ಅಭಿಮಾನಿ ಕೊಟ್ಟ 72 ಕೋಟಿ ರೂ. ಆಸ್ತಿ ಬೇಡ ಎಂದ ನಟ ಸಂಜಯ್ ದತ್!
ಸಂಜಯ್ ದತ್. ಒಂದ್ಕಾಲದಲ್ಲಿ ಬಾಲಿವುಡ್ ಅಂಗಳದಲ್ಲಿ ಬಹಳ ಕ್ರೇಜ್ ಸೃಷ್ಟಿಸಿಕೊಂಡಿದ್ದ ನಟ. 80, 90ರ ದಶಕದಲ್ಲಿ ಹೀರೊ ಆಗಿ ಮಿಂಚಿದ ಸಂಜು ಬಾಬ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್‌ನಲ್ಲಿ ಖಾತ್‌ತ್ರಯರ ಹವಾ ಶುರುವಾಗುವುದಕ್ಕೂ ಮುನ್ನ ಸಂಜಯ್ ದತ್ ಕಾರುಬಾರು ಜೋರಾಗಿತ್ತು. ಸಾಕಷ್ಟು ವಿವಾದಗಳಿಂದಲೂ ಬಹಳ ಸುದ್ದಿ ಆಗಿದ್ದರು. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಸಂಜುಬಾಬ ಜೈಲಿಗೂ ಹೋಗಿ ಬಂದಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಅವರು ಗೆದ್ದಿದ್ದಾರೆ. ಸಂಜಯ್ ದತ್‌ಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ.

ಸಂಜುಬಾಬಗೆ ಎಂಥಹ ವೀರಾಭಿಮಾನಿಗಳಿದ್ದಾರೆ ಗೊತ್ತಾ? ಮಹಿಳಾ ಅಭಿಮಾನಿಯೊಬ್ಬರು ತಮ್ಮ 72 ಕೋಟಿ ರೂ. ಆಸ್ತಿಯನ್ನು ನೆಚ್ಚಿನ ನಟನ ಹೆಸರಿಗೆ ಬರೆದುಬಿಟ್ಟಿದ್ದರು. ಅಚ್ಚರಿ ಅನ್ನಿಸಿದರು ಇದು ನಿಜ. ಸಾಮಾನ್ಯವಾಗಿ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಾರೆ. ಥಿಯೇಟರ್ ಮುಂದೆ ಬ್ಯಾನರ್ ಕಟ್ಟಿ, ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸುತ್ತಾರೆ. ಕೆಲವರು ನೆಚ್ಚಿನ ನಟನ ಹೆಸರನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ.
ಮಹಿಳಾ ಅಭಿಮಾನಿಗಳು ನೆಚ್ಚಿನ ನಟನ ಫೋಟೊ ಬ್ಯಾಗ್, ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಾರೆ. ಮಹಾ ಅಂದರೆ ತಮ್ಮ ಬೆಡ್ ರೂಮ್‌ನಲ್ಲಿ ಆತನ ಫೋಟೊ ಹಾಕಿಕೊಳ್ಳುತ್ತಾರೆ. ಫಸ್ಟ್ ಡೇ ಸಿನಿಮಾ ನೋಡುವ ಪ್ರಯತ್ನ ಮಾಡುತ್ತಾರೆ. ಆದರೆ ಮುಂಬೈ ಮೂಲದ ನಿಶಾ ಪಾಟೀಲ್(62) ಎಂಬುವವರು ಸಂಜಯ್ ದತ್ ಅವರ ವೀರಾಭಿಮಾನಿ. 2018ರಲ್ಲಿ ಆಕೆ ಸಾಯುವ ಮುನ್ನ ತನ್ನ 72 ಕೋಟಿ ರೂ. ಆಸ್ತಿ ನಟ ಸಂಜಯ್ ದತ್‌ಗೆ ಸೇರಬೇಕು ಎಂದು ವಿಲ್ ಬರೆದಿಟ್ಟಿದ್ದರು. ಅಷ್ಟಕ್ಕೂ ನಿಶಾ ಪಾಟೀಲ್ ಯಾರು ಎನ್ನುವುದೇ ಸಂಜಯ್ ದತ್‌ಗೆ ಗೊತ್ತಿರಲಿಲ್ಲ.
ಅಭಿಮಾನಿ ಹೀಗೆ ತಮ್ಮ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿರುವ ವಿಚಾರ ಗೊತ್ತಾದಾಗ ಸಂಜಯ್ ದತ್ ಅಚ್ಚರಿ ವ್ಯಕ್ತಪಡಿಸಿದ್ದರು. ಆಕೆಯ ಪ್ರೀತಿಗೆ ಸಂತಸಗೊಂಡಿದ್ದರು. ಆದರೆ ಆ ಆಸ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು. ನಿಶಾ ಅವರು ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಆದರೂ ಆಕೆಯ ಪ್ರೀತಿ ನಾನು ಆಭಾರಿ. ಆದರೆ ಆಕೆಯ ಕುಟುಂಬಕ್ಕೆ ಆ ಆಸ್ತಿ ಸಿಗಬೇಕು ಎಂದಿದ್ದರು. ತಮ್ಮ ವಕೀಲರ ಮೂಲಕ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದರು.
ಸಂಜಯ್ ದತ್ ಪರ ವಕೀಲರು ಮಾತನಾಡಿ "ಸಂಜಯ್ ದತ್ ಅವರಿಗೆ ಆ 72 ಕೋಟಿ ರೂ. ಆಸ್ತಿ ಪಡೆಯುವ ಉದ್ದೇಶ ಇಲ್ಲ. ಅದನ್ನು ನಿಶಾ ಅವರ ಕುಟುಂಬಕ್ಕೆ ಹಿಂದಿರುಗಿಸಲು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದಿದ್ದರು. ಯಾವುದೇ ಫಲಾಪೇಕ್ಷೆ ಇಲ್ಲದೇ ಅಭಿಮಾನಿಗಳ ತಮ್ಮ ಅಭಿಮಾನ ಪ್ರದರ್ಶಿಸುತ್ತಾರೆ. ದುಡ್ಡು ಕೊಟ್ಟು ಸಿನಿಮಾ ನೋಡಿ ನೆಚ್ಚಿನ ನಟ, ನಟಿಯರನ್ನು ಆರಾಧಿಸುತ್ತಾರೆ. ಒಂದು ಬಾರಿ ಕೂಡ ಭೇಟಿ ಆಗದೇ ಕೇವಲ ತನ್ನ ನೆಚ್ಚಿನ ಹೀರೋ ಹೆಸರಿಗೆ 71 ಕೋಟಿ ರೂ. ಆಸ್ತಿ ಬರೆದಯುವುದು ಅಂದ್ರೆ ನಿಜಕ್ಕೂ ಆಶ್ಚರ್ಯ ಎಂದು ಬಾಲಿವುಡ್ ಮಂದಿ ಮಾತನಾಡಿಕೊಂಡಿದ್ದರು.
ಸಂಜಯ್ ದತ್ 'ಕೆಜಿಎಫ್'-2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಇದೀಗ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ಸಹ ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.


Click it and Unblock the Notifications











