For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಮೇಲಿದೆ 1.25 ರೂಪಾಯಿ ಸಾಲ.! ಸೈಕಲ್ ಮೆಕ್ಯಾನಿಕ್ ಮುಂದೆ 'ಭಾಯ್'ಗೆ ಮುಜುಗರ.!

  |
  ಕೋಟಿ ಕೋಟಿ ಸಂಭಾವನೆ ಪಡೆಯೋ ಸಲ್ಮಾನ್ ಮಾಡಿರೋ ಸಾಲ ಎಷ್ಟು? | SALMAN KHAN | FILMEBEAT KANNADA

  ಬಾಲಿವುಡ್ ನ ಅತೀ ಶ್ರೀಮಂತ ನಟರ ಪೈಕಿ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ ಒಬ್ಬರು. 'ಬಿಗ್ ಬಾಸ್' ಕಾರ್ಯಕ್ರಮ ಮಾತ್ರದಿಂದಲೇ ವರ್ಷಕ್ಕೆ ಏನಿಲ್ಲ ಅಂದ್ರೂ ಸಲ್ಮಾನ್ ಖಾನ್ 200 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ.

  ಇನ್ನೂ ಸಿನಿಮಾಗಳ ಲೆಕ್ಕಾಚಾರವೇ ಬೇರೆ ಬಿಡಿ. ಒಂದು ಸಿನಿಮಾಗೆ 60-70 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಜೊತೆಗೆ ಬರುವ ಲಾಭದಲ್ಲೂ ಪಾಲು ಪಡೆಯುತ್ತಾರೆ ಸಲ್ಮಾನ್ ಖಾನ್. ಅಲ್ಲಿಗೆ, ಒಂದು ವರ್ಷಕ್ಕೆ ಸಲ್ಮಾನ್ ಖಾನ್ ಗಳಿಕೆ ಕಮ್ಮಿ ಅಂದರೂ 300-400 ಕೋಟಿ ರೂಪಾಯಿ.!

  ಇಂತಿಪ್ಪ ಸಲ್ಮಾನ್ ಖಾನ್ ಸಾಲ ಮಾಡಿದ್ದಾರೆ. ಹಾಗಂದ ಮಾತ್ರಕ್ಕೆ ಸಲ್ಲು ಭಾಯ್ ಮೇಲೆ ಕೋಟ್ಯಾಂತರ ರೂಪಾಯಿ ಸಾಲ ಇದೆ ಅಂತ ಭಾವಿಸಬೇಡಿ. ಸಲ್ಮಾನ್ ಖಾನ್ ಮೇಲಿರುವುದು ಕೇವಲ 1.25 ರೂಪಾಯಿ ಸಾಲ.! ಏನಿದು ಅಂತ ಹುಬ್ಬೇರಿಸುವ ಮುನ್ನ ಪೂರಾ ಮ್ಯಾಟರ್ ಓದ್ಕೊಂಡ್ ಬಿಡಿ....

  ಸಾಲದ ಕಥೆ ಬಿಚ್ಚಿಟ್ಟ ಸಲ್ಮಾನ್ ಖಾನ್

  ಸಾಲದ ಕಥೆ ಬಿಚ್ಚಿಟ್ಟ ಸಲ್ಮಾನ್ ಖಾನ್

  ಮುಂಬೈ ಪೊಲೀಸರಿಗಾಗಿ ಪ್ರತಿ ವರ್ಷ ಉಮಂಗ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದರಂತೆ ಈ ವರ್ಷ ನಡೆದ ಉಮಂಗ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ಮಾಡಿದ ಒಂದು ಸಾಲದ ಘಟನೆಯನ್ನು ಸಲ್ಮಾನ್ ಖಾನ್ ವಿವರಿಸಿದರು.

  ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್

  ಮುಜುಗರ ಪಟ್ಟ ಸಲ್ಮಾನ್ ಖಾನ್

  ಮುಜುಗರ ಪಟ್ಟ ಸಲ್ಮಾನ್ ಖಾನ್

  ಪ್ರತಿ ದಿನ ಬಿಡುವು ಮಾಡಿಕೊಂಡು ನಟ ಸಲ್ಮಾನ್ ಖಾನ್ ವರ್ಕೌಟ್ ಮಾಡುತ್ತಾರೆ. ಆಗಾಗ ಸೈಕಲ್ ಕೂಡ ಹತ್ತಿ ಒಂದು ರೌಂಡ್ ಹಾಕುತ್ತಾರೆ. ಹಾಗೆ, ಇತ್ತೀಚೆಗೆ ಸೈಕ್ಲಿಂಗ್ ಮಾಡುವಾಗ, ಸೈಕಲ್ ಚಕ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಸೈಕಲ್ ಮೆಕ್ಯಾನಿಕ್ ಹತ್ತಿರ ಹೋದಾಗ ತಾವು ಚಿಕ್ಕವಯಸ್ಸಿನಲ್ಲಿ ಸಾಲ ಮಾಡಿರುವ ಸಂಗತಿ ಸಲ್ಮಾನ್ ಖಾನ್ ಗೆ ಗೊತ್ತಾಗಿದೆ. ಸೈಕಲ್ ಮೆಕ್ಯಾನಿಕ್ ಆಡಿದ ಮಾತುಗಳನ್ನು ಕೇಳಿ ಸಲ್ಮಾನ್ ಖಾನ್ ಮುಜುಗರ ಪಟ್ಟುಕೊಂಡಿದ್ದಾರೆ.

  ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್

  ಸಲ್ಮಾನ್ ಖಾನ್ ಹೇಳಿದ್ದೇನು.?

  ಸಲ್ಮಾನ್ ಖಾನ್ ಹೇಳಿದ್ದೇನು.?

  ''ನಾನು ಶಾರ್ಟ್ಸ್ ಹಾಕೊಂಡಿದ್ದೆ. ನನ್ನ ಬಳಿ ದುಡ್ಡು ಇರಲಿಲ್ಲ. ಹೀಗಾಗಿ, ರಿಪೇರಿ ಮಾಡಿಕೊಡಿ ಕಾಕಾ (ಸೈಕಲ್ ಮೆಕ್ಯಾನಿಕ್), ದುಡ್ಡು ಆಮೇಲೆ ಕೊಡುವೆ'' ಅಂತ ಹೇಳಿದೆ. ಆಗ ಆ ಕಾಕಾ, ''ನೀನು ಚಿಕ್ಕವಯಸ್ಸಿನಲ್ಲಿಯೂ ಹೀಗೆ ಮಾಡಿದ್ದೆ. ಒಮ್ಮೆ ಹೀಗೆ ಸೈಕಲ್ ರಿಪೇರಿ ಮಾಡಿಸಿಕೊಂಡು ದುಡ್ಡು ಆಮೇಲೆ ಕೊಡ್ತೀನಿ ಅಂತ ಹೇಳಿ ಹೋಗಿದ್ದೆ. ಇಲ್ಲಿಯವರೆಗೂ ನೀನು ನನಗೆ 1.25 ರೂಪಾಯಿಯನ್ನು ಕೊಟ್ಟಿಲ್ಲ'' ಎಂದುಬಿಟ್ಟರು. ನನಗೆ ಮುಜುಗರ ಆಯ್ತು'' ಎಂದು ಉಮಂಗ್ ಕಾರ್ಯಕ್ರಮದಲ್ಲಿ ತಮ್ಮ ಸಾಲದ ಕಥೆಯನ್ನ ಸಲ್ಮಾನ್ ಖಾನ್ ಬಿಚ್ಚಿಟ್ಟಿದ್ದಾರೆ.

  'ಬಿಗ್ ಬಾಸ್' ಹೋಸ್ಟ್ ಬದಲಾಗಲ್ಲ: ಸಲ್ಮಾನ್ ಖಾನ್ ಗೆ ಜಾಸ್ತಿ ದುಡ್ಡು ಸಿಕ್ಕಿಲ್ಲ.!'ಬಿಗ್ ಬಾಸ್' ಹೋಸ್ಟ್ ಬದಲಾಗಲ್ಲ: ಸಲ್ಮಾನ್ ಖಾನ್ ಗೆ ಜಾಸ್ತಿ ದುಡ್ಡು ಸಿಕ್ಕಿಲ್ಲ.!

  ಸಾಲ ತೀರಿಸಿದ್ರಾ.?

  ಸಾಲ ತೀರಿಸಿದ್ರಾ.?

  ಬಳಿಕ ಸೈಕಲ್ ಮೆಕ್ಯಾನಿಕ್ ಕಾಕಾಗೆ ದುಡ್ಡು ಕೊಡಲು ಸಲ್ಮಾನ್ ಖಾನ್ ಮುಂದಾದರಂತೆ. ಆದರೆ, ಸಲ್ಮಾನ್ ಖಾನ್ ರಿಂದ ಆ ಕಾಕಾ ದುಡ್ಡು ತೆಗೆದುಕೊಳ್ಳಲಿಲ್ಲವಂತೆ. ಇನ್ನೂ ಚಿಕ್ಕವಯಸ್ಸಿನಲ್ಲಿ ದುಡ್ಡು ಉಳಿಸಲು ಸ್ಕೂಟರ್ ಗೆ ಅರ್ಧ ಪೆಟ್ರೋಲ್ ಮತ್ತು ಅರ್ಧ ಸೀಮೆಎಣ್ಣೆ ಹಾಕಿಕೊಂಡು ಓಡಿಸುತ್ತಿದ್ದ ಕಥೆಯನ್ನೂ ಇದೇ ಉಮಂಗ್ ವೇದಿಕೆಯಲ್ಲಿ ಸಲ್ಮಾನ್ ಬಹಿರಂಗ ಪಡಿಸಿದರು.

  English summary
  When Bollywood Actor Salman Khan forgot to pay Rs 1.25 to cycle mechanic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X