For Quick Alerts
  ALLOW NOTIFICATIONS  
  For Daily Alerts

  ಮಗಳ ಭವಿಷ್ಯದ ಬಾಯ್ ಫ್ರೆಂಡ್‌ಗೆ 7 ಷರತ್ತು ವಿಧಿಸಿದ್ದ ಶಾರುಖ್ ಖಾನ್

  |

  ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾ ಜೊತೆಗೆ ಕುಟುಂಬದ ಕಡೆಯೂ ಗಮನ ಹರಿಸುತ್ತಾರೆ. ಪಕ್ಕಾ ಫ್ಯಾಮಿಲಿ ಮ್ಯಾನ್ ಶಾರುಖ್ ಗೆ ಪುತ್ರಿ ಸುಹಾನಾ ಖಾನ್ ಅಂದರೆ ತುಂಬಾ ಪ್ರೀತಿ. ಇತ್ತೀಚಿಗಷ್ಟೆ ಸುಹಾನಾ 21ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಹಾನಾ ಅಲ್ಲೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  ಸುಹಾನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಲೇ ಇದೆ. ಇತ್ತೀಚಿಗೆ ಪ್ರಸಿದ್ಧ ಮ್ಯಾಗಜಿನ್ ಮುಖಪುಟದಲ್ಲಿ ಮಿಂಚಿದ್ದ ಸುಹಾನಾ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಆದರೆ ಮಗಳ ಸಿನಿಮಾ ಜೀವನದ ಬಗ್ಗೆ ಶಾರುಖ್ ಇನ್ನು ಅಧಿಕೃತಗೊಳಿಸಿಲ್ಲ.

  ಮಗಳನ್ನು ಸದಾ ಪ್ರೊಟೆಕ್ಟ್ ಮಾಡುವ ಶಾರುಖ್ 2017ರಲ್ಲಿ ನೀಡಿದ ಸಂದರ್ಶನ ಈಗ ವೈರಲ್ ಆಗಿದೆ. ಮಗಳ ಬಾಯ್ ಫ್ರೆಂಡ್ ಆಗಬೇಕಾದವರಿಗೆ ಶಾರುಖ್ ಹಾಕಿದ 7 ಷರತ್ತುಗಳು ಅಚ್ಚರಿ ಮೂಡಿಸಿದೆ. ಮಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ಶಾರುಖ್ ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ ಎಂದಿದ್ದಾರೆ.

  ಶಾರುಖ್ ಹಾಕಿದ 7 ಷರತ್ತುಗಳು....

  1. ಉದ್ಯೋಗ ಹೊಂದಿರಬೇಕು

  2. ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು

  3. ನಾನು ಎಲ್ಲಾ ಇರುತ್ತೇನೆ

  4. ಲಾಯರ್ ಹೊಂದಿರಬೇಕು

  5. ಅವಳು ನನ್ನ ರಾಜಕುಮಾರಿ, ನಿನ್ನ ವಶವಾಗಲ್ಲ

  6. ನಾನು ಜೈಲಿಗೂ ಹೋಗಲು ಹಿಂಜರಿಯಲ್ಲ

  7. ನೀನು ಅವಳಿಗೆ ಏನಾದರೂ ಮಾಡಿದರೆ ನಾನು ನಿಮಗೆ ಮಾಡುತ್ತೇನೆ

  ಆದರೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಶಾರುಖ್, ಮಗಳ ಬಗ್ಗೆ ಮಾತನಾಡಿ 'ನನ್ನ ಮಗಳನ್ನು ಯಾರನ್ನಾದರೂ ಇಷ್ಟಪಟ್ಟಾಗ ನಾನು ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ನಾನು ಅದನ್ನು ಒಪ್ಪಿಕೊಳ್ಳಲೇ ಬೇಕು' ಎಂದಿದ್ದಾರೆ.

  Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada

  ಶಾರುಖ್ ಸದ್ಯ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 4 ವರ್ಷಗಳ ಬಳಿಕ ಶಾರುಖ್ ಮತ್ತೆ ಬಣ್ಣ ಹಚ್ಚಿದ್ದು, ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಶಾರುಖ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

  English summary
  When Shah Rukh Khan set 7 rules for his daughter Suhana Khan's future boyfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X