For Quick Alerts
  ALLOW NOTIFICATIONS  
  For Daily Alerts

  ಹಿಂದಿ ಸಿನಿಮಾಗಳ ಸೋಲಿಗೆ ಕಾರಣ ಕಂಡು ಹಿಡಿದ ರಿಷಬ್ ಶೆಟ್ಟಿ: ಫಿಲ್ಮ್ ಮೇಕರ್ಸ್‌ಗೆ ಕಿವಿಮಾತು

  |

  ಸತತ ಸೋಲಿನಿಂದ ಬಾಲಿವುಡ್ ಸಂಕಷ್ಟಕ್ಕೆ ಸಿಲುಕಿದೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳು ಕೂಡ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವಲ್ಲಿ ವಿಫಲವಾಗುತ್ತಿದೆ. ಆದರೆ 'ಕಾಂತಾರ' ಸಿನಿಮಾ ಮಾತ್ರ 22 ದಿನ ಕಳೆದರೂ ಹಿಂದಿ ಬೆಲ್ಟ್‌ನಲ್ಲಿ ಸದ್ದು ಮಾಡುತ್ತಿದೆ. ಇದೀಗ ಸ್ವತಃ ರಿಷಬ್ ಶೆಟ್ಟಿ ಬಾಲಿವುಡ್ ಸಿನಿಮಾಗಳ ಸೋಲಿಗೆ ಕಾರಣ ಏನು ಎನ್ನುವುದನ್ನು ಹೇಳಿದ್ದಾರೆ.

  ವಿಶ್ವದಾದ್ಯಂತ 'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ, ಕೇವಲ 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬರೋಬ್ಬರಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಎರಡರಲ್ಲೂ ಸೂಪರ್ ಸಕ್ಸಸ್ ಕಂಡಿದ್ದಾರೆ. ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಉತ್ತರ ಭಾರತದಲ್ಲೂ ಚಿತ್ರಕ್ಕೆ ನಿರೀಕ್ಷೆಗಿಂತ ಹೆಚ್ಚು ರೆಸ್ಪಾನ್ಸ್ ಸಿಗುತ್ತಿದೆ. ಹಿಂದಿ ವರ್ಷನ್ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರವನ್ನು ತಲೆ ಕೆಳಗಾಗುವಂತೆ ಮಾಡಿದೆ.

  ಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರುಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರು

  ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಹಿಂದಿ ಸಿನಿಮಾಗಳು ಎಲ್ಲಿ ಸೋಲುತ್ತಿದೆ ಎನ್ನುವುದನ್ನು ಹೇಳಿದ್ದಾರೆ. ಪರೋಕ್ಷವಾಗಿ ಬಿಟೌನ್ ಫಿಲ್ಮ್ಸ್ ಮೇಕರ್ಸ್‌ಗೆ ಕ್ಲಾಸ್ ತಗೊಂಡಿದ್ದಾರೆ.

  ನಾವು ಪ್ರೇಕ್ಷಕರಿಗಾಗಿ ಸಿನಿಮಾ ಮಾಡುತ್ತೇವೆ. ನಮಗಾಗಿ ಅಲ್ಲ. ಪ್ರೇಕ್ಷಕರ ಮನೋಭಾವವನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳಬೇಕು. ಅವರ ಮೌಲ್ಯಗಳು, ಜೀವನ ವಿಧಾನ ಅರಿತುಕೊಳ್ಳಬೇಕು. ನಾವು ಸಿನಿಮಾ ನಿರ್ಮಾಪಕರಾಗುವ ಮುನ್ನ ಪ್ರೇಕ್ಷಕರಾಗಿದ್ದೆವು. ಸದ್ಯ ಇತ್ತೀಚೆಗೆ ಹೆಚ್ಚು ಪಾಶ್ಚಾತ್ಯ ಪ್ರಭಾವ ಕಾಣಿಸುತ್ತಿದೆ. ಹಾಲಿವುಡ್ ಸಿನಿಮಾಗಳನ್ನು ನೋಡಿ ಅದನ್ನು ಭಾರತದಲ್ಲೂ ಮಾಡಲು ಫಿಲ್ಮ್ ಮೇಕರ್ಸ್ ಆಸಕ್ತಿ ತೋರಿಸುತ್ತಿದ್ದಾರೆ. ಆ ರೀತಿ ಯಾಕೆ ಮಾಡಬೇಕು? ಪ್ರೇಕ್ಷಕರು ಅದನ್ನೂ ಈಗಾಗಲೇ ಹಾಲಿವುಡ್‌ನಲ್ಲಿ ನೋಡಿಬಿಟ್ಟಿದ್ದಾರೆ. ವಿದೇಶದಲ್ಲಿ ಅವರು ಅದನ್ನು ಬಹಳ ದೊಡ್ಡಮಟ್ಟದಲ್ಲಿ ಮಾಡುತ್ತಿದ್ದಾರೆ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

