ಬಾಲಿವುಡ್ ಸ್ಟಾರ್ ನಟನ ಸಿನಿಮಾ ರಿಜೆಕ್ಟ್ ಮಾಡಿದ್ದ ಅನುಷ್ಕಾ ಶೆಟ್ಟಿ; ಬಳಿಕ ಹೇಳಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟಿ ಅನುಷ್ಕಾ ಶೆಟ್ಟಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅನುಷ್ಕಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅನುಷ್ಕಾ ಸದ್ಯ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಬಾಹುಬಲಿ ಸಿನಿಮಾ ಬಳಿಕ ಅನುಷ್ಕಾಗೆ ಕೇವಲ ಸೌತ್ ಸಿನಿಮಾರಂಗ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಾಗಿದೆ. ಆದರೆ ಅನುಷ್ಕಾ ಸೌತ್ ಸಿನಿಮಾರಂಗ ಬಿಟ್ಟು ಉತ್ತರದ ಕಡೆ ಮುಖ ಮಾಡಿಲ್ಲ. ಅಂದಹಾಗೆ ಬಾಹುಬಲಿ ಸಿನಿಮಾ ಬಿಡುಗಡೆಗೂ ಮೊದಲು ಅನುಷ್ಕಾಗೆ ಬಾಲಿವುಡ್‌ನಲ್ಲಿ ಬೇಡಿಕೆ ಇತ್ತು. ಆದರೆ ಅನುಷ್ಕಾ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದರು.

ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರಿಗೆ ನಾಯಕಿಯಾಗಿ ನಟಿಸುವ ಆಫರ್ ಬಂದರೂ ಅನುಷ್ಕಾ ತಿರಸ್ಕರಿಸಿದ್ದರು ಎನ್ನುವ ಸುದ್ದಿ ಕಳೆದ ಕೆಲವು ವರ್ಷಗಳ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಜಯ್ ದೇವಗನ್ ನಟನೆಯ, ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅನುಷ್ಕಾ ಹಿಂದೇಟು ಹಾಕಿದ್ದರು, ಇದು ರೋಹಿತ್ ಮತ್ತು ಅಜಯ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನುವ ಸುದ್ದಿ ಹರಿದಾಡಿತ್ತು.

When Anushka Shetty rejected Ajay Devgan starrer Hindi Singham movie

ತಮಿಳಿನಲ್ಲಿ ಸಿಂಗಂ ಸಿನಿಮಾ ಬಿಡುಗಡೆಯಾದ ಬಳಿಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಟ ಸೂರ್ಯ ಸಿಂಗಂ ಆಗಿ ಅಬ್ಬರಿಸಿದ್ದರು. ನಾಯಕಿಯಾಗಿ ಅನುಷ್ಕಾ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಹಿಂದಿ ರಿಮೇಕ್‌ಗೆ ಅನುಷ್ಕಾ ಅವರಿಗೆ ಆಫರ್ ಮಾಡಲಾಗಿತ್ತು ಎನ್ನಲಾಗಿತ್ತು. 2011ರಲ್ಲಿ ಈ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಯಿತು.

ಅನುಷ್ಕಾ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಸಿನಿಮಾ ತಿರಸ್ಕಾರ ಮಾಡಿದ್ರು ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಬಳಿಕ ಸ್ವತಃ ಅನುಷ್ಕಾನೇ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದರು. ಸಿನಿಮಾ ರಿಜೆಕ್ಟ್ ಮಾಡಿದ ಬಗ್ಗೆ ಅಂದು ಪ್ರತಿಕ್ರಿಯೆ ನೀಡಿದ್ದ ಅನುಷ್ಕಾ,"ನಾನು ಸಿಂಗಂ ಸಿನಿಮಾ ರಿಜೆಕ್ಟ್ ಮಾಡಿದೆ ಎಂದು ಮುಂಬೈನಲ್ಲಿ ಸಾಕಷ್ಟು ವರದಿಗಳು ಬಂದಿವೆ. ಆದರೆ ಇದರಲ್ಲಿ ಹೆಚ್ಚಿನವು ನಿಜವಲ್ಲ. ತಪ್ಪಾಗಿ ಅರ್ಥೈಸಲಾಗಿದೆ" ಎಂದು ಹೇಳಿದ್ದರು.

ಇಲ್ಲಿಯವರೆಗೂ ಮುಂಬೈನಿಂದ ಬಂದ ಆಫರ್‌ಗಳು ನಿಜವಾಗಿಯೂ ಆಮಂತ್ರಣಕಾರಿಯಾಗಿರಲಿಲ್ಲ. ಆದರೆ ಅದು ಶೀಘ್ರದಲ್ಲೇ ಬದಲಾಗಬಹುದು. ಇದೀಗ ನಾನು ಬಾಹುಬಲಿ ಮತ್ತು ಸಿಂಗಂ-3 ಕಡೆ ಗಮನ ಹರಿಸಿದ್ದೇನೆ" ಎಂದು ಅನುಷ್ಕಾ ಅಂದು ಪ್ರತಿಕ್ರಿಯೆ ನೀಡುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದರು.

ಬಳಿಕ ಅನುಷ್ಕಾ ರಿಜೆಕ್ಟ್ ಮಾಡಿದ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ಕಾಣಿಸಿಕೊಂಡರು. ಕಾಜಲ್ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿಂಗಂ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು. ರೋಹಿತ್ ಶೆಟ್ಟಿ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಸಿಂಗಂ ಸಿನಿಮಾ ಒಂದಾಗಿದೆ.

More from Filmibeat

English summary
When Anushka Shetty rejected Ajay Devgan starrer Hindi Singham movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X