ಮುನ್ನಾಭಾಯಿ 3 ಸಿನಿಮಾ ಯಾವಾಗ? ಬಾಯ್ಬಿಟ್ಟ ನಿರ್ಮಾಪಕ

ಮುನ್ನಾ ಭಾಯಿ ಸರಣಿಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಮುನ್ನಾಭಾಯಿ ಸರಣಿಯ ಎರಡನೇ ಸಿನಿಮಾ 'ಲಗೆ ರಹೋ ಮುನ್ನಾಭಾಯಿ' ಬಿಡುಗಡೆ ಆಗಿ 15 ವರ್ಷಗಳಾಗಿವೆ. ಆಗಿನಿಂದಲೂ ಅಭಿಮಾನಿಗಳು 'ಮುನ್ನಾಭಾಯಿ' ಸರಣಿಯ ಮೂರನೇ ಸಿನಿಮಾ ಯಾವಾಗ ಎಂದು ಪ್ರಶ್ನಿಸುತ್ತಲೇ ಇದ್ದಾರೆ.

ಮುನ್ನಾಭಾಯಿ ಸರಣಿಯ ಎರಡೂ ಸಿನಿಮಾ, ಮುನ್ನಾಭಾಯಿ ಎಂಬಿಬಿಎಸ್ ಹಾಗೂ ಲಗೇ ರಹೋ ಮುನ್ನಾಭಾಯಿ ಅನ್ನು ನಿರ್ದೇಶಿಸಿದ್ದು ರಾಜ್ ಕುಮಾರ್ ಹಿರಾನಿ, ನಿರ್ಮಾಣ ಮಾಡಿದ್ದು ವಿದು ವಿನೋದ್ ಚೋಪ್ರಾ. ಇದೀಗ ಮುನ್ನಾಭಾಯಿ 3 ಬಗ್ಗೆ ವಿದು ವಿನೋದ್ ಚೋಪ್ರಾ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮುನ್ನಾಭಾಯಿ3 ಬಗ್ಗೆ ಮಾತನಾಡಿರುವ ವಿದು ವಿನೋದ್ ಚೋಪ್ರಾ, 'ನನಗೆ ಖಂಡಿತವಾಗಿಯೂ ಮುನ್ನಾಭಾಯಿ 3 ನಿರ್ಮಿಸುವ ಆಸೆಯಿದೆ. ಆದರೆ ಚಿತ್ರಕತೆ ನಮಗೆ (ರಾಜ್‌ಕುಮಾರ್ ಹಿರಾನಿ) ತೃಪ್ತಿತರುವ ವರೆಗೆ ಅದನ್ನು ಸಿನಿಮಾ ಮಾಡುವುದಿಲ್ಲ' ಎಂದಿದ್ದಾರೆ ಚೋಪ್ರಾ.

ವರ್ಷಾಂತ್ಯಕ್ಕೆ ಚಿತ್ರಕತೆ ರೆಡಿಯಾಗಬಹುದು: ವಿದು ವಿನೋದ್ ಚೋಪ್ರಾ

ವರ್ಷಾಂತ್ಯಕ್ಕೆ ಚಿತ್ರಕತೆ ರೆಡಿಯಾಗಬಹುದು: ವಿದು ವಿನೋದ್ ಚೋಪ್ರಾ

'ಕತೆಯ ಐಡಿಯಾ ಇದೆ, ಅದನ್ನು ಚಿತ್ರಕತೆಯಾಗಿ ಬೆಳೆಸಲಾಗುತ್ತಿದೆ. ರಾಜ್ ಕುಮಾರ್ ಹಿರಾನಿ ಹಾಗೂ ಕತೆಗಾರ ಅಭಿಜಿತ್ ಜೋಶಿ ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ವರ್ಷದ ಅಂತ್ಯದ ವೇಳೆಗೆ ಚಿತ್ರಕತೆ ಪೂರ್ಣವಾಗಿ ರೆಡಿಯಾಗುವ ಸಾಧ್ಯತೆ ಇದೆ' ಎಂದಿದ್ದಾರೆ ವಿದು ವಿನೋದ್ ಚೋಪ್ರಾ.

