For Quick Alerts
  ALLOW NOTIFICATIONS  
  For Daily Alerts

  'ಸೂರರೈ ಪೊಟ್ರು' ಜೊತೆ ಆಸ್ಕರ್ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮತ್ತೆರಡು ಸಿನಿಮಾಗಳು

  |

  ದಕ್ಷಿಣ ಭಾರತದ ಖ್ಯಾತ ನಟ ಸೂರ್ಯ ನಟನೆಯ 'ಸೂರರೈ ಪೊಟ್ರು' ಆಸ್ಕರ್ ಸ್ಪರ್ಧೆಗೆ ಇಳಿದಿರುವ ಮಾಹಿತಿ ಗೊತ್ತಿದೆ. ಈ ಸಿನಿಮಾ ಜೊತೆಗೆ ಭಾರತದ ಮತ್ತೆರಡರು ಸಿನಿಮಾಗಳು ಆಸ್ಕರ್ ರೇಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

  ಅಕಾಡೆಮಿ ಅವಾರ್ಡ್ ಸಮಿತಿ ಪ್ರಶಸ್ತಿ ಗೆಲ್ಲಲು ಅರ್ಹವಾದ ಒಟ್ಟು 366 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ 3 ಸಿನಿಮಾಗಳು ಸ್ಥಾನ ಪಡೆದಿರುವುದು ಭಾರತೀಯರಿಗೆ ಸಂತಸತಂದಿದೆ. ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆದ ಪ್ರಿಯಾಂಕಾ ಚೋಪ್ರಾ ಮತ್ತು ರಾಜ್ ಕುಮಾರ್ ರಾವ್ ನಟನೆಯ 'ವೈಟ್ ಟೈಗರ್' ಮತ್ತು ಒಡಿಯಾ ಭಾಷೆಯ ನೀಲಾ ಮಾಧಾಬ್ ಪಾಂಡ ಅವರ 'ಕಲಿರಾ ಅತಿತಾ' ಸಿನಿಮಾ ಈ ಪಟ್ಟಿಯಲ್ಲಿದೆ.

  ಆಸ್ಕರ್ ರೇಸ್ ನಲ್ಲಿ 'ಸೂರರೈ ಪೊಟ್ರು': ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಸೂರ್ಯ ಮತ್ತು ಅಪರ್ಣಆಸ್ಕರ್ ರೇಸ್ ನಲ್ಲಿ 'ಸೂರರೈ ಪೊಟ್ರು': ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಸೂರ್ಯ ಮತ್ತು ಅಪರ್ಣ

  ವೈಟ್ ಟೈಗರ್ ಸಿನಿಮಾ ಅರವಿಂದ್ ಅಡಿಗ ಅವರ ವೈಟ್ ಟೈಗರ್ ಕಾದಂಬರಿ ಆಧಾರಿತವಾಗಿದೆ. ಇನ್ನು ನಟ ಸೂರ್ಯ ಅಭಿನಯದ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಸಿನಿಮಾ ಸೂರರೈ ಪೊಟ್ರು. ಒಟ್ಟು 3 ಸಿನಿಮಾಗಳು ಆಸ್ಕರ್ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಭಾರತೀಯ ಸಿನಿಮಾರಂಗಕ್ಕೆ ಸಂತಸ ತಂದಿದೆ.

  ಸೂರರೈ ಪೊಟ್ರು ಸಿನಿಮಾ ಉತ್ತಮ ನಟ ಮತ್ತು ನಟಿ ವಿಭಾಗದಲ್ಲಿ ಅರ್ಹತಾ ಪಟ್ಟಿಯಲ್ಲಿ ಜಾಗ ಪಡೆದಿದೆ. ಸೂರರೈ ಪೊಟ್ರು ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಸಂಗೀತ, ನಿರ್ದೇಶನ, ಅತ್ಯುತ್ತಮ ಕತೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿದಿತ್ತು.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada

  ಸದ್ಯ ಭಾರತದಿಂದ ಆಯ್ಕೆಯಾಗಿರುವ 3 ಸಿನಿಮಾಗಳಲ್ಲಿ ಒಂದು ವಿಭಾಗದಲ್ಲಾದರೂ ಆಸ್ಕರ್ ಗೆದ್ದು ಭಾರತಕ್ಕೆ ಹೆಮ್ಮೆ ತರುತ್ತಾರಾ ಎಂದು ಕಾದು ನೋಡಬೇಕು.

  English summary
  Priyanka Chopra's white tiger, soorarai pottru and Kalira Atita filmes are elgeble for Oscars 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X