ದೆಹಲಿ ಚುನಾವಣೆಯಲ್ಲಿ ಸೋಲುಂಡ ಬಳಿಕ ಅಡ್ವಾಣಿ, ವಾಜಪೇಯಿ ವೀಕ್ಷಿಸಿದ್ದ ಸಿನಿಮಾ ಯಾವ್ದು?
ದೇಶಕ್ಕೆ ಬಿಜೆಪಿ ಭೀಷ್ಮ, ಅಜಾತಶತ್ರು, ಭಾರತರತ್ನ ಮಾಜಿ ಉಪಪ್ರಧಾನಿಗಳಾದ ಶ್ರೀ ಎಲ್. ಕೆ. ಅಡ್ವಾಣಿ ಕೊಡುಗೆ ಅಪಾರ. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಇಂದು ಸತತ ಮೂರು ಬಾರಿ ಪಕ್ಷ ಆಳ್ವಿಕೆ ನಡೆಸಲು ಎಲ್. ಕೆ ಅಡ್ವಾಣಿ ಶ್ರಮ ಬಹಳ ಮಹತ್ತರವಾದದ್ದರು. ಅಡ್ವಾಣಿಯವರಿಗೆ ಸಿನಿಮಾ ಆಸಕ್ತಿ ಕೂಡ ಇತ್ತು.
ಶಾಲಾ ದಿನಗಳಲ್ಲೇ ಅಡ್ವಾಣಿ ಅವರು ಸಿನಿಮಾಗಳನ್ನು ನೋಡಲು ಆರಂಭಿಸಿದ್ದರು. ಬಳಿಕ ರಾಜಕೀಯರಂಗ ಪ್ರವೇಶಿಸಿದ ಬಳಿಕವೂ ಆಗಾಗ್ಗೆ ಸಿನಿಮಾ ನೋಡುವ ಆಸಕ್ತಿ ಬೆಳೆಸಿಕೊಂಡಿದ್ದರು. ಒಂದ್ಕಾಲದಲ್ಲಿ ಸಂಜಯ್ ಕುಮಾರ್ ಅವರ ನೆಚ್ಚಿನ ನಟ ಆಗಿದ್ದರು. ಈ ಬಗ್ಗೆ ಹಿಂದೆ ಸಂದರ್ಶನವೊಂದರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಹೇಳಿಕೊಂಡಿದ್ದರು.

ರಾಜಕೀಯ ಬರಹಗಾರರಾಗಿದ್ದ ಅಡ್ವಾಣಿ ಅವರು ಸಿನಿಮಾ ವಿಮರ್ಶೆ ಮಾಡಿದ್ದು ಇದೆ. ಅದಕ್ಕಾಗಿ ಬಹಳ ವರ್ಷಗಳ ಬಳಿಕ ಸಿನಿಮಾಗಳನ್ನು ನೋಡಲು ಆರಂಭಿಸಿದ್ದೆ ಎಂದು ತಿಳಿಸಿದ್ದರು. ಇದೆಲ್ಲದರ ನಡುವೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಒಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದರು. ದೆಹಲಿ ಚುನಾವಣೆಯಲ್ಲಿ ಜನ ಸಂಘ ಸೋತಾಗ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್. ಅಡ್ವಾಣಿ ಸಿನಿಮಾ ನೋಡಲು ಹೋಗಿದ್ದರು ಎಂದಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿ ಕಪೂರ್ ಫ್ಯಾಮಿಲಿ ಸದಸ್ಯರನ್ನು ಭೇಟಿ ಮಾಡಿದ್ದರು. ರಾಜ್ ಕಪೂರ್ ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಕಪೂರ್ ಸದಸ್ಯರು ಭೇಟಿ ಮಾಡಿದ್ದರು. ಈ ವೇಳೆ ಮಾತನಾಡುತ್ತಾ ಮೋದಿ ಒಂದು ವಿಚಾರ ಹಂಚಿಕೊಂಡಿದ್ದರು.
ಪ್ರಧಾನಿ ಮಾತನಾಡುತ್ತಾ "ಅದು ದೆಹಲಿ ಚುನಾವಣೆಯಲ್ಲಿ ಜನಸಂಘ ಸೋಲುಂಡ ಸಮಯ. ಅಡ್ವಾನಿ ಹಾಗೂ ಅಟಲ್ ಜೀ ಈಗ ಏನು ಮಾಡೋಣ ಎಂದು ಅಂದುಕೊಂಡರು. ಆಗ ಸಿನಿಮಾ ನೋಡೋಣ ಎಂದು ನಿರ್ಧರಿಸಿದರು. ನಾವು ರಾಜ್ ಕಪೂರ್ ಅವರ 'ಫಿರ್ ಸುಬಹ್ ಹೋಗಿ' ಚಿತ್ರ ನೋಡಲು ಹೋಗಿದ್ದೆವು ಎಂದು ಹೇಳಿದ್ದಾರೆ.
ಹಾಲಿವುಡ್‌ನ 'ಹೌಸ್ ಆಫ್ ವ್ಯಾಕ್ಸ್' ಸಿನಿಮಾ ನೋಡುವಾಗ ಪ್ರೇಕ್ಷಕರೊಬ್ಬರು ಆಘಾತದಿಂದ ಸಾವನ್ನಪ್ಪಿದ ಸುದ್ದಿ ಓದಿದಾಗ ಅಡ್ವಾಣಿ ಅವರು ಆ ಸಿನಿಮಾ ವೀಕ್ಷಿಸಿದ್ದರಂತೆ. ಆದರೆ ನಾನು ಭಯ ಪಡಲಿಲ್ಲ ಎಂದು ಹೇಳಿಕೊಂಡಿದ್ದರು. ಡೇವಿಡ್ ಲೀನ್ ಅವರ 'ದಿ ಬ್ರಿಡ್ಜ್ ಓವರ್ ದಿ ರಿವರ್ ಕ್ವಾಯ್' ನಾನು ನೋಡಿದ ಅತ್ಯುತ್ತಮ ಹಾಲಿವುಡ್ ಚಿತ್ರ ಎಂದು ಅಡ್ವಾಣಿ ಹೇಳಿದ್ದರು.
ಇತ್ತೀಚಿನ ವರ್ಷಗಳಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು ಕಮ್ಮಿ. ಮನೆಯಲ್ಲೇ ಡಿವಿಡಿ ಹಾಕಿ ಸಿನಿಮಾ ನೋಡುತ್ತೇನೆ. ಮಗಳ ಪ್ರತಿಭಾ ಯಾವುದಾದರೂ ಸಿನಿಮಾ ಬಹಳ ಚೆನ್ನಾಗಿದೆ ಎಂದು ಹೇಳಿದರೆ ಆದ ಚಿತ್ರಮಂದಿರಕ್ಕೆ ಹೋಗುತ್ತೇನೆ. ಕೊನೆಯದಾಗಿ 'ಜಿಂದಗಿ ನಾ ಮಿಲೇಗಿ ದುಬಾರ' ಚಿತ್ರವನ್ನು ತೆರೆಮೇಲೆ ನೋಡಿದ್ದಾಗಿ ಅಡ್ವಾಣಿ ನೆನಪಿಸಿಕೊಂಡಿದ್ದರು. ಆ ಸಿನಿಮಾ ಬಹಳ ಇಷ್ಟವಾಗಿತ್ತು ಎಂದು ತಿಳಿಸಿದ್ದರು.


Click it and Unblock the Notifications











