ಶಾರುಖ್ ಮಗನೊಂದಿಗೆ ಬಂಧಿಸಲ್ಪಟ್ಟಿರುವ ಯುವತಿ ಮುನ್‌ಮುನ್ ಯಾರು?

ಬಾಲಿವುಡ್ ಡ್ರಗ್ಸ್ ಪ್ರಕರಣ ಆರೋಪಿಗಳ ಪಟ್ಟಿಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೆಸರು ಸೇರ್ಪಡೆಯಾಗಿದ್ದು, ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್, ಎನ್‌ಸಿಬಿ ವಶದಲ್ಲಿದ್ದು, ಜಾಮೀನಿಗಾಗಿ ಹಪಹಪಿಸುತ್ತಿದ್ದಾರೆ.

ಮುಂಬೈ ಸಮೀಪ ಐಶಾರಾಮಿ ಕ್ರೂಸ್ ಶಿಪ್‌ನಲ್ಲಿ ಆರ್ಯನ್ ಖಾನ್ ಹಾಗೂ ಕೆಲವರು ಪಾರ್ಟಿ ಮಾಡುವ ಸಮಯ ಎನ್‌ಸಿಬಿ ಅಧಿಕಾರಿಗಳು ರೇಡ್ ಮಾಡಿ ಆರ್ಯನ್ ಖಾನ್ ಅನ್ನು ಬಂಧಿಸಿದ್ದಾರೆ. ಆರ್ಯನ್ ಖಾನ್ ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ್ದಾರೆ ಎಂದು ಎನ್‌ಸಿಬಿಯು ಆರೋಪ ಮಾಡಿದೆ.

ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಹೆಸರಿನ ಯುವತಿಯನ್ನು ಸಹ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಇಬ್ಬರು ಯಾರು ಎಂಬ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ. ಅದರಲ್ಲಿಯೂ ಯುವತಿ ಮುನ್‌ಮುನ್ ಧಮೇಚಾ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ.

ದೆಹಲಿ ನಿವಾಸಿ ಮುನ್‌ಮುನ್‌

ದೆಹಲಿ ನಿವಾಸಿ ಮುನ್‌ಮುನ್‌

ಮುನ್‌ಮುನ್ ಧಮೇಚಾ ವೃತ್ತಿಯಲ್ಲಿ ಮಾಡೆಲ್ ಆಗಿದ್ದು ಆಕೆ ಮೂಲತಃ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯವರು. ಶಿಕ್ಷಣವನ್ನೆಲ್ಲ ಮಧ್ಯ ಪ್ರದೇಶದ ಸಾಗರ್‌ನಲ್ಲಿಯೇ ಮುಗಿಸಿದ ಮುನ್‌ಮುನ್‌ ಕೆಲ ಕಾಲ ಭೂಪಾಲ್‌ನಲ್ಲಿಯೂ ಇದ್ದರು. ತಾಯಿ ಅಸುನೀಗಿದ ಬಳಿಕ ಮುನ್‌ಮುನ್, ತನ್ನ ಅಣ್ಣ ಪ್ರಿನ್ಸ್ ಧಮೇಚಾ ಜೊತೆಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ಮಾಡೆಲ್ ಆಗಿದ್ದಾರೆ ಮುನ್‌ಮುನ್ ಧಮೇಚಾ

ಮಾಡೆಲ್ ಆಗಿದ್ದಾರೆ ಮುನ್‌ಮುನ್ ಧಮೇಚಾ

ಮಾಡೆಲ್ ಆಗಿರುವ ಮುನ್‌ಮುನ್‌ ಧಮೇಚಾ ಕೆಲವು ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್ ಮಾಡಿದ್ದಾರೆ. ಕೆಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯರಾಗಿರುವ ಮುನ್‌ಮುನ್‌ಗೆ 11 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಕೆಲವು ಬಾಲಿವುಡ್‌ ಸ್ಟಾರ್‌ಗಳನ್ನು ಮುನ್‌ಮುನ್‌ ಫಾಲೋ ಮಾಡುತ್ತಾರೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಆರ್ಯನ್ ಖಾನ್ ಆಗಲಿ ಅರ್ಬಾಜ್ ಸೇಠ್ ಆಗಲಿ ಮುನ್‌ಮುನ್ ಅನ್ನು ಫಾಲೋ ಮಾಡಿಲ್ಲ, ಆಕೆಯೂ ಇವರಿಬ್ಬರನ್ನು ಇನ್‌ಸ್ಟಾಗ್ರಾಂ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡಿಲ್ಲ.