  "ನಾನು ಬರೆಯುವಾಗ, ಆಯ್ಕೆ ಮಾಡಿಕೊಂಡ ಹಿನ್ನೆಲೆ ನಾನು ನೋಡಿದ ಪ್ರಪಂಚದಿಂದಲೇ ಬಂದಿದ್ದು. ಕಾಂತಾರವನ್ನು ನೋಡಿದರೆ ಅದೊಂದು ಸರಳ ಕಥೆ. ಹೀರೋ ಇದ್ದಾನೆ, ವಿಲನ್ ಇದ್ದಾನೆ, ನಮ್ಮಲ್ಲಿ ರೊಮ್ಯಾನ್ಸ್ ಇದೆ, ರೆಗ್ಯುಲರ್ ಸ್ಟಫ್ ಇದೆ. ಹೊಸದೇನೆಂದರೆ ಹಿನ್ನೆಲೆ, ಲೇಯರ್‌ಗಳು ಮತ್ತು ಪ್ಯಾಕೇಜಿಂಗ್. ಇದೆಲ್ಲವೂ ಒಟ್ಟಾಗಿ ಚಿತ್ರದ ಭಾವನೆಯನ್ನು ಸೃಷ್ಟಿಸುತ್ತದೆ. ಇದು ನನ್ನ ಹಳ್ಳಿಯ ಕಥೆ, ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ, ಆದ್ದರಿಂದ ನಾನು ಅದನ್ನು ಪ್ರಸ್ತುತಪಡಿಸಿದ್ದೇನೆ.

  "ಹೆಚ್ಚು ಪ್ರಾದೇಶಿಕತೆ ಹೆಚ್ಚು ಸಾರ್ವತ್ರಿಕ' ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದ್ದರಿಂದ, ಚಲನಚಿತ್ರ ನಿರ್ಮಾಪಕರು ತಮ್ಮ ಪ್ರದೇಶದಲ್ಲಿ ಈ ಭಾವನೆಯನ್ನು, ಈ ಸಂಸ್ಕೃತಿಯನ್ನು ಕಂಡುಕೊಂಡು ಕಥೆ ಮಾಡಿ ಪ್ರಸ್ತುತಪಡಿಸಿದರೆ,ಬಹುಶಃ ಅದು ಕೆಲಸ ಮಾಡಬಹುದು. ಆದರೆ ಹೀಗೆ ಇದು ನಿಖರವಾಗಿ ಹೇಳಲು ಸಾಧ್ಯವಿಲ್ಲ" ರಿಷಬ್ ಶೆಟ್ಟಿ ವಿವರಿಸಿದ್ದಾರೆ.

  Where Bollywood is going wrong Kantara Actor Rishab shetty advice to filmmakers

  ಈಗ, ಓಟಿಟಿಯಲ್ಲಿ ನಮಗೆ ಪಾಶ್ಚಿಮಾತ್ ಕಂಟೆಂಡ್ ಸಿಗುತ್ತಿದೆ. ಬಹಳಷ್ಟು ಭಾಷೆಗಳಲ್ಲಿ ಸಾಕಷ್ಟು ವೇದಿಕೆಗಳಲ್ಲಿ ಪಡೆಯುತ್ತಿದ್ದೀರಿ. ಆದರೆ ಅಲ್ಲಿ ನಿಮಗೆ ಸಿಗದಿರುವುದು ನನ್ನ ಹಳ್ಳಿಯ ಕಥೆ. ನಮ್ಮತನ, ಪ್ರಾದೇಶಿಕ ಕಥೆ ನಿಮಗೆ ಜಗತ್ತಿನಲ್ಲಿ ಎಲ್ಲಿಯೂ ಸಿಗುವುದಿಲ್ಲ. ನೀವು ಕಥೆಗಾರರಾಗದ್ದರೆ ಮತ್ತು ನಿಮ್ಮ ಪ್ರದೇಶದಲ್ಲಿ ಕಥೆಗಳಿದ್ದರೆ ಅದನ್ನೇ ಜನರ ಬಳಿಗೆ ಕೊಂಡೊಯ್ಯಬೇಕು" ಎಂದು ಫಿಲ್ಮ್‌ ಮೇಕರ್ಸ್‌ಗೆ ರಿಷಬ್ ಕಿವಿಮಾತು ಹೇಳಿದ್ದಾರೆ.

  English summary
  Where Bollywood is going wrong Kantara Actor Rishab shetty advice to filmmakers. know more.
  Sunday, November 6, 2022, 18:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X