For Quick Alerts
  ALLOW NOTIFICATIONS  
  For Daily Alerts

  ಶಾಹಿದ್ ಸಿನಿಮಾದಿಂದ ವೃತ್ತಿಜೀವನ ಬದಲಾದ್ರೆ, ಸೈಫ್ ಚಿತ್ರದಿಂದ ಜೀವನವೇ ಬದಲಾಯ್ತು- ಕರೀನಾ ಕಪೂರ್

  |

  ಬಾಲಿವುಡ್‌ನ ಖ್ಯಾತ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ತನ್ನದೇ ಆದ ಅಭಿಮಾನಿ ಬಳಗ ಸಂಪಾದಿಸಿರುವ ಕರೀನಾ ಈಗಲೂ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಖ್ಯಾತ ನಟ ಸೈಫ್ ಅಲಿ ಖಾನ್ ಜೊತೆ ಸುಂದರ ದಾಂಪತ್ಯ ಜೀವನ ನಡೆಯುತ್ತಿರುವ ಕರೀನಾ ಇಬ್ಬರು ಮುದ್ದು ಮಕ್ಕಳ ತಾಯಿ ಕೂಡ ಹೌದು.

  ಅಂದಹಾಗೆ ಕರೀನಾ ಕಪೂರ್ ಖಾನ್ ಸೈಫ್ ಅಲ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗುವ ಮೊದಲು ಬಾಲಿವುಡ್‌ನ ಮತ್ತೋರ್ವ ಖ್ಯಾತ ನಟ ಶಾಹಿದ್ ಕಪೂರ್ ಜೊತೆ ಪ್ರೀತಿಯಲ್ಲಿದ್ದರು. ಇಬ್ಬರ ಪ್ರೀತಿ ವಿಚಾರವೇನು ಗುಟ್ಟಾಗಿ ಉಳಿದಿಲ್ಲ. ಒಮ್ಮೆ ಸಂದರ್ಶನದಲ್ಲಿ ಮಾತನಾಡಿದ ಕರೀನಾ ಶಾಹಿದ್ ಜೊತೆಗಿನ ಒಂದು ಸಿನಿಮಾ ವೃತ್ತಿಜೀವನ ಬದಲಾಯಿಸಿದ್ರೆ ಸೈಫ್ ಜೊತೆಗಿನ ಸಿನಿಮಾ ಜೀವನವನ್ನೇ ಬದಲಾಯಿಸಿದೆ ಎಂದು ಹೇಳಿದ್ದರು. ಮುಂದೆ ಓದಿ..

  ಕರೀನಾ ಮತ್ತು ಶಾಹಿದ್ ಲವ್ ಸ್ಟೋರಿ

  ಕರೀನಾ ಮತ್ತು ಶಾಹಿದ್ ಲವ್ ಸ್ಟೋರಿ

  ಬಾಲಿವುಡ್‌ನ ಅನೇಕ ಪ್ರೇಮಕಥೆಗಳಲ್ಲಿ ನಟಿ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಲವ್ ಸ್ಟೋರಿ ಕೂಡ ಒಂದು. ಇಬ್ಬರೂ ಈಗ ಬೇರೆಯವರ ಜೊತೆ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಇಬ್ಬರ ಲವ್ ಸ್ಟೋರಿ ಮಾತ್ರ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತೆ.

  2004ರಲ್ಲಿ ಪ್ರಾರಂಭವಾದ ಪ್ರೇಮ 2006ರಲ್ಲಿ ಅಂತ್ಯ

  2004ರಲ್ಲಿ ಪ್ರಾರಂಭವಾದ ಪ್ರೇಮ 2006ರಲ್ಲಿ ಅಂತ್ಯ

  ಅಂದಹಾಗೆ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಇಬ್ಬರು 2006ರಲ್ಲಿ ಬೇರೆ ಬೇರೆ ಆದರು. ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು 2004ರಲ್ಲಿ. ಅದೇ ಸಮಯದಲ್ಲಿ ಇಬ್ಬರು 'ಫಿದಾ' ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಇಬ್ಬರ ಕೆಮಿಸ್ಟ್ರಿ ಚಿತ್ರಪ್ರೇಕ್ಷರಿಗೆ ಇಷ್ಟವಾಗುವುದಿಲ್ಲ. ಈ ಸಿನಿಮಾ ಕರೀನಾ ಮತ್ತು ಶಾಹಿದ್ ಇಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು. ಯಾವ ಸಿನಿಮಾವೂ ಹೇಳಿಕೊಳ್ಳುವಷ್ಟು ಸಕ್ಸಸ್ ತಂದುಕೊಟ್ಟಿಲ್ಲ.

