For Quick Alerts
  ALLOW NOTIFICATIONS  
  For Daily Alerts

  ಆ ಘಟನೆ ಅಮಿತಾಬ್ ಎದುರು ಸಚಿನ್‌ಗೆ ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು

  |

  ಭಾರತ ಕ್ರಿಕೆಟ್ ತಂಡದ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ದೇವರು ಎಂದೇ ಖ್ಯಾತಿಗಳಿಸಿರುವ ಸಚಿನ್‌ಗೆ ಅಭಿಮಾನಿಗಳು, ಸಿನಿಮಾ ಮತ್ತು ಕ್ರೀಡಾ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  Dr Rajkumar & Sachin Tendulkar ಹೆಸರಲ್ಲಿವೆ ಇದುವರೆಗೆ ಯಾರೂ ಮಾಡಿರದ ದಾಖಲೆ | Filmibeat Kannada

  ಬಾಲಿವುಡ್ ಸಿನಿಮಾ ಮಂದಿಯ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಸಚಿನ್, ಅಮಿತಾಬ್ ಬಚ್ಚನ್‌ಗೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಬ್ಲಾಸ್ಟರ್, ಬಿಗ್ ಬಿ ಅಮಿತಾಬ್ ಎದುರು ಮುಜುಗರಕ್ಕೆ ಒಳಗಾದ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ನಾನು ಆ ಸ್ಟಾರ್ ನಟನ ಹುಚ್ಚು ಅಭಿಮಾನಿ, ಅವರಿಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ; ನಟ ಪವನ್ ಕಲ್ಯಾಣ್ನಾನು ಆ ಸ್ಟಾರ್ ನಟನ ಹುಚ್ಚು ಅಭಿಮಾನಿ, ಅವರಿಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ; ನಟ ಪವನ್ ಕಲ್ಯಾಣ್

  ಪುತ್ರ ಅರ್ಜುನ್‌ನಿಂದ ಸಚಿನ್ ಅಮಿತಾಬ್ ಮುಂದೆ ಮುಜಗರಕ್ಕೆ ಒಳಗಾಗುವಂತೆ ಆಗಿತ್ತು ಎಂದು ಸಚಿನ್ ಈ ಹಿಂದೆ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದರು. ಅಮಿತಾಬ್ ಮತ್ತು ಸಚಿನ್ ಒಂದೇ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಸಚಿನ್ ಪುತ್ರ ಅರ್ಜುನ್‌ಗೆ ಒಂದೂವರೆ ವರ್ಷ.

  ಚಿತ್ರೀಕರಣ ಸಮಯದಲ್ಲಿ ಬ್ರೇಕ್‌ನಲ್ಲಿ ಸಚಿನ್ ಅರ್ಜುನ್‌ನನ್ನು ಕಾಲಮೇಲೆ ಕೂರಿಸಿಕೊಂಡಿದ್ದರು. ಕಿತ್ತಳೆ ಹಣ್ಣು ತಿಂದ ಪುಟ್ಟ ಅರ್ಜುನ್ ಬಳಿಕ ಕೂಲ್ ಆಗಿ ಕೈಯನ್ನು ಅಮಿತಾಬ್ ಕುರ್ತಾಕ್ಕೆ ಒರೆಸುತ್ತಾನೆ. ಇದು ತುಂಬಾ ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು ಎಂದು ಸಚಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  ಈ ಘಟನೆ ಇಂದು ಹುಟ್ಟುಹಬ್ಬದ ದಿನ ಮತ್ತೆ ವೈರಲ್ ಆಗಿದೆ. ಈಗ ಅರ್ಜುನ್‌ಗೆ 21 ವರ್ಷ. ಐಪಿಎಲ್‌ನಲ್ಲೂ ಭಾಗಿಯಾಗಿದ್ದಾರೆ. ಅಮಿತಾಬ್ ಕಂಡರೆ ಸಚಿನ್‌ಗೆ ತುಂಬಾ ಪ್ರೀತಿ, ಗೌರವ. ಹಾಗೆಯೇ ಅಮಿತಾಬ್ ಅವರಿಗೂ ಸಚಿನ್ ಅಂದರೆ ಅಷ್ಟೆ ಪ್ರೀತಿ. ಆಗಾಗ ಸಚಿನ್ ಮೇಲಿನ ಪ್ರೀತಿಯನ್ನು ಅಮಿತಾಬ್ ವ್ಯಕ್ತಪಡಿಸುತ್ತಿರುತ್ತಾರೆ.

  English summary
  When Sachin Tendulkar was embarrassed in front of Amitabh Bachchan Because of his son Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X