'ಕೋರಿಕೆ ಈಡೇರಿಸು 3 ಸಿನಿಮಾ ಕೊಡ್ತೀನಿ' ಎಂದಿದ್ರು: ಅಧಿತಿ ಬಿಚ್ಚಿಟ್ಟ ಸಂಗತಿ

'Me Too' ಅಭಿಯಾನ ಬಾಲಿವುಡ್ ಇಂಡಸ್ಟ್ರಿಯನ್ನ ಆತಂಕಕ್ಕೆ ಗುರಿ ಮಾಡಿದೆ. ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಹೀಗೆ ಘಟಾನುಘಟಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬರುತ್ತಿದೆ. ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿಸಿದ ಬಾಂಬ್ ಇಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ.

ತನುಶ್ರೀ ದತ್ತಾ ನಂತರ ಈಗ ಅನೇಕ ಯುವತಿಯರು, ನಟಿಯರು ತಮಗಾದ ಕೆಟ್ಟ ಅನುಭವವನ್ನ ಮೀ ಟು ಅಭಿಯಾನದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಈ ರೀತಿ ಕಿರುಕುಳ ಇದೆ ಎಂದು ಆರೋಪ ಮಾಡ್ತಿದ್ದಾರೆ.

ಇದೀಗ, ಬಿಟೌನ್ ಇಂಡಸ್ಟ್ರಿಯ ಸ್ಟಾರ್ ನಟಿ ಅಧಿತಿ ರಾವ್ ಹೈದರಿ ಕೂಡ ಮೀ ಟು ಅಭಿಯಾನದಲ್ಲಿ ತಮಗೆ ಎದುರಾಗಿದ್ದ ಅನುಭವನ್ನ ಬಹಿರಂಗಪಡಿಸಿದ್ದಾರೆ. ಆಗಿನ್ನು ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಿನಿಮಾಗಾಗಿ ಕೋರಿಕೆ ಈಡೇರಿಸುವ ಎಂದಿದ್ದರು ಎಂಬ ಸ್ಫೋಟಕ ವಿಷ್ಯವನ್ನ ಬಿಚ್ಚಿಟ್ಟಿದ್ದಾರೆ. ಅಧಿತಿ ರಾವ್ ಹೈದರಿ ಏನಂದ್ರು.? ಮುಂದೆ ಓದಿ.....

ಗೆದ್ದವರಿಗೆ ಮಾತ್ರ ಯಶಸ್ಸು

ಗೆದ್ದವರಿಗೆ ಮಾತ್ರ ಯಶಸ್ಸು

''ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಹೊಸದಾಗಿ ಇಂಡಸ್ಟ್ರಿಗೆ ಬಂದವರು ಬೆಳೆಯುವುದು ತುಂಬಾ ಕಷ್ಟ. ಹಾಗಾಂತ ಅಸಾಧ್ಯ ಅಂತ ಅಲ್ಲ. ಅದಕ್ಕೆ ನಾನೇ ಒಂದು ಉದಾಹರಣೆ. ಇಲ್ಲಿ ಎದುರಾಗುವ ಪರಿಸ್ಥಿತಿಗಳನ್ನ ಹೇಗೆ ಡೀಲ್ ಮಾಡ್ತೀವಿ ಎನ್ನುವುದರ ಮೇಲೆ ನಮ್ಮ ಕರಿಯರ್ ನಿರ್ಧಾರವಾಗುತ್ತೆ''- ಅಧಿತಿ ರಾವ್ ಹೈದರಿ

ನನ್ನ ಬಯಕೆ ಈಡೇರಿಸು

ನನ್ನ ಬಯಕೆ ಈಡೇರಿಸು

''ಬಾಲಿವುಡ್ ಇಂಡಸ್ಟ್ರಿಯಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಮಯದಲ್ಲಿ ನನಗೊಂದು ಕಟ್ಟ ಅನುಭವಾಗಿದೆ. ನನ್ನ ಆಸೆ ಈಡೇರಿಸಿದ್ರೆ ಮೂರು ಸಿನಿಮಾಗಳಲ್ಲಿ ಅವಕಾಶ ಕೊಡ್ತೀನಿ ಅಂದ್ರು. ತಕ್ಷಣ ಬೇಡವೆಂದು ವಾಪಸ್ ಬಂದೆ. ನಾನು ಇಂಡಸ್ಟ್ರಿಗೆ ಹೊಸಬಳೇ ಹೊರತು, ಆ ರೀತಿ ಕಾಂಪ್ರುಮೈಸ್ ಆಗುವಂತಹ ವಾತಾವರಣದಲ್ಲಿ ಬೆಳೆದಿಲ್ಲ. ಅಂತವರಿಗೆ ಬಗ್ಗದೆ ನನ್ನ ಆತ್ಮರಕ್ಷಣೆ ಮಾಡಿಕೊಂಡು ಮುಂದೆ ಸಾಗಿದೆ'' - ಅಧಿತಿ ರಾವ್ ಹೈದರಿ

ಎಲ್ಲಾ ಕಡೆಯೂ ಇಂತಹ ಜನ ಇರ್ತಾರೆ

ಎಲ್ಲಾ ಕಡೆಯೂ ಇಂತಹ ಜನ ಇರ್ತಾರೆ

''ಮಹಿಳೆಯವರಿಗೆ ಸಿನಿಮಾ ಇಂಡಸ್ಟ್ರಿ ಸೇಫ್ ಅಲ್ಲ ಎಂಬ ವಾದವನ್ನ ನಾನು ಒಪ್ಪುವುದಿಲ್ಲ. ಸಿನಿಮಾ ಇಂಡಸ್ಟ್ರಿ ಆಗಲಿ, ಬೇರೆ ಯಾವುದೇ ಇಂಡಸ್ಟ್ರಿಯಾಗಲಿ ಡಿಫ್ರೆಂಡ್ ಮೈಂಡ್ ಸೆಟ್ ಹೊಂದಿರುವ ಮನುಷ್ಯರು ಇದ್ದೇ ಇರ್ತಾರೆ. ಅದರಲ್ಲಿ ಒಳ್ಳೆಯವರು ಇರ್ತಾರೆ, ಕೆಟ್ಟವರು ಇರ್ತಾರೆ'' - ಅಧಿತಿ ರಾವ್ ಹೈದರಿ

ಸ್ಟಾರ್ ಮೇಕರ್ ಗಳ ಹೆಸರು ಬಯಲು

ಸ್ಟಾರ್ ಮೇಕರ್ ಗಳ ಹೆಸರು ಬಯಲು

ನಾನಾ ಪಾಟೇಕರ್, ಕೈಲಾಶ್ ಖೇರ್, ನಟ ಅಲೋಕ್ ನಾಥ್, ನಿರ್ದೇಶಕ ವಿಕಾಸ್ ಭಾಲ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಅನೇಕರು ಹೆಸರು ಮೀ ಟು ಅಭಿಯಾನದಲ್ಲಿ ಪ್ರಸ್ತಾಪಿಸಲಾಗಿದೆ.

More from Filmibeat

English summary
Me Too Movement: When Aditi Rao Hydari stepped out of three film deal. Aditi Rao refused to generalise the film industry as an unsafe place for women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X