ಮುನ್‌ಮುನ್‌ ಬಳಿ ಡ್ರಗ್ಸ್ ದೊರಕಿತ್ತು

ಮುನ್‌ಮುನ್‌ ಬಳಿ ಡ್ರಗ್ಸ್ ದೊರಕಿತ್ತು

39 ವರ್ಷದ ಮುನ್‌ಮುನ್ ಧಮೇಚಾಗೂ ಶಾರುಖ್ ಖಾನ್ ಪುತ್ರ ಆರ್ಯನ್‌ಗೂ ಗೆಳೆತನವಿಲ್ಲ ಎನ್ನಲಾಗಿದೆ. ಮುನ್‌ಮುನ್‌ ಸಹ ಇತರರಂತೆ ಪಾರ್ಟಿಗೆ ಬಂದಿದ್ದರಷ್ಟೆ. ಎನ್‌ಸಿಬಿ ಅಧಿಕಾರಿಗಳು ಪಾರ್ಟಿ ಮೇಲೆ ರೇಡ್ ಮಾಡಿದಾಗ ಮುನ್‌ಮುನ್‌ ಬಳಿ ಡ್ರಗ್ಸ್ ದೊರಕಿತ್ತು ಹಾಗಾಗಿ ಆಕೆಯನ್ನು ಪೊಲೀಸರು ಮೊದಲು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ

ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ

ಆರ್ಯನ್, ಮುನ್‌ಮುನ್‌ ಜೊತೆಗೆ ಅರ್ಬಾಜ್ ಸೇಠ್ ಮರ್ಚೆಂಟ್ ಎಂಬಾತನ ಬಂಧನವೂ ಆಗಿದ್ದು, ಆತ ಸಾಮಾನ್ಯ ಕುಳವೇನೂ ಅಲ್ಲ. ಮುಂಬೈನ ದೊಡ್ಡ ಉದ್ಯಮಿಯೊಬ್ಬರ ಪುತ್ರನಾಗಿರುವ ಅರ್ಬಾಜ್ ಸೇಠ್, ಆರ್ಯನ್ ಖಾನ್‌ನ ಬೆಸ್ಟ್ ಫ್ರೆಂಡ್ ಆಗಿದ್ದು, ಈ ಹಿಂದೆಯೂ ಈ ಇಬ್ಬರು ಹಲವು ಬಾರಿ ಪಾರ್ಟಿಗಳನ್ನು ಮಾಡಿದ್ದಾರೆ. ಅರ್ಬಾಜ್ ಸೇಠ್, ಶಾರುಖ್ ಖಾನ್‌ರ ಮಗಳು ಸುಹಾನಾ ಜೊತೆಗೂ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯನ್, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕೆಲವು ಚಿತ್ರಗಳಲ್ಲಿ ಅರ್ಬಾಜ್ ಸೇಠ್ ಇದ್ದಾರೆ.

ನಟಿ ಅನನ್ಯಾ ಎಫ್‌ರ ಬಾಯ್‌ಫ್ರೆಂಡ್

ನಟಿ ಅನನ್ಯಾ ಎಫ್‌ರ ಬಾಯ್‌ಫ್ರೆಂಡ್

ಬಾಲಿವುಡ್‌ನ ಖ್ಯಾತ ನಟಿ, ವಿಜಯ್ ದೇವರಕೊಂಡ ನಟಿಸುತ್ತಿರುವ 'ಲೈಗರ್' ಸಿನಿಮಾದ ನಾಯಕಿ ಅನನ್ಯಾ ಪಾಂಡೆ ಜೊತೆಗೆ ಆಪ್ತ ಗೆಳೆತನ ಹೊಂದಿರುವ ಅರ್ಬಾಜ್ ಆಕೆಯೊಂದಿಗೂ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಜವಾನೆ ಜಾನೇಮನ್' ಹಿಂದಿ ಸಿನಿಮಾದ ನಾಯಕಿ ಅನನ್ಯಾ ಎಫ್‌ ಬಾಯ್‌ಫ್ರೆಂಡ್ ಈತ ಎನ್ನಲಾಗುತ್ತಿದೆ. ಅರ್ಬಾಜ್ ಸೇಠ್ ಖುದ್ದು ಆರ್ಯನ್ ಖಾನ್‌ ನನ್ನು ಆ ಪಾರ್ಟಿಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.

More from Filmibeat

English summary
Who is Arbaaz Seth Merchantt and Munmun Dhamecha arrested by NCB in drug case along with Shah Rukh Khan's son Aryan Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X