಾರಾಗಿದ್ದ. ಅದೂ ಬರೀ ಒಂದು ದಿನ ಮಾತ್ರವಲ್ಲ, ಇಡೀ ಸಿನಿಮಾ ಮುಗಿಯೋವರೆಗೆ ಆತ ಕರೆದಲ್ಲಿಗೆ ಹೋಗಬೇಕು-ಬರಬೇಕು.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

  ಸ್ನೇಹಿತನಿಗೂ ಹಂಚಲು ತಯಾರಾಗಿದ್ದ ನಿರ್ದೇಶಕ

  ಅಂದಹಾಗೆ ಆ ನಿರ್ದೇಶಕನ ಮನಸ್ಥಿತಿ ಎಷ್ಟು ಅಸಹ್ಯವಾಗಿತ್ತು ಅಂದ್ರೆ, ತನ್ನ ಜೊತೆ ಮಾತ್ರವಲ್ಲದೇ, ತನ್ನ ಸ್ನೇಹಿತನ ಜೊತೆ ಕೂಡ ಸಹಕರಿಸಬೇಕು ಎಂದು ಬೇಡಿಕೆ ಇಟ್ಟಿದ್ದನಂತೆ. ದಕ್ಷಿಣ ಭಾರತದಲ್ಲಿ ಲೈಗಿಂಕ ಕಿರುಕಳ ಎದುರಿಸಿದಷ್ಟು ಬೇರೆಲ್ಲೂ ಎದುರಿಸಿಲ್ಲ, ಅಂತ ಸ್ವತಃ ಸುರ್ವಿನ್ ಅವರೇ ಹೇಳಿಕೊಂಡಿದ್ದಾರೆ.

  ಪಿಜಿಯಿಂದ ಹೊರಬಿದ್ದ ಸುರ್ವಿನ್

  ವೃತ್ತಿ ಬದುಕಿನ ಮೊದ-ಮೊದಲ ದಿನಗಳಲ್ಲಿ ಸುರ್ವಿನ್ ಚಾವ್ಲಾ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಆವಾಗ ರಾತ್ರಿ ಪೂರಾ ಕೆಲಸ ಮಾಡಬೇಕಾಗುತ್ತಿತ್ತಂತೆ. 'ಒಂದೊಂದು ದಿನ ತಡರಾತ್ರಿ ಪಿಜಿ ಸೇರುವ ದಿನಗಳು. ಆದ್ದರಿಂದ ಮುಲಾಜಿಲ್ಲದೆ ಪಿಜಿ ಮಾಲೀಕರು ಸುರ್ವಿನ್ ಚಾವ್ಲಾ ಅವರನ್ನು ಹೊರ ಹಾಕಿದ ದಿನಗಳು ಇದೆ' ಅಂತ ಸುರ್ವಿನ್ ಹೇಳಿಕೊಂಡಿದ್ದಾರೆ.

  ಎಲ್ಲವನ್ನು ಮೆಟ್ಟಿನಿಂತ ದಿಟ್ಟೆ

  ಅಂತೂ-ಇಂತೂ ಎಲ್ಲವನ್ನು ಮೆಟ್ಟಿ ನಿಂತು ಇದೀಗ ಬಾಲಿವುಡ್, ಕಾಲಿವುಡ್ ಹಾಗೂ ಪಂಜಾಬಿ ಸಿನಿಮಾ ರಂಗದಲ್ಲಿ ಸುರ್ವಿನ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನು ಸುರ್ವಿನ್ ಅವರು ಮೊದಲು ಬೆಳ್ಳಿ ತೆರೆಗೆ ಕಾಲಿಟ್ಟಿದ್ದು, ಕನ್ನಡ ಸಿನಿಮಾದ ಮೂಲಕ ಅನ್ನೋದು ಇನ್ನೊಂದು ವಿಶೇಷ.

  ಬೋಲ್ಡ್ ಲುಕ್ ಗಾಗಿ ಸುರ್ವಿನ್ ಗೆ ಬೇಡಿಕೆ

  'ಹೇಟ್ ಸ್ಟೋರಿ 2' ಚಿತ್ರದಲ್ಲಿ ಎರ್ರಾ-ಬಿರ್ರಿ ಬೋಲ್ಡ್ ಅಂಡ್ ಸೆಕ್ಸಿಯಾಗಿ ಮಿಂಚಿದ್ದ ಸುರ್ವಿನ್ ಚಾವ್ಲಾ ಅವರಿಗೆ, ತದನಂತರ ಅಂತಹ ಪಾತ್ರಗಳಿಗೆ ಮತ್ತು ಐಟಂ ಸಾಂಗ್ ಗಳಲ್ಲಿ ಜಾಸ್ತಿ ಅವಕಾಶ ಸಿಗ್ತಾ ಇದೆಯಂತೆ.

  ಕಿರುತೆರೆಯಲ್ಲಿ ಚಾವ್ಲಾ ಕಮಾಲ್

  ಸದ್ಯಕ್ಕೆ ಹಿರಿತೆರೆ ಜೊತೆಗೆ ಕಿರುತೆರೆಯಲ್ಲೂ ಸುರ್ವಿನ್ ಚಾವ್ಲಾ ಅವರು ಮಿಂಚುತ್ತಿದ್ದಾರೆ. ಅನಿಲ್ ಕಪೂರ್ ಜೊತೆ, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ '24' ಸೀಸನ್ 2 ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಪರ್ಚೇದ್' ನಲ್ಲಿ ಕಾಲ್ ಗರ್ಲ್

  ಅಜಯ್ ದೇವಗನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಪರ್ಚೇದ್' ಎಂಬ ಚಿತ್ರದಲ್ಲಿ, ಸುರ್ವಿನ್ ಅವರು ಕಾಲ್ ಗರ್ಲ್ ಪಾತ್ರ ನಿರ್ವಹಿಸುತ್ತಿದ್ದಾರೆ. ಲೀನಾ ಯಾದವ್ ನಿರ್ದೇಶನದ ರಿಯಲ್ ಕಹಾನಿ 'ಪರ್ಚೇದ್' ತೆರೆಗೆ ಬರಲು ತಯಾರಾಗಿದೆ.

  English summary
  Actress Surveen Chawla is doing pretty well for herself as far as acting career is concerned, there was a time when she had to face 'Casting Couch' . Talking about the same in an interview, Surveen Chawla said that she had never faced such 'sleazy' offers in Hindi film industry but in Tamil cinema.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more