For Quick Alerts
  ALLOW NOTIFICATIONS  
  For Daily Alerts

  20 ಕೋಟಿ ನಗದು ಹಣ ರಾಶಿ ಹಾಕಿಕೊಂಡಿದ್ದ ನಟಿ ಅರ್ಪಿತಾ ಯಾರು? ಹಿನ್ನೆಲೆ ಏನು?

  |

  ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಾರ್ಥ ಚಟರ್ಜಿಯ ಬಂಧನದ ಬಳಿಕ ಹಲವು ಆಘಾತಕಾರಿ ಅಂಶಗಳು ಒಂದೊಂದಾಗಿ ಬಯಲಾಗುತ್ತಿವೆ.

  ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಆಗಿದ್ದ ಪಾರ್ಥ ಚಟರ್ಜಿಯನ್ನು ಶಿಕ್ಷಕರ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಇಡಿಯು ಸತತ ವಿಚಾರಣೆಗೆ ಒಳಪಡಿಸಿ ಎರಡು ದಿನದ ಹಿಂದೆ ಬಂಧಿಸಿದೆ. ಪಾರ್ಥ ಚಟರ್ಜಿಗೆ ಸೇರಿದ ಹಾಗೂ ಅವರ ಆಪ್ತರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದ್ದು ಕೋಟ್ಯಂತರ ರುಪಾಯಿ ನಗದು ಸೇರಿದಂತೆ ಹಲವು ವಸ್ತುಗಳು, ದಾಖಲೆಗಳನ್ನು ವಶಪಡಿಸಿಕೊಂಡಿದೆ.

  ಹುಟ್ಟುಹಬ್ಬದಂದೇ ಆದಿವಾಸಿ ಜನಾಂಗದ 10 ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡಲು ಮುಂದಾದ ಹಂಸಲೇಖ! ಹುಟ್ಟುಹಬ್ಬದಂದೇ ಆದಿವಾಸಿ ಜನಾಂಗದ 10 ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡಲು ಮುಂದಾದ ಹಂಸಲೇಖ!

  ಪಾರ್ಥ ಚಟರ್ಜಿಯ ಆಪ್ತೆ ಅರ್ಪಿತಾ ಮುಖರ್ಜಿ ಅವರಿಗೆ ಸೇರಿದ ಮನೆಯ ಮೇಲೆ ಇಡಿ ದಾಳಿ ನಡೆಸಿ ರಾಶಿಗಟ್ಟಲೆ ಹಣ ವಶಪಡಿಸಿಕೊಂಡಿದ್ದು, ಈ ಅರ್ಪಿತಾ ಮುಖರ್ಜಿ ನಟಿ ಹಾಗೂ ಮಾಡೆಲ್ ಆಗಿದ್ದರು ಎಂಬ ಅಂಶ ಇದೀಗ ಗೊತ್ತಾಗಿದೆ.

  ಅರ್ಪಿತಾ ಮುಖರ್ಜಿ, ಸಚಿವ ಪಾರ್ಥ ಚಟರ್ಜಿಯ ಆಪ್ತೆಯಾಗಿದ್ದು ಅವರ ಮನೆಯಿಂದ 20 ಕೋಟಿ ರುಪಾಯಿ ನಗದು ಹಣವನ್ನು ಇಡಿ ವಶಪಡಿಸಿಕೊಂಡಿದೆ. ಅರ್ಪಿತಾ ಮುಖರ್ಜಿಯ ಬಂಧನವೂ ಆಗಿದ್ದು ಒಂದು ದಿನದ ಮಟ್ಟಿಗೆ ಇಡಿ ವಶಕ್ಕೆ ನೀಡಲಾಗಿದೆ. ಭಾರಿ ದೊಡ್ಡ ಮೊತ್ತ ಇರಿಸಿಕೊಂಡಿದ್ದ ಈ ಅರ್ಪಿತಾ ಮುಖರ್ಜಿ ನಟಿಯಾಗಿದ್ದು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅರ್ಪಿತಾ

  ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅರ್ಪಿತಾ

  ಅರ್ಪಿತಾ ಮುಖರ್ಜಿ 2008 ರಿಂದ 2014 ರ ವರೆಗೆ ಒಡಿಯಾ ಹಾಗೂ ಪಶ್ಚಿಮ ಬಂಗಾಳದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅರ್ಪಿತಾ ಮುಖರ್ಜಿ ಆರು ಒಡಿಯಾ ಸಿನಿಮಾಗಳಲ್ಲಿ ನಟಿಸಿದ್ದು ಇವುಗಳಲ್ಲಿ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆ ನಂತರ ಕೆಲವು ಬೆಂಗಾಳಿ ಸಿನಿಮಾಗಳಲ್ಲಿಯೂ ಅರ್ಪಿತಾ ನಟಿಸಿದ್ದಾರೆ. ಆದರೆ 2014 ರ ನಂತರ ಇವರು ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ.

