ಪತ್ನಿಗೆ ವಿಚ್ಛೇದನ ನೀಡಿ ಮಾಡೆಲ್ ತೆಕ್ಕೆಗೆ ಬಿದ್ದ ಹಾರ್ದಿಕ್ ಪಾಂಡ್ಯ ? ಯಾರು ಈ 24ರ ಹರೆಯದ ಚೆಲುವೆ ಮಹೀಕಾ..?

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ, ದಾಂಪತ್ಯ ಜೀವನ ಮುರಿದು ಬಿದ್ದಾಗ, ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮ*ಹತ್ಯೆ ಮಾಡಿಕೊಂಡಿದ್ದು ಇದೆ. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.

ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಸದ್ಯದ ಅತ್ಯುತ್ತಮ ಉದಾಹರಣೆ.

Who is 24 Year Old Mahieka Sharma Hardik Pandya Spotted WIth His Rumoured Girlfriend at the airport

ಹೌದು, ಅನೇಕರಿಗೆ ಗೊತ್ತಿರುವಂತೆ .. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ.

ನತಾಶಾ ತಮ್ಮ ಕೆಲಸ, ಪ್ರವಾಸ, ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದರೆ, ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನಲ್ಲಿ ತಲ್ಲೀನರಾಗಿದ್ದಾರೆ. ಹಾಗಂಥ ಹಾರ್ದಿಕ್ ಪಾಂಡ್ಯ ಆಟದಲ್ಲಿ ಸಂಪೂರ್ಣವಾಗಿ ಕಳೆದು ಹೋಗಿಲ್ಲ. ಬ್ಯಾಟ್..ಬಾಲ್ ಮತ್ತು ಮೈದಾನದ ಸುತ್ತ ಸುತ್ತುತ್ತಿಲ್ಲ. ಬದಲಿಗೆ ಹುಡುಗಿಯರ ಜೊತೆ ಕೂಡ ಸುತ್ತುತ್ತಿದ್ದಾರೆ. ಹೊಸ ಸಂಗಾತಿಯ ಹುಡುಕಾಟವನ್ನು ಕೂಡ ನಡೆಸಿದ್ದಾರೆ. ಈ ಹುಡುಕಾಟದಲ್ಲಿ ಹಾರ್ದಿಕ್ ಪಾಂಡ್ಯಗೆ ಸಿಕ್ಕಿರುವ ಹೊಸ ಚೆಲುವೆಯೇ 24ರ ಹರೆಯದ ಮಹೀಕಾ ಶರ್ಮಾ.

Who is 24 Year Old Mahieka Sharma Hardik Pandya Spotted WIth His Rumoured Girlfriend at the airport

ಹೌದು, ಮಹೀಕಾ ಶರ್ಮಾ .. ಮಾಡೆಲ್ ಮತ್ತು ನಟಿ. ಫ್ಯಾಷನ್ ಮತ್ತು ಮನರಂಜನೆ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಿರುವ ಮಹೀಹಾ ''ತನಿಷ್ಕ್''.. ''ವಿವೋ''.. ಅಂತಹ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜೊತೆ ಗುರುತಿಸಿಕೊಂಡಿದ್ದಾರೆ. ಮನೀಶ್ ಮಲ್ಹೋತ್ರಾ, ಸಬ್ಯಸಾಚಿ, ಅನಿತಾ ಡೋಂಗ್ರೆ, ತರುಣ್ ತಹಿಲಿಯಾನಿ, ರಿತು ಕುಮಾರ್ ಮತ್ತು ಅಮಿತ್ ಅಗರವಾಲ್ ಸೇರಿದಂತೆ ಭಾರತದ ಪ್ರಖ್ಯಾತ ಡಿಸೈನರ್‌ಗಳ ಫ್ಯಾಷನ್ ಶೋದಲ್ಲಿ ರ್‍ಯಾಂಪ್ ವಾಕ್ ಮಾಡಿದ್ದಾರೆ. ಹಲವು ಮ್ಯೂಸಿಕ್ ಆಲ್ಬಂ ಮತ್ತು ಕಿರುಚಿತ್ರಗಳಲ್ಲಿ ಕೂಡ ಮಹೀಕಾ ಕಾಣಿಸಿಕೊಂಡಿದ್ದಾರೆ.

ಇನ್ನು ''ಫ್ರೀ ಪ್ರೆಸ್ ಜರ್ನಲ್'' ವರದಿ ಪ್ರಕಾರ, ಮಹೀಕಾ ಅಕ್ಷರಾಭ್ಯಾಸ ಮಾಡಿದ್ದು ದೆಹಲಿಯ ನೇವಲ್ ಚಿಲ್ಡ್ರನ್ ಶಾಲೆಯಲ್ಲಿ. ಆ ನಂತರ ಗುಜರಾತ್‌ನ ''ಪಂಡಿತ್ ದೀನ್‌ದಯಾಳ್ ಪೆಟ್ರೋಲಿಯಂ'' ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರುವ ಮಹೀಕಾ ಶರ್ಮಾ ಅಮೆರಿಕದ ಮೇರಿಲ್ಯಾಂಡ್‌ನಿಂದ ಮನೋವಿಜ್ಞಾನದಲ್ಲಿ ಪದವಿ ಕೂಡ ಪಡೆದಿದ್ದಾರೆ.