  'ಜಬ್ ವಿ ಮೆಟ್' ಬಳಿಕ ಬೇರೆಯಾದ ಕರೀನಾ-ಶಾಹಿದ್

  'ಜಬ್ ವಿ ಮೆಟ್' ಬಳಿಕ ಬೇರೆಯಾದ ಕರೀನಾ-ಶಾಹಿದ್

  ಇಬ್ಬರ ಪ್ರೀತಿ 'ಜಬ್ ವಿ ಮೆಟ್' ಸಿನಿಮಾದ ಮುಗಿಯೊದ್ರೊಳಗೆ ಅಂತ್ಯವಾಯ್ತು. ಈ ಸಿನಿಮಾಗೆ ಇಬ್ಬರೂ ಪ್ರೀತಿಯಿಂದ ಸಹಿ ಮಾಡಿದ್ರು. ಆದರೆ ಈ ಸಿನಿಮಾ ಮುಗಿಯೋದ್ರೊಳಗೆ ಬೇರೆ ಬೇರೆ ಆಗಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆಯೇ ಬೇರೆ ಆಗಿದ್ದರು. ಮಾತನಾಡದೆ ಇಬ್ಬರೂ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನುವ ಮಾತು ಕೇಳಿಬಂದಿತ್ತು.

  ತಶಾನ್ ಚಿತ್ರದಲ್ಲಿ ಸೈಫ್ ಭೇಟಿ

  ತಶಾನ್ ಚಿತ್ರದಲ್ಲಿ ಸೈಫ್ ಭೇಟಿ

  ಜಬ್ ವಿ ಮೆಟ್ ಸಿನಿಮಾದ ವೇಳೆಯೇ ಕರೀನಾ ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್ ಮತ್ತು ಅನಿಲ್ ಕುಮಾರ್ ನಟನೆಯ ತಶಾನ್ ಸಿನಿಮಾದ ಚಿತ್ರೀಕರಣದಲ್ಲೂ ನಿರತರಾಗಿದ್ದರು. ಶಾಹಿದ್ ಕಪೂರ್ ರಿಂದ ದೂರ ಆಗುತ್ತಿದ್ದಂತೆ ಕರೀನಾ, ಸೈಫ್ ಜೊತೆ ತುಂಬಾ ಕ್ಲೋಸ್ ಆದರು. ಇಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಮುಂದುವರೆಯಿತೂ ಎಂದರೆ ಇಬ್ಬರೂ ವೈವಾಹಿಕ ಜೀವನಕ್ಕೂ ಕಾಲಿಟ್ಟರು.

  'ಜಬ್ ವಿ ಮೆಟ್' ಸಕ್ಸಸ್

  'ಜಬ್ ವಿ ಮೆಟ್' ಸಕ್ಸಸ್

  ಜಬ್ ವಿ ಮೆಟ್ ಸಿನಿಮಾ ಕರೀನಾ ಕಪೂರ್‌ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದಲ್ಲದೆ, ಕರೀನಾ ವೃತ್ತಿ ಜೀವನವನ್ನೇ ಬದಲಾಯಿಸಿದ ಸಿನಿಮಾ. ಈ ಬಗ್ಗೆ ಮಾತನಾಡಿದ್ದ ಕರೀನಾ, "ಜಬ್ ವಿ ಮೆಟ್ ಮತ್ತು ತಶಾನ್ ಚಿತ್ರದ ನಡುವೆ ಬಹಳಷ್ಟು ಸಂಭವಿಸಿದೆ. ಜಬ್ ವಿ ಮೆಟ್ ಬಳಿಕ ನಾವು ಬೇರೆ ಮಾರ್ಗದಲ್ಲಿ ಸಾಗಿದೆವು" ಎಂದಿದ್ದರು.

  ವಿಜಯ್ ಸೇತುಪತಿಯ ಹೊಸ ರಿಯಾಲಿಟಿ ಶೋ | Filmibeat Kannada
  ಕರೀನಾ ಹೇಳಿದ್ದೇನು?

  ಕರೀನಾ ಹೇಳಿದ್ದೇನು?

  ತಶಾನ್ ಚಿತ್ರಕ್ಕೆ ಕರೀನಾ ಧನ್ಯವಾದ ತಿಳಿಸಿದರು. ತನ್ನ ಜೀವನವನ್ನೇ ಬದಲಾಯಿಸಿದ ಸಿನಿಮಾ ಎಂದು ಹೇಳಿದರು. "ನಾನು ಸೈಫ್ ನನ್ನು ತಶಾನ್ ಚಿತ್ರದಲ್ಲಿ ಭೇಟಿಯಾಗಿದ್ದೆ. ಅದು ನನ್ನ ಜೀವನವನ್ನೇ ಬದಲಾಯಿಸುತ್ತೆ ಎಂದು ಅಂದುಕೊಂಡಿದ್ದೆ. ಯಾಕೆಂದರೆ ನಾನು ನನ್ನ ಕನಸಿನ ಮನುಷ್ಯನನ್ನು ಭೇಟಿಯಾದೆ ಮತ್ತು ನಾನು ಅವನನ್ನೆ ಮದುವೆಯಾದೆ" ಎಂದರು.

  English summary
  When Kareena Kapoor Revealed About Her Breakup With Shahid Kapoor & Romance With Saif Ali Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X