'ಜೊಳ್ಳಾದ ಮುನ್ನಾಭಾಯಿ ಸಿನಿಮಾ ಮಾಡುವುದು ಇಷ್ಟವಿಲ್ಲ'

'ಜೊಳ್ಳಾದ ಮುನ್ನಾಭಾಯಿ ಸಿನಿಮಾ ಮಾಡುವುದು ಇಷ್ಟವಿಲ್ಲ'

'ನಮಗೆ ಪೇಲವವಾದ ಮುನ್ನಾಭಾಯಿ ಸಿನಿಮಾ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ಸರಿಯಾದ ಐಡಿಯಾ ಹಾಗೂ ಚಿತ್ರಕತೆಗಾಗಿ ನಾವು ಕಾಯುತ್ತಿದ್ದೇವೆ. ನಾನು ಮುನ್ನಾಭಾಯಿ 3 ಮಾಡಿದರೆ ಕೋಟಿಗಟ್ಟಲೆ ಹಣ ಗಳಿಸಬಲ್ಲೆ, ಆದರೆ ಹಾಗೆಂದು ಜೊಳ್ಳಾದ ಸಿನಿಮಾ ಮಾಡಲು ನನಗೆ ಇಷ್ಟವಿಲ್ಲ' ಎಂದಿದ್ದಾರೆ ಚೋಪ್ರಾ.

ಮುನ್ನಾಭಾಯಿ ಸಂಜಯ್ ದತ್, ಸರ್ಕಿಟ್ ಅರ್ಶದ್ ವಾರ್ಸಿ

ಮುನ್ನಾಭಾಯಿ ಸಂಜಯ್ ದತ್, ಸರ್ಕಿಟ್ ಅರ್ಶದ್ ವಾರ್ಸಿ

ಮುನ್ನಾ ಭಾಯಿ ಸಿನಿಮಾದ ಮುನ್ನಾಭಾಯಿ ಪಾತ್ರ ಹಾಗೂ ಸರ್ಕಿಟ್ ಪಾತ್ರಗಳು ಬಹಳ ಖ್ಯಾತಿ ಗಳಿಸಿವೆ. ಸರ್ಕಿಟ್ ಪಾತ್ರನಿರ್ವಹಿಸುವ ಅರ್ಶದ್ ವಾರ್ಸಿ ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿ, 'ಮುನ್ನಾಭಾಯಿ ಅಭಿಮಾನಿಗಳು ರಾಜ್‌ಕುಮಾರ್ ಹಿರಾನಿಗೆ ವಿದು ವಿನೋದ್ ಚೋಪ್ರಾಗೆ ಬೆದರಿಕೆ ಹಾಕಿ, ಆಗಲಷ್ಟೆ ಅವರು ಸಿನಿಮಾ ಮಾಡುತ್ತಾರೆ' ಎಂದು ತಮಾಷೆಗೆ ಹೇಳಿದ್ದರು.

Recommended Video

ಸಂಜಯ್ ದತ್ ದಾಂಪತ್ಯದಲ್ಲಿ ಮತ್ತೆ ಬಿರುಕು ಮೂಡಿದ್ಯಾ..? | Sanjay Dutt | Manyata Sanjay Dutt
ಶಾರುಖ್ ಖಾನ್‌ಗಾಗಿ ಸಿನಿಮಾ ಮಾಡಲಿದ್ದಾರೆ

ಶಾರುಖ್ ಖಾನ್‌ಗಾಗಿ ಸಿನಿಮಾ ಮಾಡಲಿದ್ದಾರೆ

ಲಗೇ ರಹೋ ಮುನ್ನಾ ಭಾಯಿ ನಂತರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ 3 ಇಡಿಯಟ್ಸ್, ಪಿಕೆ ಮತ್ತು ಸಂಜಯ್ ದತ್ ಜೀವನ ಆಧರಿಸಿದ 'ಸಂಜು' ಸಿನಿಮಾ ನಿರ್ದೇಶಿಸಿದರು. ಈಗ ಶಾರುಖ್ ಖಾನ್‌ ಗಾಗಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಅದಾದ ಬಳಿಕವಷ್ಟೆ ಮುನ್ನಾಭಾಯಿ 3 ಚಿತ್ರೀಕರಣ ಆರಂಭವಾಗಲಿದೆ.

More from Filmibeat

English summary
Producer Vidhu Vinod Chopra talked about why Munna Bhai 3 delaying. He also said we will sure make Munna Bhai 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X