ಇಂಥಾ ಮಹೀಕಾ ಶರ್ಮಾಗೆ ಹಾರ್ದಿಕ್ ಪಾಂಡ್ಯ ಸಿಕ್ಕಿದ್ದು ಎಲ್ಲಿ..? ಇಬ್ಬರ ನಡುವೆ ಸ್ನೇಹದ ಸಂಬಂಧ ಕುದುರಿದ್ಹೇಗೆ ಎನ್ನುವ ಪ್ರಶ್ನೆಗೆ ಸದ್ಯ ಉತ್ತರ ಇಲ್ಲವಾದರೂ ''ಏಷ್ಯಾಕಪ್'' ನಡೆಯುವ ಸಮಯದಲ್ಲಿ ಮಹೀಕಾ ಅವರ ಜೊತೆ ಹಾರ್ದಿಕ್ ಪಾಂಡ್ಯ ಇರುವುದನ್ನು ಅಭಿಮಾನಿಗಳು ಪತ್ತೆ ಮಾಡಿದ್ದರು. ಇದಕ್ಕೆ ಪೂರಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರ ಹಿಂಬಾಲಿಸಲು ಶುರು ಮಾಡಿದ್ದರು.

ಇಲ್ಲಿಂದ ಇಬ್ಬರ ಸಂಬಂಧದ ಕುರಿತು ಹಲವರಲ್ಲಿದ್ದ ಅನುಮಾನ ಇನ್ನೂ ಹೆಚ್ಚಾಗಿತ್ತು. ಹೀಗಿರುವಾಗ ಇದೀಗ ಮಹೀಕಾ ಶರ್ಮಾ ಅವರ ಜೊತೆ ಹಾರ್ದಿಕ್ ಪಾಂಡ್ಯ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ಮಹೀಕಾ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು 24ರ ಹರೆಯದ ಮಹೀಗಾಗೆ 31 ವರ್ಷದ ಹಾರ್ದಿಕ್ ಪಾಂಡ್ಯ ಮನ ಸೋತಿದ್ದಾರೆ. ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

who-is-24-year-old-mahieka-sharma-hardik-pandya-spotted-with-his-rumoured-girlfriend-at-the-airport

ಅಂದ್ಹಾಗೇ ಸದ್ಯ ಮಹೀಕಾ ಶರ್ಮಾ ಜೊತೆ ಸುತ್ತಾಡುತ್ತಿರುವ ಹಾರ್ದಿಕ್ ಪಾಂಡ್ಯ ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ನ ಎಸ್ಸೆಕ್ಸ್‌ ನಗರದಲ್ಲಿರುವ ಭಾರತೀಯ ಮೂಲದ ಜಾಸ್ಮಿನ್ ವಾಲಿಯಾ ಅವರಿಗೆ ಮನ ಸೋತಿದ್ದರು. ಜೊತೆಯಲ್ಲಿ ಹಲವು ಕಡೆ ಓಡಾಡಿದ್ದರು. ಹಾರ್ದಿಕ್ ಪಾಂಡ್ಯ ಅವರನ್ನು ಹುರಿದುಂಬಿಸಲು ಜಾಸ್ಮಿನ್ ಕ್ರೀಡಾಂಗಣಕ್ಕೆ ಕೂಡ ಬಂದಿದ್ದರು. ಇವರ ಆತ್ಮೀಯತೆ, ಸ್ನೇಹ, ಸಲುಗೆಯನ್ನು ನೋಡಿದ್ದ ಹಲವರು ಇಬ್ಬರು ಮದುವೆಯಾಗುತ್ತಾರೆ ಎಂದುಕೊಂಡಿದ್ದರು. ಆದರೆ. ಅದೇನು ಕಥೆನೋ ಗೊತ್ತಿಲ್ಲ. ಈ ಸಂಬಂಧ ಕೂಡ ಮುರಿದು ಬಿತ್ತು.

ಸದ್ಯ ಹಾರ್ದಿಕ್ ಪಾಂಡ್ಯ ಮತ್ತು ಮಹೀಕಾ ಶರ್ಮಾ ಸಂಬಂಧದ ಕುರಿತು ಚರ್ಚೆ ಶುರುವಾಗಿದೆ. ಈ ಬಾರಿ ಮದುವೆಯ ಸುದ್ದಿಯನ್ನು ಹಾರ್ದಿಕ್ ಪಾಂಡ್ಯ ಕೊಡ್ತಾರಾ..? ಅಥವಾ ಮತ್ತೊಮ್ಮೆ ವಿರಹ ಗೀತೆ ಹಾಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Hardik Pandya & model Mahieka Sharma were just seen together at the airport! Get all the details on the new woman in the cricketer's life, her background, & their romance.
Read more about: divorce cricket love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X