  ಉದ್ಯಮಿಯೊಬ್ಬನ ಜೊತೆ ವಿವಾಹ

  ಉದ್ಯಮಿಯೊಬ್ಬನ ಜೊತೆ ವಿವಾಹ

  ಮಧ್ಯಮ ವರ್ಗದ ಕುಟುಂಬದವರಾಗಿದ್ದ ಅರ್ಪಿತಾ, ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್ ಮಾಡುತ್ತಿದ್ದರು. ತಂದೆ ತೀರಿಕೊಂಡ ಬಳಿಕ ಜಾರ್‌ಗ್ರಾಮ್‌ನ ಉದ್ಯಮಿಯೊಬ್ಬರನ್ನು ವಿವಾಹವಾದರು ಆ ಬಳಿಕ ಆತನನ್ನು ತೊರೆದು ಕೊಲ್ಕತ್ತಾಗೆ ಬಂದ ಈಕೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಮಾಡೆಲಿಂಗ್ ಸಹ ಮಾಡುತ್ತಿದ್ದರು. ಆದರೆ ಸಚಿವ ಪಾರ್ಥ ಚಟರ್ಜಿಯ ಪರಿಚಯದ ಬಳಿಕ ಆಕೆ ಸಿನಿಮಾಗಳಲ್ಲಿ ನಟಿಸಲಿಲ್ಲ ಎನ್ನಲಾಗುತ್ತದೆ. ಹಲವು ಕಾರ್ಯಕ್ರಮಗಳಲ್ಲಿ ಪಾರ್ಥ ಚಟರ್ಜಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಜೊತೆ ವೇದಿಕೆಯಲ್ಲಿ ಅರ್ಪಿತಾ ಕಾಣಿಸಿಕೊಂಡಿದ್ದಾರೆ.

  ಐಶಾರಾಮಿ ಬಂಗಲೆ, ಸದಾ ಪಾರ್ಟಿ

  ಐಶಾರಾಮಿ ಬಂಗಲೆ, ಸದಾ ಪಾರ್ಟಿ

  ಕೆಲವೇ ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಿಂದ ಎಂಟು ವರ್ಷಗಳಿಂದ ದೂರವಿದ್ದರೂ ಸಹ ಅರ್ಪಿತಾ ಬಳಿ ದಕ್ಷಿಣ ಕೊಲ್ಕತ್ತದಲ್ಲಿ ಐಶಾರಾಮಿ ಅಪಾರ್ಟ್‌ಮೆಂಟ್ ಇದೆ. ಐಶಾರಾಮಿ ಬದುಕಿನ ವ್ಯಸನಿಯಾಗಿದ್ದ ಅರ್ಪಿತಾ ಸದಾ ಪಬ್‌ಗಳು, ಹುಕ್ಕಾ ಬಾರ್‌ಗಳಿಗೆ ಭೇಟಿ ನೀಡುತ್ತಿದ್ದರು ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಅದು ಮಾತ್ರವೇ ಅಲ್ಲದೆ ಬ್ಯಾಂಕಾಕ್ ಹಾಗೂ ಸಿಂಗಪುರ್‌ಗಳಲ್ಲಿ ಸಹ ಅರ್ಪಿತಾ ಮುಖರ್ಜಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರಂತೆ.

  ಮಹಾತ್ವಾಕಾಂಕ್ಷಿಯಾಗಿದ್ದ ಅರ್ಪಿತಾ

  ಮಹಾತ್ವಾಕಾಂಕ್ಷಿಯಾಗಿದ್ದ ಅರ್ಪಿತಾ

  ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಹಾಗೂ ಸಿನಿಮಾ ಕರ್ಮಿಯೂ ಆಗಿರುವ ಸಂಗಮಿತ್ರ ಚಟರ್ಜಿ, ಅರ್ಪಿತಾ ಬಗ್ಗೆ ಮಾತನಾಡಿದ್ದು, 2013 ರ ಮುಂಚೆ ನನ್ನ ಮೂರು ಸಿನಿಮಾಗಳಿಗೆ ಆಕೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ಆಗ ಆಕೆ ಯುವತಿಯಾಗಿದ್ದರು, ಪ್ರತಿಭಾವಂತೆ ಸಹ ಆಗಿದ್ದರು. ಆದರೆ ನಾನು ಬಿಜೆಪಿ ಪಕ್ಷ ಸೇರ್ಪಡೆಗೊಂಡ ಬಳಿಕ ಆಕೆಯೊಂದಿಗೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಆದರೆ ಆಗಲೂ ಆಕೆ ಮಹಾತ್ವಾಕಾಂಕ್ಷಿಯಾಗಿದ್ದಳು'' ಎಂದಿದ್ದಾರೆ.

  Recommended Video

  ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet
  English summary
  Who is Arpita Mukharji who is arrested ED in West Bengal minister Partha Chatarji's corruption case.
  Monday, July 25, 2022, 20:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X