For Quick Alerts
  ALLOW NOTIFICATIONS  
  For Daily Alerts

  ನಟಿ ರೇಖಾ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ವಿಚಾರ ಮತ್ತೆ ವೈರಲ್

  |

  ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಬಾಲಿವುಡ್ ಖ್ಯಾತ ನಟಿ ರೇಖಾ ನಡುವಿನ ಪ್ರೀತಿ, ಪ್ರೇಮಾ, ಮದುವೆ ವಿಚಾರ ಮತ್ತೆ ವೈರಲ್ ಆಗಿದೆ. ಒಂದು ಕಾಲದಲ್ಲಿ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದ ಕ್ರಿಕೆಟಿಗ ಇಮ್ರಾನ್ ಖಾನ್. ಪಾಕ್ ನ ಶ್ರೇಷ್ಠ ಆಟಗಾರನಾಗಿದ್ದ ಇಮ್ರಾನ್ ಖಾನ್ ಗೆ ಫಿದಾ ಆಗದ ಹೆಣ್ಣುಮಕ್ಕಳಿರಲಿಲ್ಲ.

  1992ರಲ್ಲಿ ಇಮ್ರಾನ್ ನೇತೃತ್ವದಲ್ಲಿ ಪಾಕ್ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಬೀಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಇಮ್ರಾನ್ ಖಾನ್ ಅವರನ್ನು ಪಾಕ್ ಮಾತ್ರವಲ್ಲದೇ ಬೇರೆ ದೇಶದವರು ತುಂಬಾ ಇಷ್ಟಪಡುತ್ತಿದ್ದರು. ಭಾರತೀಯರೂ ಸಹ ಇಮ್ರಾನ್ ಖಾನ್ ಗೆ ಫಿದಾ ಆಗಿದ್ದರು.

  ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲ್ಲ ಎಂದು ಸಿಬ್ಬಂದಿಯನ್ನು ವಾಪಸ್ ಕಳಿಸಿದ ನಟಿ!ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲ್ಲ ಎಂದು ಸಿಬ್ಬಂದಿಯನ್ನು ವಾಪಸ್ ಕಳಿಸಿದ ನಟಿ!

  ಅಂದು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿತ್ತು. ಪಾಕ್ ಮತ್ತು ಭಾರತ ನಡುವೆ ಸರಣಿಗಳು ನಡೆಯುತ್ತಿತ್ತು. ಉಭಯ ರಾಷ್ಟ್ರಗಳ ಆಟಗಾರರು ಸಹ ಪರಸ್ಪರ ಹತ್ತಿರವಾಗಿದ್ದರು. ಹಾಗಾಗಿ ಗಡಿಗೂ ಮೀರಿ ಸ್ನೇಹಿತರನ್ನು ಹೊಂದಲು ಎರಡು ದೇಶಗಳ ಆಟಗಾರರಿಗೆ ಅವಕಾಶವಿತ್ತು. ಹಾಗಾಗಿ ಇಮ್ರಾನ್ ಬಾಲಿವುಡ್ ನ ಅನೇಕ ನಟಿಯರ ಜೊತೆ ಉತ್ತಮಸ್ನೇಹ ಬಾಂಧವ್ಯ ಹೊಂದಿದ್ದರು. ಮುಂದೆ ಓದಿ...

  ರೇಖಾ ಮತ್ತು ಇಮ್ರಾನ್ ಮದುವೆ ಸುದ್ದಿ

  ರೇಖಾ ಮತ್ತು ಇಮ್ರಾನ್ ಮದುವೆ ಸುದ್ದಿ

  ಇಮ್ರಾನ್ ಖಾನ್ ಬಾಲಿವುಡ್ ನ ಅನೇಕ ನಟಿಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಇಮ್ರಾನ್ ಅಂದರೆ ಬಾಲಿವುಡ್ ನಟಿಯರೂ ಕೂಡ ತುಂಬಾ ಇಷ್ಟಪಡುತ್ತಿದ್ದರು. ಅದೇ ಸಮಯದಲ್ಲಿ ನಟಿ ರೇಖಾ ಮತ್ತು ಇಮ್ರಾನ್ ಖಾನ್ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಬ್ಬರು ಮದುವೆ ಆಗಲು ನಿರ್ಧರಿಸಿದ್ದರು ಎಂದು ಆ ಸಮಯದಲ್ಲಿ ಬಿತ್ತರವಾದ ಲೇಖನ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಸಿನಿಮಾದಲ್ಲಿ ನಟಿಸುತ್ತಿಲ್ಲ, ಕುಟುಂಬವೂ ಇಲ್ಲ, ಆದರೂ ಐಶಾರಾಮಿ ಜೀವನ! ಹೇಗೆ?ಸಿನಿಮಾದಲ್ಲಿ ನಟಿಸುತ್ತಿಲ್ಲ, ಕುಟುಂಬವೂ ಇಲ್ಲ, ಆದರೂ ಐಶಾರಾಮಿ ಜೀವನ! ಹೇಗೆ?

