ಶಿಲ್ಪಾ ಶೆಟ್ಟಿ ಇಮೇಜ್ ಡ್ಯಾಮೇಜ್ ಬಗ್ಗೆ ರಾಜ್ ಕುಂದ್ರ ಶಾಕಿಂಗ್ ಪ್ರತಿಕ್ರಿಯೆ
ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತ್ನಿ ರಾಜ್ ಕುಂದ್ರ ಸದ್ಯ ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಜುಲೈ 19ರಂದು ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು ಸದ್ಯ ಪೋಲಿಸ್ ಕಸ್ಟಡಿಯಲ್ಲಿದ್ದಾರೆ.
Recommended Video
ಅಂದಹಾಗೆ ರಾಜ್ ಕುಂದ್ರಗೆ ವಿವಾದಗಳು ಹೊಸದೇನಲ್ಲ. ಈ ಹಿಂದೆ ಅಂದರೆ 2013ರಲ್ಲಿ ಮ್ಯಾಚ್ ಫಿಕ್ಸಿಂಗ್ ದಂಧೆಯಲ್ಲೂ ರಾಜ್ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ಹೆಸರು ಕೇಳಿಬಂದಿತ್ತು. ರಾಜ್ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ದಂಪತಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಜಸ್ಥಾನ ತಂಡದ ಸಹ ಮಾಲಿಕರಾಗಿದ್ದರು. ಆದರೆ 2013ರಲ್ಲಿ ಈ ತಂಡದ ಹೆಸರು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಕೇಳಿಬಂದಿತ್ತು. ಇದರಲ್ಲಿ ರಾಜ್ ಕುಂದ್ರ ಕೂಡ ಭಾಗಿಯಾಗಿದ್ದು, ಮುಂಬೈ ಪೊಲೀಸರ ಮುಂದೆ ಹಾಜರಾಗಿದ್ದರು.
ಬಳಿಕ 2015ರಲ್ಲಿ ಸರಣಿಯಿಂದ ಶಾಶ್ವತವಾಗಿ ಬ್ಯಾನ್ ಮಾಡಲಾಯಿತು. ನಂತರ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ತಂಡದ ಮಾಲಿಕತ್ವ ತೊರೆದರು. ಇದೆಲ್ಲ ಹಳೆಯ ಕಥೆ. ಆದರೆ ಆ ಸಮಯದಲ್ಲಿ ರಾಜ್ ಕುಂದ್ರ ಝೀ ನ್ಯೂಸ್ ಸಂದರ್ಶನದಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಬಗ್ಗೆ ಹೇಳಿರುವ ಶಾಕಿಂಗ್ ಮಾತುಗಳು ಈಗ ವೈರಲ್ ಆಗುತ್ತಿದೆ. ಮುಂದೆ ಓದಿ...

ಏನೇ ಮಾಡಿದ್ರು ಸಹಿಸಿಕೊಳ್ಳಬೇಕು
ವಿವಾದದ ಬಳಿಕ ಸಂದರ್ಶನದಲ್ಲಿ ಭಾಗಿಯಾಗಿದ್ದ ರಾಜ್ ಕುಂದ್ರಗೆ ವಿವಾದಗಳಿಂದ ಶಿಲ್ಪಾ ಶೆಟ್ಟಿ ಇಮೇಜ್‌ಗೆ ಧಕ್ಕೆ ಆಗಲ್ವಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ರಾಜ್ ಕುಂದ್ರ, 'ನಾವು ಪಾಲುದಾರರು, ಶಿಲ್ಪಾ ನನ್ನ ಪತ್ನಿ, ಇದನ್ನೆಲ್ಲ ಸಹಿಸಿಕೊಳ್ಳಬೇಕು' ಎಂದಿದ್ದರು.

ಶಿಲ್ಪಾ ಹೆಸರು ಕೇಳಿಬರುದು ಸಹಜ
"ಶಿಲ್ಪಾ ಹೆಸರು ಕೇಳಿಬರುದು ಸಹಜ ಅಲ್ವಾ? ನಾನು ಏನೇ ಮಾಡಿದರೂ ಅವಳ ಹೆಸರು ನನ್ನೊಂದಿಗೆ ಕೇಳಿಬರುತ್ತೆ. ಜೀವನದಲ್ಲಿ ಏನೇ ಮಾಡಿದರೂ ನಾವು ದಂಪತಿಗಳಾಗಿದ್ದರಿಂದ ಎಲ್ಲವನ್ನು ನಾವು ಸಹಿಸಿಕೊಳ್ಳಬೇಕಾಗುತ್ತೆ" ಎಂದು ರಾಜ್ ಕುಂದ್ರ ಉತ್ತರಿಸಿದ್ದರು.

ಸದಾ ಬೆಂಬಲಿಸುವ ಹೆಂಡತಿ
ಮಾತು ಮುಂದುವರೆಸಿದ ರಾಜ್ ಕುಂದ್ರ "ಅವಳು ಸದಾ ಬೆಂಬಲಿಸುವ ಹೆಂಡತಿ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ನಾವಿಬ್ಬರೂ ಚೆನ್ನಾಗಿ ತಿಳಿದಿದ್ದೇವೆ. ತಪ್ಪು ಹೇಗೆ ಮಾಡಬೇಕೆಂದು ಖಚಿತವಾಗಿ ನಮಗೆ ತಿಳಿದಿಲ್ಲ" ಎಂದಿದ್ದರು.

ಪತಿ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ
ಇದೀಗ ರಾಜ್ ಕುಂದ್ರ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಶಿಲ್ಪಾ ಶೆಟ್ಟಿ, ಪುಸ್ತಕವೊಂದರ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. 'ಕೋಪದಿಂದ ಹಿಂದೆ ನೋಡಬೇಡ, ಭಯದಿಂದ ಮುಂದೆ ಸಾಗಬೇಡ. ಆದರೆ ಸುತ್ತಮುತ್ತ ಎಚ್ಚರದಿಂದಿರು' ಎಂದು ಜೇಮ್ಸ್ ಥರ್ಬರ್ ಹೇಳಿರುವುದನ್ನು ಪೋಸ್ಟ್ ಮಾಡಿದ್ದಾರೆ.

ಸವಾಲುಗಳನ್ನು ಎದುರಿಸಿ ಉಳುದುಕೊಳ್ಳುತ್ತೇನೆ
''ನಾನು ಈ ಹಿಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಂಡಿದ್ದೇನೆ ಮತ್ತು ಮುಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಳ್ಳುತ್ತೇನೆ. ನಮ್ಮ ಜೀವನವನ್ನು ಬೇರೆಡೆಗೆ ಸೆಳೆಯುವ ಯಾವುದು ನಮಗೆ ಅಗತ್ಯವಿಲ್ಲ'' ಎನ್ನುವ ಸಾಲುಗಳಿರುವ ಸ್ಕ್ರೀನ್ ಶಾಟ್ ಅನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.


Click it and Unblock the Notifications