  ರೇಖಾ ಜೊತೆ ಮುಂಬೈನಲ್ಲಿ ಸಮಯ ಕಳೆದಿದ್ದ ಇಮ್ರಾನ್

  ರೇಖಾ ಜೊತೆ ಮುಂಬೈನಲ್ಲಿ ಸಮಯ ಕಳೆದಿದ್ದ ಇಮ್ರಾನ್

  ಸದ್ಯ ವೈರಲ್ ಆಗಿರುವ ಲೇಖನದಲ್ಲಿ, ರೇಖಾ ಮತ್ತು ಇಮ್ರಾನ್ ಬಹುತೇಕ ಮದುವೆ ಹಂತಕ್ಕೆ ಹೋಗಿದ್ದರು ಎನ್ನುವ ವಿಚಾರವಿದೆ. ಇದು ರೇಖಾ ಅವರ ತಾಯಿಗೂ ತುಂಬಾ ಇಷ್ಟವಿತ್ತಂತೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ರೇಖಾ ಜೊತೆ ಒಂದು ತಿಂಗಳು ಮುಂಬೈನಲ್ಲಿ ಸಮಯ ಕಳೆದಿದ್ದರು. ಇಬ್ಬರು ಮುಂಬೈ ಕಡಲತೀರದಲ್ಲಿ ಕಾಣಿಸಿಕೊಂಡಿದ್ದರು ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

  ಇಮ್ರಾನ್ ಖಾನ್ ಹೇಳಿದ್ದೇನು?

  ಇಮ್ರಾನ್ ಖಾನ್ ಹೇಳಿದ್ದೇನು?

  ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಅಂದು ಪ್ರತಿಕ್ರಿಯೆ ನೀಡಿದ್ದ ಇಮ್ರಾನ್ ಖಾನ್, ನಟಿ ರೇಖಾ ಜೊತೆಗಿನ ಕಂಪನಿಗೆ ಸ್ವಲ್ಪ ಸಮಯ ಮಾತ್ರ ಚಂದ. ನಾನು ಅವರ ಜೊತೆಗಿದ್ದ ಸಮಯವನ್ನು ಆನಂದಿಸಿದ್ದೀನಿ. ಬಳಿಕ ನಾನು ಮುಂದುವರೆದಿದ್ದೀನಿ. ಸಿನಿಮಾ ನಟಿಯರನ್ನು ಮದುವೆಯಾಗುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

  ಜಗಳ ಮರೆತು 23 ವರ್ಷದ ಬಳಿಕ ಮತ್ತೆ ಮಾತನಾಡಿದರು ರೇಖಾ-ಶತ್ರುಘ್ನ ಸಿನ್ಹಾಜಗಳ ಮರೆತು 23 ವರ್ಷದ ಬಳಿಕ ಮತ್ತೆ ಮಾತನಾಡಿದರು ರೇಖಾ-ಶತ್ರುಘ್ನ ಸಿನ್ಹಾ

  ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿರೋ ಕಿರಣ್ ರಾಜ್ ಗೆ ಸಲಾಂ | Filmibeat Kannada
  ಬಾಲಿವುಡ್ ನಟಿಯರ ಜೊತೆ ಇಮ್ರಾನ್ ಸ್ನೇಹ

  ಬಾಲಿವುಡ್ ನಟಿಯರ ಜೊತೆ ಇಮ್ರಾನ್ ಸ್ನೇಹ

  ಇಮ್ರಾನ್ ಖಾನ್, ನಟಿ ರೇಖಾ ಜೊತೆ ಮಾತ್ರವಲ್ಲದೆ ಬಾಲಿವುಡ್ ನಟಿಯರಾದ ಶಬಾನಾ ಆಜ್ಮಿ ಮತ್ತು ಜೀನತ್ ಅಮನ್ ಜೊತೆಯೂ ಸಂಬಂಧ ಹೊಂದಿದ್ದರು ಎನ್ನುವ ಸುದ್ದಿ ಕೇಳಿಬಂದಿತ್ತು. 1992ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಇಮ್ರಾನ್ ಖಾನ್ ಬಳಿಕ ರಾಜಕೀಯ ಪ್ರವೇಶ ಮಾಡಿದರು. 2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

  English summary
  When Actress Rekha and ex-Pakistan Cricket captain Imran Khan almost got married.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X